ಮೂಕ ಪ್ರಾಣಿಗಳ ಗೆಳೆತನ – ಬೆಕ್ಕಿನ ರಕ್ಷಣೆಗೆ ಮೊಲ ಮಾಡಿದ್ದೇನು?

ಮೂಕ ಪ್ರಾಣಿಗಳ ಗೆಳೆತನ – ಬೆಕ್ಕಿನ ರಕ್ಷಣೆಗೆ ಮೊಲ ಮಾಡಿದ್ದೇನು?

ಕೆಲವೊಮ್ಮೆ ಪ್ರಾಣಿಗಳು ಯೋಚಿಸುವ ರೀತಿ, ಬೇರೊಂದು ಜೀವಿಯ ಕಷ್ಟಕ್ಕೆ ಸ್ಪಂದಿಸುವ ಪರಿ ಎಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಜತೆಗೆ ಹೃದಯ ತುಂಬಿ ಬರುವಂತೆಯೂ ಮಾಡುತ್ತದೆ. ಇಂತಹ ಸಾಕಷ್ಟು ದೃಶ್ಯಗಳು ಸೋಶಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇಲ್ಲೊಂದು ಮೊಲ ಬೆಕ್ಕಿಗೆ ಸಹಾಯ ಮಾಡುತ್ತಿದೆ. ಈ ವಿಡಿಯೋ ಭಾರಿ ವೈರಲ್‌ ಆಗುತ್ತಿದೆ.

ಸಾಮಾನ್ಯವಾಗಿ ಕೆಲ ಬೆಕ್ಕುಗಳು ಮೊಲದ ಮೇಲೆ ದಾಳಿ ಮಾಡುತ್ತವೆ. ಕೆಲವೊಂದು ಬಾರಿ ಅವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಆದರೆ ಇಲ್ಲೊಂದು ಮೊಲ ತಾನು ಬೆಕ್ಕಿನ ಆಹಾರ ಎಂದು ಗೊತ್ತಿದ್ದರೂ ಕೂಡ ಬೆಕ್ಕಿಗೆ ಗೂಡಿನಿಂದ ಹೊರಬರಲು ದಾರಿ ತೋರಲು ಪ್ರಯತ್ನಿಸಿದೆ. ಈ ದೃಶ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಸೂಪರ್‌ ಸ್ಪೀಡ್‌ ಚೀತಾ – ವೈರಲ್‌ ವಿಡಿಯೋ ಹೇಗಿದೆ ನೋಡಿ!

Animals Being Bros ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಈ ದೃಶ್ಯದಲ್ಲಿ ಬೆಕ್ಕೊಂದು ಗೂಡಿನಲ್ಲಿ ಬಂಧಿಯಾಗಿದೆ. ಗೂಡಿನಿಂದ ಹೊರ ಬರಲು ಪ್ರಯತ್ನಿಸಿರುತ್ತದೆ. ಈ ವೇಳೆ ಬೆಕ್ಕಿನ ಸಹಾಯಕ್ಕೆ ಮೊಲ ಮುಂದಾಗಿದೆ. ಗೂಡಿನಲ್ಲಿ ಸಿಲುಕಿರುವ ಬೆಕ್ಕನ್ನು ಹೇಗಾದರೂ ಹೊರ ಕರೆತರಬೇಕು ಅಂತಾ ಮೊಲ ನಿರ್ಧಾರ ಮಾಡಿದಂತಿತ್ತು. ಹೀಗಾಗಿ ಗೂಡಿನ ಬಳಿ ಮಣ್ಣು ಅಗೆಯಲು ಪ್ರಾರಂಭಿಸಿದೆ. ಆಗ ಬೆಕ್ಕು ಕೂಡ ತನ್ನ ಕೈಯಿಂದ ನಿಧಾನಕ್ಕೆ ಮೊಲದ ಮುಖಕ್ಕೆ ಹೊಡೆಯುತ್ತಾ ಬೇಗ ಬೇಗನೆ ಕೆಲಸ ಮುಗಿಸು ಎಂದು ಕೇಳಿಕೊಳ್ಳುವಂತಿತ್ತು. ಇದರಿಂದ ಉತ್ತೇಜಿತಗೊಂಡ ಮೊಲ ಮಣ್ಣು ಕೆದರುತ್ತಾ ಹೋಗಿ ಬೆಕ್ಕಿಗೆ ದಾರಿ ಮಾಡಿಕೊಟ್ಟಿದೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಮುಂದೆ ಏನಾಯಿತು, ಆ ಬೆಕ್ಕು ಮೊಲವನ್ನು ತಿಂದಿತೇ? ಎಂದು ಕೇಳಿದ್ದಾರೆ. ಇದನ್ನು ವಿಡಿಯೋ ಮಾಡುತ್ತಿರುವ ವ್ಯಕ್ತಿ ಬೆಕ್ಕನ್ನು ರಕ್ಷಿಸಬಹುದಾಗಿತ್ತಲ್ಲವೆ? ಎಂದು ಕೇಳಿದ್ದಾರೆ. ಮೊಲ ಬೆಕ್ಕಿಗೆ ಸಹಾಯ ಮಾಡಿದ ನಂತರ ಕೆಲಸ ಮುಗಿಸಿ ಸುಮ್ಮನೆ ಹೊರಟುಹೋಗಿದೆ.

suddiyaana