IND ಗೆದ್ರೂ ಗಂಭೀರ್ ಗರಂ! ಗಿಲ್ ಜೊತೆ ಕೊಹ್ಲಿ RANKING ವಾರ್!

IND ಗೆದ್ರೂ ಗಂಭೀರ್ ಗರಂ!   ಗಿಲ್ ಜೊತೆ ಕೊಹ್ಲಿ RANKING ವಾರ್!

ಗುವಾಹಟಿಯಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. 406 ರನ್‌ಗಳ ಬೃಹತ್ ಗುರಿಯನ್ನು ಭಾರತ ಕೇವಲ 43.3 ಓವರ್‌ಗಳಲ್ಲಿ ಬೆನ್ನಟ್ಟಿತು. ನಾಯಕ ಶುಭ್‌ಮನ್ ಗಿಲ್ ಅಜೇಯ 223 ರನ್ ಸಿಡಿಸಿ ದಾಖಲೆ ಬರೆದರು. ರೋಹಿತ್ ಶರ್ಮಾ ಕೂಡ 101 ರನ್ ಗಳಿಸಿದರು. ಈ ಗೆಲುವಿನೊಂದಿಗೆ ಭಾರತ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಶುಭ್‌ಮನ್ ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇವಲ 117 ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದರು. ಇದು ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಅತಿ ವೇಗದ ದ್ವಿಶತಕವಾಗಿದೆ. ಅಂತಿಮವಾಗಿ 133 ಎಸೆತಗಳಲ್ಲಿ 223 ರನ್ ಗಳಿಸಿದ ಗಿಲ್, ಯಶಸ್ವಿ ODI ಚೇಸ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ಗೂ ಹೊಸ ದಾಖಲೆ ನಿರ್ಮಿಸಿದ್ದಾರೆ. ನಾಯಕನಾಗಿ ಅವರ ಇನ್ನಿಂಗ್ಸ್ ಭಾರತದ ಗೆಲುವಿನ ಪ್ರಮುಖ ಕಾರಣವಾಯಿತು.

ವೆಸ್ಟ್ ಇಂಡೀಸ್ ವಿರುದ್ಧದ 2ನೇ ODIಯಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. 75 ಎಸೆತಗಳಲ್ಲಿ 101 ರನ್ ಗಳಿಸಿದ ರೋಹಿತ್, ಏಕದಿನ ಕ್ರಿಕೆಟ್‌ನಲ್ಲಿ 12,000 ರನ್‌ಗಳ ಗಡಿ ದಾಟಿದರು. ಇದರೊಂದಿಗೆ ಅವರು ಈ ಮೈಲುಗಲ್ಲು ತಲುಪಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಗೆ ಸೇರಿದರು. ಅಲ್ಲದೆ, 39ನೇ ವಯಸ್ಸಿನಲ್ಲಿ ODI ಶತಕ ಬಾರಿಸಿದ ಅತ್ಯಂತ ಹಿರಿಯ ಭಾರತೀಯ ಬ್ಯಾಟರ್ ಎಂಬ ದಾಖಲೆಗೂ ರೋಹಿತ್ ಪಾತ್ರರಾದರು.

