ಸ್ವರ್ಗಕ್ಕೆ ದಾರಿ ತೋರಿಸಿದ ಕಾಮಾನದಿ..! – ಇದು ರಿಯಲ್ ದೃಶ್ಯ ವೈಭವ..!

ಸ್ವರ್ಗಕ್ಕೆ ದಾರಿ ತೋರಿಸಿದ ಕಾಮಾನದಿ..! – ಇದು ರಿಯಲ್ ದೃಶ್ಯ ವೈಭವ..!

ಜಲ, ನೆಲ ಸೇರಿದಂತೆ ಪ್ರಕೃತಿಯಲ್ಲೂ ಅನೇಕ ವಿಸ್ಮಯಗಳು ನಡೆಯುತ್ತವೆ. ಕೆಲವೊಮ್ಮೆ ಆ ವಿಸ್ಮಯಗಳು ನಮ್ಮನ್ನೂ ಕೂಡಾ ಅಚ್ಚರಿಗೊಳಿಸುತ್ತದೆ. ಇದೀಗ ಅಂಥದ್ದೇ ವಿಸ್ಮಯವನ್ನು ನದಿಯೊಂದು ಸೃಷ್ಟಿಸಿದೆ. ನದಿಯೊಂದು ಬೆರಗುಗೊಳಿಸುವಂತೆ ಕಂಡುಬಂದಿದ್ದು, ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಬಿದ್ದೇ ಬಿಡ್ತಾ ಚಂದ್ರಯಾನ-3 ತುಣುಕು..?

ಈ ವಿಡಿಯೋ ಕ್ಲಿಪ್ ನಲ್ಲಿ ರಷ್ಯಾದ ಪೆರ್ಮ್ ಪ್ರದೇಶದಲ್ಲಿನ ಕಾಮಾ ನದಿಯ ಮೇಲ್ಮೈನಲ್ಲಿ ಹೊಳೆಯುವ ಚಿನ್ನದ ಜಲಧಾರೆಯು ಕಂಡು ಬಂದಿದೆ. ಈ ದೃಶ್ಯವನ್ನು ಹತ್ತಿರದ ದೋಣಿಗಳಲ್ಲಿ ಇರುವವರು ಸೆರೆಹಿಡಿದಿದ್ದಾರೆ. ಜುಲೈ 13, 2023 ರಂದು ಸೆರೆಹಿಡಿಯಲಾದ ಈ ವಿಡಿಯೊದಲ್ಲಿ ಎತ್ತರದ ಗೋಲ್ಡನ್ ವಾಟರ್‌ಸ್ಪೌಟ್ ಗೋಚರಿಸುತ್ತದೆ. ಇದು ನದಿಯ ಮೇಲ್ಮೈಯಿಂದ ಆಕಾಶವನ್ನು ತಲುಪಿದ್ದು, ಇದು ನಿಜವಾಗಿಯೂ ವಿಸ್ಮಯ ಮೂಡಿಸುತ್ತಿದೆ. ಈ ದೃಶ್ಯ ಹೀಗೆ ನೋಡಿದರೆ ಸ್ವರ್ಗದಿಂದ ಭೂಮಿಗೆ ನದಿ ಇಳಿದುಬಂದಂತೆ ಭಾಸವಾಗುತ್ತಿದೆ.

ವಾಟರ್‌ಸ್ಪೌಟ್ ಎಂದರೆ ಅದು ಒಂದು ರೀತಿಯ ಸುಂಟರಗಾಳಿಯಾಗಿದೆ. ಇದು ಕಾಲಮ್ ಅಥವಾ ಸೈಕ್ಲೋನ್‌ನಂತೆ ಗಾಳಿಯಲ್ಲಿ ತಿರುಗುತ್ತಿರುವಾಗ ನೀರು ಮೇಲಕ್ಕೆ ಏರುತ್ತದೆ. ಸಾಮಾನ್ಯವಾಗಿ ಇದು ಸಮುದ್ರದ ಮೇಲ್ಮೈಯಲ್ಲಿ ರೂಪುಗೊಳ್ಳುತ್ತದೆ. ಹೆಚ್ಚಾಗಿ ಇದು ಉಷ್ಣ ವಲಯ ಪ್ರದೇಶದಲ್ಲಿ ರೂಪುಗೊಳ್ಳುತ್ತದೆ.

suddiyaana