ಮನುಷ್ಯನ ದೇಹದ ಈ ಭಾಗ ಎಂದಿಗೂ ಬೆವರೋದಿಲ್ಲ! ನಿಮಗೂ ಕೂಡ ಹಾಗೇನಾ?

ಮನುಷ್ಯನ ದೇಹದ ಈ ಭಾಗ ಎಂದಿಗೂ ಬೆವರೋದಿಲ್ಲ! ನಿಮಗೂ ಕೂಡ ಹಾಗೇನಾ?

ದೇಹ ಸರಿಯಾಗಿ ಬೆವರಿದ್ರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತೆ ಅಂತಾ ನಮ್ಮ ಹಿರಿಯರು ಹೇಳುತ್ತಾರೆ. ಕುಳಿತು ಕೆಲಸ ಮಾಡುವ ವ್ಯಕ್ತಿಗಿಂತ ಬೆವರು ಸುರಿಸಿ ಕೆಲಸ ಮಾಡುವ ವ್ಯಕ್ತಿ ಹೆಚ್ಚು ಆರೋಗ್ಯವಾಗಿರುತ್ತಾನೆ. ನಾವು ವ್ಯಾಯಾಮ ಮಾಡಿದಾಗ ಇಲ್ಲವೆ ವಾಕಿಂಗ್ ಮಾಡಿದಾಗ ದೇಹ ಬೆವರುತ್ತದೆ. ದೇಹವನ್ನು ಹೆಚ್ಚು ದಂಡಿಸಿದಾಗ ಹೆಚ್ಚು ಬೆವರುತ್ತದೆ. ಆದರೆ ಹೆಚ್ಚು ಹೆಚ್ಚು ಬೆವರುತ್ತಾ ಇದ್ರೆ ಕಿರಿ ಕಿರಿ ಅನ್ನಿಸುತ್ತದೆ. ಯಾಕಾದ್ರೂ ಇಷ್ಟು ಬೆವರುತ್ತೆ ಅಂತಾ ಅನ್ನಿಸುತ್ತದೆ. ನಿಮಗೆ ಗೊತ್ತಾ ನಮ್ಮ ದೇಹದ ಒಂದು ಭಾಗ ಒಂಚೂರು ಬೆವರುವುದಿಲ್ಲವಂತೆ!

ಇದನ್ನೂ ಓದಿ: ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತೊಳೆಯುವುದೇ ಇಲ್ವಂತೆ! – ನೀವೂ ಹೀಗೆ ಮಾಡ್ತೀರಾ?

