ಟಾಯ್ಲೆಟ್ ಕಮೋಡ್‌ಗಿಂತಲೂ 2,000 ಪಟ್ಟು ಕೊಳಕು ಅಡುಗೆ ಮನೆಯಲ್ಲಿರುವ ಈ ವಸ್ತು!
ಮನೆಯನ್ನು ಪ್ರತಿದಿನ ಸ್ವಚ್ಛಗೊಳಿಸಲೇ ಬೇಕು. ಸ್ವಚ್ಛವಾಗಿಲ್ಲ ಅಂದ್ರೆ ಕೀಟಗಳ ಕಾಟ ಹೆಚ್ಚಾಗುತ್ತೆ. ಬ್ಯಾಕ್ಟೀರಿಯಾಗಳ ಉತ್ಪತ್ತಿಯಾಗುತ್ತೆ. ಇದ್ರಿಂದಾಗಿ ಆರೋಗ್ಯ ಕೆಡುವ ಸಾಧ್ಯತೆ ಇರುತ್ತೆ. ಹೀಗಾಗಿ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಕೂಡ ಶುಚಿಯಾಗಿಟ್ಟುಕೊಳ್ಳಬೇಕಾಗುತ್ತದೆ. ಮನೆಯ ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತೆ. ಅದ್ರೆ ಮನೆಯಲ್ಲಿರುವ ಕೆಲವೊಂದು ವಸ್ತುಗಳ ಶುಚಿತ್ವದ ಬಗ್ಗೆ ನಾವು ಅಷ್ಟೊಂದಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಟಾಯ್ಲೆಟ್ ಕಮೋಡ್ ತುಂಬಾ ಕೊಳಕಾದ ವಸ್ತು ಅಂತಾ ಅಂದುಕೊಂಡಿರುತ್ತೇವೆ. ಆದರೆ ಟ್ಲಾಯ್ಲೆಟ್ ಕಮೋಡ್‌ಗಿಂತಲೂ ಕೊಳಕಾದ ವಸ್ತು ನಿಮ್ಮ ಕಿಚನ್‌ನಲ್ಲಿದೆ.
ಇದನ್ನೂ ಓದಿ: ನೀವು ಮಕ್ಕಳ ಎದುರು ಈ ತಪ್ಪುಗಳನ್ನು ಮಾಡಬೇಡಿ! – ಮಕ್ಕಳ ಜೊತೆ ಪೋಷಕರ ನಡವಳಿಕೆ ಹೇಗಿದ್ರೆ ಉತ್ತಮ?
ಅಚ್ಚರಿಯಾದ್ರೂ ಸತ್ಯ. ಮನೆಯಲ್ಲಿ ಅಂತ್ಯಂತ ಗಲೀಜು ವಸ್ತು ಅಂದ್ರೆ ಟಾಯ್ಲೆಟ್ ಕಮೋಡ್ ಅಂದ್ಕೋತೀವಿ.. ಆದ್ರೆ ಟಾಯ್ಲಟ್ ಗಿಂತ ಎರಡು ಸಾವಿರ ಪಟ್ಟು ಗಲೀಜು ವಸ್ತು ನಿಮ್ಮ ಅಡುಗೆ ಮನೆಯಲ್ಲಿರುತ್ತೆ. ಸಾಮಾನ್ಯವಾಗಿ ಪಾತ್ರೆ ತೊಳೆಯಲು ಅನೇಕರು ಸ್ಪಾಂಜ್ ಯೂಸ್ ಮಾಡ್ತಾರೆ. ಇದ್ರಿಂದ ಪಾತ್ರೆ ತೊಳೆಯೋದು ತುಂಬಾ ಸುಲಭ.. ಪಾತ್ರೆಗಳು ಬೇಗ ಸ್ವಚ್ಛ ಆಗುತ್ತವೆ ಮಾತ್ರವಲ್ಲ ಕೈಗೂ ಏನು ಹಾನಿ ಆಗಲ್ಲ ಅಂತಾ ಅನೇಕರು ಇದನ್ನೇ ಯೂಸ್ ಮಾಡ್ತಾರೆ. ಆದ್ರೆ ಪಾತ್ರೆ ತೊಳೆಯಲು ಯೂಸ್ ಮಾಡೋ ಸ್ಪಾಂಜ್ ಟಾಯ್ಲೆಟ್ ಗಿಂತಲೂ ಹೆಚ್ಚು ಕೊಳಕು. ಇದರಲ್ಲಿ ಟಾಯ್ಲೆಟ್ ಗಿಂತ ಎರಡು ಸಾವಿರ ಪಟ್ಟು ಅಧಿಕ ಬ್ಯಾಕ್ಟೀರಿಯಾಗಳು ಇವೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ.
ಪಾತ್ರೆ ತೊಳೆಯೋ ಸ್ಪಾಂಜ್ ಬಳಸಿದ್ಮೇಲೆ ಹೆಚತಚಿನವರು ಅದನ್ನು ಶುಚಿಗೊಳಿಸಲ್ಲ. ಹಾಗೆ ಸೈಡಲ್ಲಿ ಇಟ್ಟು ಬಿಡ್ತಾರೆ. ಇದರಿಂದಾಗಿ ಪಾತ್ರೆಗಳಲ್ಲಿ ಇದ್ದ ಆಹಾರ ವಸ್ತುಗಳು ಈ ಸ್ಪಾಂಜ್‌ನಲ್ಲಿ ಹಾಗೇ ಉಳ್ಕೊಂಡು ಬಿಟ್ಟಿರುತ್ತವೆ. ಇದರ ಜೊತೆಗೆ ಸ್ಪಾಂಜ್ ಒದ್ದೆಯಾಗಿರುತ್ತೆ. ಇದ್ರಿಂದಾಗಿ ಈ ಸ್ಪಾಂಜ್ ಗಳು ಬ್ಯಾಕ್ಟೀರಿಯಾ ಬೆಳೆಯುವ ಪರ್ಫೆಕ್ಟ್ ಜಾಗ ಆಗ್ತವೆ. ನಮಗೆ ಗೊತ್ತಿಲ್ಲದಂತೆ ಬ್ಯಾಕ್ಟೀರಿಯಾ ಸ್ಫೋಟ ಕಿಚನ್ ನಲ್ಲಿ ಆಗಿರುತ್ತೆ. ಹೀಗಾಗಿ ಸ್ಪಾಂಜ್ ಬಳಸುವವರು ವಾರಕ್ಕೊಮ್ಮೆ ಚೇಂಜ್ ಮಾಡೋದು ಒಳ್ಳೆಯದು. ಇಲ್ದೇ ಹೋದ್ರೆ ಯೂಸ್ ಮಾಡಿದ್ಮೇಲೆ ಬಿಸಿನೀರಲ್ಲಿ ಐದು ನಿಮಿಷ ನೆನೆಸಿ ನಂತರ ಒಣಗಿಸಿ, ಮತ್ತೆ ಬಳಸಬೇಕು.