ಇದನ್ನೂ ಓದಿ: ರೇಷನ್ ಕಾರ್ಡ್ E-KYCಗೆ ಬಂತು ಆ್ಯಪ್ – ಮೊಬೈಲ್‌ನಲ್ಲೇ ಮಾಡಿ ಇ-ಕೆವೈಸಿ 

ವೆಸ್ಟ್ ಇಂಡೀಸ್ ಮತ್ತು ಭಾರತ ಪಂದ್ಯದ ನಂತ್ರ ಕೋಚ್ ಗೌತಮ್ ಗಂಭೀರ್,  ಬ್ಯಾಟಿಂಗ್​ ಪಿಚ್‌ಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ನಾವು ಕ್ರಿಕೆಟ್ ಆಡುತ್ತಿದ್ದೇವೆ ಎಂದು ಕೊಳ್ಳುತ್ತೇವೆ, ಆದರೆ ಇದು ನಿಜವಾದ ಕ್ರಿಕೆಟ್ ಅಲ್ಲ, ಇದು ಕೇವಲ ಬ್ಯಾಟಿಂಗ್ ಎಂದು ನೇರವಾಗಿಯೇ ಅಭಿಪ್ರಾಯಪಟ್ಟರು. ಬ್ಯಾಟಿಂಗ್​ ಮತ್ತು ಬೌಲರ್​ಗಳ ನಡುವೆ ಯಾವುದೇ ಸಮಾನ ಸ್ಪರ್ಧೆ ಇಲ್ಲದಿರುವುದೇ ತಮ್ಮ ಅಸಮಾಧಾನಕ್ಕೆ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದರು.

 ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆಯ 55ನೇ ಏಕದಿನ ಶತಕ ಸಿಡಿಸಿದ ಬಳಿಕ, ಟೀಮ್​ ಇಂಡಿಯಾ ರನ್​ ಮಷಿನ್​ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ಏರಿದ್ದಾರೆ. ಶುಭ್‌ಮನ್ ಗಿಲ್ 816  ಪಾಯಿಂಟ್ಸ್‌ ನೊಂದಿಗೆ ಮೊದಲ ಸ್ಥಾನದಲ್ಲಿದ್ರೆ. ರೋಹಿತ್ ಶರ್ಮಾ 753 ರೇಟಿಂಗ್ ಪಾಯಿಂಟ್ಸ್‌ ನೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಈಗ ಎರಡೇ ಪಂದ್ಯ ಟೀಂ ಇಂಡಿಯಾ ಗೆದಿದ್ದು, ಇದು ಮತ್ತೆ ಬದಲಾವಣೆ ಆಗಲಿದೆ.

ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ರೋಹಿತ್ ಬಳಿ ಬಂದು ಮೈದಾನದಲ್ಲಿ ಸ್ಲೈಡ್ ಮಾಡುತ್ತಾ, ಜಂಪ್ ಮಾಡಿ ಸೆಲೆಬ್ರೇಟ್ ಮಾಡುವಂತೆ ಐಡಿಯಾ ಕೊಟ್ಟಿದ್ದರಂತೆ.  ಆದ್ರೆ ಮೈದಾನದಲ್ಲಿ ಭೀಕರ ಸೆಖೆಯ ನಡುವೆ 50 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿ, ಆಮೇಲೆ ಸತತವಾಗಿ 25 ರಿಂದ 30 ಓವರ್ ಬ್ಯಾಟಿಂಗ್ ಮಾಡಿದ ಮೇಲೆ ನನಗೆ ಆ ರೀತಿ ಸ್ಲೈಡ್ ಮಾಡಲು, ಜಂಪ್ ಮಾಡಲು ಖಂಡಿತಾ ಸಾಧ್ಯವಿರಲಿಲ್ಲ   ಜಡೇಜಾ ಕೊಟ್ಟ ಐಡಿಯಾವನ್ನು ರಿಜೆಕ್ಟ್ ಮಾಡಿದೆ ಎಂದು ಹಿಟ್‌ಮ್ಯಾನ್ ಹೇಳಿದ್ದಾರೆ. 

ವೆಸ್ಟ್ ಇಂಡೀಸ್ ವಿರುದ್ಧ 10ನೇ ಓವರ್’ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಹೊಡೆದು ಹಿಟ್’ಮ್ಯಾನ್ ರೋಹಿತ್ ಶರ್ಮಾ, ಅರ್ಧಶತಕವನ್ನು ಪೂರೈಸಿದರು. ಈ ವೇಳೆ ಹೊಡೆದ ಸಿಕ್ಸ್, ಪ್ರೇಕ್ಷಕರ ಗ್ಯಾಲರಿಯ ಮೇಲಿದ್ದ ಜಾಹೀರಾತು ಬೋರ್ಡ್ ಅನ್ನು ಬಡಿಯಿತು. ಆ ರಭಸಕ್ಕೆ ಬೋರ್ಡ್ ಸೀಳಿ ಹೋಗಿ, ಬಾಲ್ ಅದರ ಒಳಗೆ ಸೇರಿಕೊಂಡಿತು.  ಈ ವೇಳೆ ಇಡೀ ಗುವಹಾಟಿ ನಗರಕ್ಕೇ ಕೇಳಿಸುವ ರೀತಿಯಲ್ಲಿ ಪ್ರೇಕ್ಷಕರು ಕೂಗಿದ್ರು.

ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ರೆ, ಲಂಕಾವನ್ನ 45 ರನ್‌ಗೆ ಆಲ್‌ಔಟ್‌ ಮಾಡಿ ಟೀಂ ಇಂಡಿಯಾ ಫೈನಲ್ ಪ್ರವೇಶ ಮಾಡಿದೆ. ಅಕ್ಟೋಬರ್ 3ಕ್ಕೆ ಚಿನ್ನದ ಪದಕಕ್ಕಾಗಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ಫೈನಲ್‌ನಲ್ಲಿ ಹೋರಾಟ ನಡೆಸಲಿವೆ. PAK VS ಟೀಂ ಇಂಡಿಯಾ ಪಂದ್ಯ ಆಗಿರುವುದ್ದರಿಂದ ಏಷ್ಯನ್ ಗೇಮ್ಸ್‌ ಫೈನಲ್ ಸಾಕಷ್ಟು  ರೋಚಕತೆಯಿಂದ ಕೂಡಿದೆ.

 ಕ್ರಿಕೆಟ್‌ನ ಹೊಸ ನಿಯಮಗಳ ಆವೃತ್ತಿ ಇಂದಿನಿಂದ ಜಾರಿಗೆ ಬಂದಿದೆ. MCC ನಿಯಮಗಳಲ್ಲಿ ಒಟ್ಟು 73 ಬದಲಾವಣೆಗಳನ್ನು ಮಾಡಲಾಗಿದೆ. ಓವರ್‌ಥ್ರೋ, ಡೆಡ್ ಬಾಲ್, ವಿಕೆಟ್‌ಕೀಪರ್‌ಗಳ ಸ್ಥಾನ, ಕ್ಯಾಚ್, ಹಿಟ್ ವಿಕೆಟ್ ಸೇರಿದಂತೆ ಹಲವು ಅಂಶಗಳಿಗೆ ಸ್ಪಷ್ಟತೆ ನೀಡಲಾಗಿದೆ. ಬಹುದಿನಗಳ ಪಂದ್ಯಗಳಲ್ಲಿ ಇನ್ನಿಂಗ್ಸ್‌ನ ಅಂತಿಮ ಓವರ್‌ಗೂ ಕೆಲವು ಬದಲಾವಣೆಗಳನ್ನು ತರಲಾಗಿದೆ. ಹೊಸ ನಿಯಮಗಳು ಆಟದ ಹಲವು ಸನ್ನಿವೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ವಿರುದ್ದದ ಅಂಡರ್ 19 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಅನ್ವಯ್ ದ್ರಾವಿಡ್‌ಗೆ ಕರ್ನಾಟಕ ಅಂಡರ್ 19 ತಂಡದ ನಾಯಕತ್ವ ನೀಡಲಾಗಿದೆ. ವಿನು ಮಂಕಡ್ ಟ್ರೋಫಿ ಅಂಡರ್ 19 ಟೂರ್ನಿಯಲ್ಲಿ ಅನ್ವಯ್ ದ್ರಾವಿಡ್ ಕರ್ನಾಟಕ ತಂಡ ಮುನ್ನಡೆಸಲಿದ್ದಾರೆ ಅಕ್ಟೋಬರ್ 8 ರಿಂದ ವಿನೂ ಮಂಕಡ್ ಟೂರ್ನಿ ಆರಂಭಗೊಳ್ಳಲಿದೆ. ವಿಶಾಖಪಟ್ಟಣಂನಲ್ಲಿ ಟೂರ್ನಿ ನಡೆಯಲಿದೆ. ಅಂಡರ್ 19 ಟೂರ್ನಿಯಲ್ಲಿ ಕರ್ನಾಟಕ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ

 

Kishor KV

Leave a Reply

Your email address will not be published. Required fields are marked *