ನಾವು ವಾಕಿಂಗ್‌ ಮಾಡಿದಾಗ, ಏನಾದರೂ ಕೆಲಸ ಮಾಡಿದಾಗ ಬೆವರುತ್ತದೆ. ವ್ಯಾಯಾಮ ಮಾಡಿದಾಗಲೂ ಬೆವರು ಬರುತ್ತೆ. ಇನ್ನೂ ಕೆಲವರಿಗೆ ಸುಮ್ಮನೆ ಕುಳಿತಿದ್ದರು ಬೆವರು ಬರುತ್ತಿರುತ್ತೆ. ಬೇಸಿಗೆಯಲ್ಲಿ ಮುಖಕ್ಕೆ ಮೇಕಪ್‌ ಮಾಡಿಕೊಂಡವರ ಬಳಿ ಈ ಬೆವರಿನ ಬಗ್ಗೆ ಕೇಳಬೇಕು. ಯಾಕಂದ್ರೆ ಬೆವರಿನ ಮೇಲೆ ಅವರಿಗೆ ಸಿಕ್ಕಾಪಟ್ಟೆ ಕೋಪ ಇರುತ್ತೆ. ಬೆವರಿನಿಂದ ಮೇಕಪ್‌ ಎಲ್ಲ ಹೋಗಿರುತ್ತೆ. ಬಿಸಲ ಬೇಗೆಯಲ್ಲಿ ಬೆವರು ಸುರಿಸದ ವ್ಯಕ್ತಿ ಸಿಗುವುದು ಬಹಳ ಅಪರೂಪ ಎಂದರೂ ತಪ್ಪಾಗಲ್ಲ. ದೇಹದ ಎಲ್ಲಾ ಭಾಗಗಳು ಬೆವರುತ್ತವೆ. ತೊಡೆ, ಕತ್ತು, ಕಂಕುಳು, ಹೊಟ್ಟೆ, ಕೈ, ಪಾದಗಳು ಎಲ್ಲ ಕಡೆಯಿಂದಲೂ ಬೆವರು ಬರುತ್ತದೆ. ಆದರೆ ಎಷ್ಟೇ ಬೇಸಿಗೆಯಿದ್ದರೂ, ಎಷ್ಟೇ ಬಿಸಿಯಾಗಿದ್ದರೂ ದೇಹದ ಇದೊಂದು ಅಂಗ ಮಾತ್ರ ಎಂದಿಗೂ ಬೆವರೋದಿಲ್ಲ. ಅರೇ ಇದೆನಪ್ಪಾ ಹೀಗೆ ಹೇಳ್ತಿದ್ದಾರೆ ಅಂತ ಕನ್ಫೂಸ್‌ ಆಗ್ಬೇಡಿ. ಅಚ್ಚರಿಯಾದ್ರೂ ಸತ್ಯ.

ನಮ್ಮ ದೇಹದ ಎಲ್ಲ ಭಾಗಗಳಲ್ಲಿ ಬೆವರು ಬರೋದನ್ನು ನಾವು ಗಮನಿಸುತ್ತೇವೆ. ಆದರೆ ನಮ್ಮ ಸೌಂದರ್ಯ ಹೆಚ್ಚಿಸುವ, ಎಲ್ಲರ ಗಮನ ಸೆಳೆಯುವ, ಬಣ್ಣಗಳಿಂದ ಮಿಂಚುವ ತುಟಿ ಮಾತ್ರ ಎಂದಿಗೂ ಬೆವರುವುದಿಲ್ಲ. ತುಟಿಗಳಲ್ಲಿ ಬೆವರಿನ ಗ್ರಂಥಿ ಇರುವುದಿಲ್ಲ. ಹಾಗಾಗಿ ನಮ್ಮ ತುಟಿ ಬೆವರುವುದಿಲ್ಲ. ಇದೇ ಕಾರಣಕ್ಕೆ ದೇಹದ ಇತರ ಭಾಗಗಳಿಗಿಂತ ಬೇಗ ನಮ್ಮ ತುಟಿ ಒಣಗುತ್ತದೆ. ಬೇಸಿಗೆಯಿರಲಿ ಇಲ್ಲ ಚಳಿಗಾಲವಿರಲಿ ನಮ್ಮ ತುಟಿ ಒಣಗೋದನ್ನು ನಾವು ಗಮನಿಸಬಹುದು. ದೇಹದ ಮೇಲ್ಭಾಗದಲ್ಲಿ ಅಪೋಕ್ರೈನ್ ಗ್ರಂಥಿಯಿದೆ. ಇದು ಬೆವರಲು ಕಾರಣವಾಗುತ್ತದೆ. ಇದನ್ನು ಸುಡೋರಿಫೆರಸ್ ಎಂದೂ ಕರೆಯುತ್ತಾರೆ. ಇದು ಲ್ಯಾಟಿನ್ ಪದ ಸುಡೋರ್ ನಿಂದ ಬಂದಿದೆ. ಇದರರ್ಥ  ಬೆವರು ಎಂದಾಗುತ್ತದೆ. ಬೆವರನ್ನು ಎರಡು ರೀತಿಯ ಗ್ರಂಥಿಗಳು ಉತ್ಪಾದಿಸುತ್ತವೆ.

suddiyaana