ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ – ಮಗುವಿನ ತಂದೆಗೂ 1 ತಿಂಗಳು ಲೀವ್‌!

ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ – ಮಗುವಿನ ತಂದೆಗೂ 1 ತಿಂಗಳು ಲೀವ್‌!

ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಇಲ್ಲಿವರೆಗೆ ಕೇವಲ 6 ತಿಂಗಳು ಮಾತ್ರ ಹೆರಿಗೆ ರಜೆ ನೀಡಲಾಗುತ್ತಿತ್ತು. ಆದರೆ ಇದೀಗ ಈ ರಜಾ ಅವಧಿಯನ್ನು 1 ವರ್ಷಕ್ಕೆ ವಿಸ್ತರಿಸಲಾಗಿದೆ. ಅಷ್ಟೇ ಅಲ್ಲದೇ ಮಗುವಿನ ತಂದೆಗೂ 1 ತಿಂಗಳ ಕಾಲ ರಜೆ ನೀಡಲು ಸರ್ಕಾರ ಮುಂದಾಗಿದೆ.

ಅಂದ ಹಾಗೆ ಈ ರಜಾ ಅವಧಿಯನ್ನು ಪರಿಷ್ಕರಣೆ ಮಾಡಿದ್ದು ಸಿಕ್ಕಿಂ ರಾಜ್ಯದಲ್ಲಿ. ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಇನ್ನು ಮುಂದೆ ಮಹಿಳಾ ಉದ್ಯೋಗಿಗಳಿಗೆ 1 ವರ್ಷದ ಹೆರಿಗೆ ರಜೆ ಹಾಗೂ ಪುರುಷರಿಗೆ ಒಂದು ತಿಂಗಳ ಪೆಟರ್ನಿಟಿ ರಜೆಯನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಇನ್ಸ್‌ಪೆಕ್ಟರ್‌, ಮೇಲಾಧಿಕಾರಿಗಳಷ್ಟೇ ಡ್ರಂಕ್ & ಡ್ರೈವ್ ತಪಾಸಣೆ ಮಾಡ್ಬೇಕು – ಸಂಚಾರಿ ಪೊಲೀಸರಿಂದ ಹೊಸ ರೂಲ್ಸ್‌

ಸಿಕ್ಕಿಂ ರಾಜ್ಯ ನಾಗರಿಕ ಸೇವಾ ಅಧಿಕಾರಿಗಳ ಸಂಘದ (ಎಸ್‌ಎಸ್‌ಸಿಎಸ್‌ಒಎ) ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಯೋಜನವನ್ನು ಒದಗಿಸಲು ಸೇವಾ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಸಿಕ್ಕಿಂ ರಾಜ್ಯವು ಭಾರತದಲ್ಲಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 6.32 ಲಕ್ಷ ಜನರಿದ್ದಾರೆ. ಸಿಕ್ಕಿಂ ಮತ್ತು ಅದರ ಜನರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ಅಧಿಕಾರಿಗಳು ರಾಜ್ಯದ ಆಡಳಿತದ ಬೆನ್ನೆಲುಬು. ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿ ಪ್ರಕ್ರಿಯೆ ಚುರುಕುಗೊಳಿಸುವತ್ತ ಗಮನ ಹರಿಸಲಾಗಿದ್ದು, ಬಡ್ತಿ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಮಾಂಗ್ ಹೇಳಿದ್ದಾರೆ.

suddiyaana