‘ನಭಾ’ ಜೊತೆ ‘ತೇಜಸ್’ ಮಿಲನ – ಸಂಗಾತಿಯನ್ನು ಸೇರುವ ಆತುರದಲ್ಲಿಯೇ ಪ್ರಾಣ ಬಿಟ್ಟ ತೇಜಸ್..!

‘ನಭಾ’ ಜೊತೆ ‘ತೇಜಸ್’ ಮಿಲನ – ಸಂಗಾತಿಯನ್ನು ಸೇರುವ ಆತುರದಲ್ಲಿಯೇ ಪ್ರಾಣ ಬಿಟ್ಟ ತೇಜಸ್..!

ಪ್ರಾಜೆಕ್ಟ್ ಚೀತಾ ಇನಿಷಿಯೇಟಿವ್ ಅಡಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ಐದು ತಿಂಗಳಲ್ಲಿ ಏಳು ಚೀತಾಗಳು ಮೃತಪಟ್ಟಿವೆ. 20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇರಿಸಲಾಗಿದ್ದು, ತೇಜಸ್ ಸಾವಿನ ಬಳಿಕ ಇನ್ನು 13 ಚೀತಾಗಳಷ್ಟೇ ಉಳಿದಿವೆ. ಉಳಿದ ಚೀತಾಗಳನ್ನು ಉಳಿಸುವ ಹೊಣೆಗಾರಿಕೆ ಅಧಿಕಾರಿಗ ಮೇಲಿದೆ. ಇದರ ಮಧ್ಯೆ ಮಂಗಳವಾರ ಮೃತಪಟ್ಟ ಚೀತಾ ತೇಜಸ್ ಸಾವಿನ ಕಾರಣವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು – ಐದು ತಿಂಗಳಲ್ಲಿ 7 ನೇ ಸಾವು

ಜುಲೈ 11ರಂದು ಗಂಡು ಚೀತಾ ತೇಜಸ್ ಸಾವು ಕಂಡಿತ್ತು. ಇದೀಗ ಚೀತಾ ಹೇಗೆ ಸಾವನ್ನಪಿತು ಎಂಬ ಕಾರಣ ಬಹಿರಂಗಗೊಂಡಿದೆ. ಕುನೋ ಅಭಯಾರಣ್ಯದಲ್ಲಿ ಮಂಗಳವಾರ ಸಾವನ್ನಪ್ಪಿದ ಚೀತಾ ‘ತೇಜಸ್’ ಮರಣಕ್ಕೆ, ಮಿಲನ ಸಮಯದಲ್ಲಿ ತಲೆಗೆ ಆದ ಗಾಯ ಕಾರಣವಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಗಂಡು ಚೀತಾ ‘ತೇಜಸ್’ ಮಿಲನ ಸಮಯದಲ್ಲಿ ತಲೆಗೆ ಗಾಯ ಮಾಡಿಕೊಂಡಿದೆ. ಮಿಲನ ಸಮಯದಲ್ಲಿ ಹೆಣ್ಣು ಚೀತಾ ನಭಾ ಜೊತೆ ಆದ ಕಿತ್ತಾಟದಲ್ಲಿ ತೇಜಸ್ ತಲೆಗೆ ಗಾಯ ಆಗಿತ್ತು. ಈ ಗಾಯವೇ ಅದರ ಸಾವಿಗೆ ಕಾರಣವಾಗಿರಬಹುದು’ ಎಂದು ಹೇಳಿದರು. ತೇಜಸ್ ಕುನೋ ಅರಣ್ಯದ 6ನೇ ವಿಭಾಗದಲ್ಲಿ ಏಕಾಂಗಿಯಾಗಿತ್ತು. ಇದರ ಮಿಲನಕ್ಕೆಂದು ಸಿಬ್ಬಂದಿ 5ನೇ ವಿಭಾಗದ ಬಾಗಿಲು ತೆರೆದಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ನಭಾ ಚೀತಾದೊಂದಿಗೆ ಮಿಲನಕ್ಕೆಂದು ಆದ ಕಿತ್ತಾಟದಲ್ಲಿ ತೇಜಸ್ ಮೇಲ್ಕುತ್ತಿಗೆಗೆ ಗಾಯ ಆಗಿತ್ತು. ಇದನ್ನು ಕಂಡ ಸಿಬ್ಬಂದಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರನ್ನು ಕರೆದರು. ಆದರೆ ಮಧ್ಯಾಹ್ನ 2 ಗಂಟೆಗೆ ವೇಳೆಗೆ ನೋವಿನ ತೀವ್ರತೆಯಿಂದ ತೇಜಸ್ ಸಾವನ್ನಪ್ಪಿತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು. ಆದರೆ ವೈದ್ಯರು ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ವೈದ್ಯರು ಇನ್ನು ಸಲ್ಲಿಸುವುದು ಬಾಕಿ ಇದೆ.

ದೇಶದಲ್ಲಿ ಚೀತಾಗಳ ಸಂತತಿಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಒಂದೊಂದೇ ಹಿನ್ನಡೆ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಚೀತಾಗಳು ನಿರಂತರವಾಗಿ ಸಾವನ್ನಪ್ಪುತ್ತಿವೆ. ಸದ್ಯ 12 ಚಿರತೆಗಳು ತೆರೆದ ಅರಣ್ಯದಲ್ಲಿವೆ.

suddiyaana