60 ವರ್ಷದಿಂದ ನಿದ್ದೆಯನ್ನೇ ಮಾಡಿಲ್ಲ ಈ ವ್ಯಕ್ತಿ – ವೈದ್ಯಲೋಕಕ್ಕೆ ಸವಾಲಾದ ಈತ ಯಾರು ಗೊತ್ತಾ?

60 ವರ್ಷದಿಂದ ನಿದ್ದೆಯನ್ನೇ ಮಾಡಿಲ್ಲ ಈ ವ್ಯಕ್ತಿ – ವೈದ್ಯಲೋಕಕ್ಕೆ ಸವಾಲಾದ ಈತ ಯಾರು ಗೊತ್ತಾ?

ನಿದ್ದೆ ಅನ್ನೋದು ಪ್ರತಿಯೊಂದು ಜೀವಿಗೂ ಅತ್ಯಮೂಲ್ಯ. ಒಂದು ದಿನ ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೂ ಇಡೀ ದಿನ ಕಿರಿಕಿರಿ ಆಗ್ತಿರುತ್ತೆ. ಯಾವುದೇ ಕೆಲಸದಲ್ಲೂ ಆಸಕ್ತಿ ಇರೋದಿಲ್ಲ. ದಿನವಿಡೀ ತೂಕಡಿಕೆ ಕಾಡುತ್ತೆ. ಆದ್ರೆ ಇಲ್ಲೊಬ್ಬರು ವ್ಯಕ್ತಿ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ.. ಅಷ್ಟಕ್ಕೂ ಯಾರು ಈತ..? ಯಾಕೆ ನಿದ್ದೆ ಮಾಡಿಲ್ಲ ಅನ್ನೋ ಬಗ್ಗೆ ವರದಿ ಇಲ್ಲಿದೆ.

ಇದನ್ನೂ ಓದಿ: ರೈತರಿಗೂ ತಿಂಗಳಿಗೆ ₹3 ಸಾವಿರ ಪಿಂಚಣಿ – ಸರ್ಕಾರದ ಹಣ ಪಡೆಯಲು ಏನು ಮಾಡಬೇಕು?

ಈ ಸುದ್ದಿ ಅಚ್ಚರಿ ಆದರೂ ಈ ಸತ್ಯವನ್ನ ನೀವು ನಂಬಲೇಬೇಕು. ವಿಯೆಟ್ನಾಂ ನಿವಾಸಿ ಥಾಯ್ ಎನ್ಗೊಕ್ ಎಂಬ ವ್ಯಕ್ತಿಗೆ ಸಣ್ಣ ವಯಸ್ಸಿನಲ್ಲಿ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಅಂದಿನಿಂದ ಇಲ್ಲಿಯವರೆಗೂ ನಿದ್ದೆಯನ್ನೇ ಮಾಡಿಲ್ಲ. ಇವರ ವಯಸ್ಸು ಈಗ 80 ವರ್ಷ. 1962ರಿಂದ ನಿದ್ದೆಯ ಕೊರತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗೆ ಥಾಯ್ ಮಲಗಿದ್ದನ್ನು ನೋಡಿಲ್ಲ ಎಂದು ಅವರ ಕುಟುಂಬಸ್ಥರು, ಸ್ನೇಹಿತರು, ನೆರೆಮನೆಯವರು ಸಹ ಹೇಳುತ್ತಾರೆ. ಅನೇಕ ವೈದ್ಯಕೀಯ ತಜ್ಞರು ಅವರ ಅಸ್ವಸ್ಥತೆಯನ್ನು ಪರೀಕ್ಷಿಸಿದ್ದಾರೆ. ಥಾಯ್ ಹಲವು ವರ್ಷಗಳಿಂದ ನಿದ್ದೆ ಮಾಡಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯ ತಿಳಿದ ಯೂಟ್ಯೂಬರ್ ಒಬ್ಬರು ಥಾಯ್ ನಿದ್ದೆ ಮಾಡುತ್ತಿಲ್ಲವೇ ಎಂಬುದನ್ನು ಪರೀಕ್ಷಿಸಲು ವಿಯೆಟ್ನಾಂನ ಹಳ್ಳಿಯೊಂದಕ್ಕೆ ತೆರಳಿದ್ದರು. ಒಂದು ರಾತ್ರಿ ಥಾಯ್ ಜೊತೆಗೆ ಉಳಿದುಕೊಂಡಿದ್ದರು. ಇಡೀ ರಾತ್ರಿ ಥಾಯ್ ನಿದ್ದೆ ಮಾಡಿಲ್ಲ ಅನ್ನೋದು ಗೊತ್ತಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿಯೂ ಈತ ಶಾಶ್ವತ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಆದ್ರೆ ಯಾವುದೇ ಆರೋಗ್ಯ ಸಮಸ್ಯೆ ಆತನಲ್ಲಿ ಕಂಡುಬಂದಿಲ್ಲ ಎನ್ನುವುದೇ ವಿಶೇಷ. ವೈದ್ಯರು ಕೂಡ ಈತನ ನಿದ್ರಾ ಹೀನತೆಗೆ ಕಾರಣ ಹುಡುಕಲು ಪರದಾಡುತ್ತಿದ್ದಾರೆ. ಆತನಿಗೆ ನಿದ್ರೆ ಬರುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಈತನ ವಿಚಾರ ಅನೇಕರಲ್ಲಿ ಧಿಗ್ಬ್ರಮೆ ಹುಟ್ಟಿಸಿದೆ. ನಮ್ಮ ಸುತ್ತ ಮುತ್ತ ನಡೆಯುವ ಕೆಲ ಅಚ್ಚರಿಯ ಸಂಗತಿಗಳಲ್ಲಿ ಇದೂ ಒಂದು.

Sulekha