ಮಳೆಗಾಲದಲ್ಲಿ ಚರ್ಮದ ಆರೈಕೆ ಹೀಗಿದ್ದರೆ ಉತ್ತಮ..
ಮಳೆಗಾಲ ಈಗಾಗಲೇ ಆರಂಭವಾಗಿದೆ. ಮಳೆಯ ಜೊತೆ ಕಾಯಿಲೆಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ನಮ್ಮ ಆರೋಗ್ಯದ ಜೊತೆಗೆ ಚರ್ಮದ ಆರೈಕೆಯ ಕಡೆಗೂ ಗಮನಕೊಂಡಬೇಕಾಗುತ್ತದೆ. ಮಳೆಗಾಲ ಇರುವ ಕಾರಣ ನಾವು ಸ್ವಲ್ಪ ಹೆಚ್ಚಾಗಿ ಸ್ಕೀನ್ ಕೇರ್ ಮಾಡಲೇಬೇಕಾಗುತ್ತದೆ. ತುಂತೂರು ಮಳೆ.. ವಾತಾವರಣ ಚೆನ್ನಾಗಿದೆ ಅಂತಾ ಮಳೆಯಲ್ಲಿ ನೆನೆಯುತ್ತಾ ಇದ್ದರೆ ಚರ್ಮ ಸಮಸ್ಯೆಗಳಿಗೆ ತುತ್ತಾಗುವುದು ಪಕ್ಕಾ!
ಇದನ್ನೂ ಓದಿ: ಗ್ರೀನ್ ಟೀ ಮಾಡುವಾಗ ನೀವೂ ಈ ತಪ್ಪುಗಳನ್ನು ಮಾಡುತ್ತೀರಾ? – ಆರೋಗ್ಯ ಹದಗೆಡಬಹುದು ಎಚ್ಚರ!
ಎಲ್ಲಾ ಋತುಮಾನದಲ್ಲಿಯೂ ಚರ್ಮದ ಹೊಳಪು ಕಾಪಾಡಿಕೊಂಡು ಆರೈಕೆ ಮಾಡುವುದು ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಬರುವಂತಹ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಮಾತ್ರ ನಮ್ಮನ್ನು ಕಾಡುವುದಿಲ್ಲ. ಕೆಲವು ಚರ್ಮ ಸಮಸ್ಯೆಗಳು ಸಹಾ ಹೆಚ್ಚಾಗುತ್ತದೆ. ಹಾಗಿದ್ರೆ ನಮ್ಮ ತ್ವಚೆಯ ಹಾರೈಕೆ ಹೇಗೆ ಮಾಡಬೇಕು.. ಮಳೆಗಾಲದಲ್ಲಿ ಚರ್ಮವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಅನ್ನೋ ಟಿಪ್ಸ್ ಇಲ್ಲಿದೆ..
ಚರ್ಮದ ಮೇಲೆ ಏನೆಲ್ಲಾ ಲೇಪನ ಮಾಡುತ್ತೀವಿ ಅನ್ನುವುದರ ಜೊತೆಗೆ ದೇಹಕ್ಕೆ ಏನೆಲ್ಲಾ ಪೌಷ್ಠಿಕಾಂಶಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವುದರ ಮೇಲೂ ನಮ್ಮ ಚರ್ಮದ ಸೌದರ್ಯ ವೃದ್ಧಿ ಅವಲಂಬಿತವಾಗುತ್ತದೆ.
ನೀರನ್ನ ಹೆಚ್ಚಾಗಿ ಸೇವನೆ ಮಾಡಬೇಕು. ಇದರ ಜೊತೆಗೆ ಕೆಲವೊಂದಿಷ್ಟು ಮನೆಮದ್ದನ್ನು ಮಾಡಿಕೊಳ್ಳಬೇಕು. ಒಂದು ಸ್ಪೂನ್ ಟಮೋಟೋ ಜ್ಯೋಸ್ಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಹುಬ್ಬು ಮತ್ತು ಕೂದಲು ತಾಕಿಸದೆ ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ.
ವಾರದಲ್ಲಿ 2 ಬಾರಿ ಈ ರೀತಿ ಮಾಡಿದರೆ ಸಾಕು ನಿಮ್ಮ ತ್ವಚೆಯು ಸುಂದರವಾಗಿ ಕಾಣುತ್ತದೆ. ಹಸಿ ಹಾಲಿನಲ್ಲಿ ಕಾಟನ್ ನೆನೆಸಿ ಮುಖಕ್ಕೆ ಹಚ್ಚಿ ರಾತ್ರಿಯಿಡಿ ಮುಖದ ಮೇಲೆ ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಿ ,ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಮಳೆಯಿಂದ ಉಂಟಾಗುವ ಚರ್ಮರೋಗಗಳ ಉಪಶಮನಕ್ಕೆ ಅಲೆವೆರೊ ತುಂಬಾ ಉಪಕಾರಿ.