ಗುಜರಾತ್ ಚುನಾವಣೆ, ಮುಂದಿನ 25 ವರ್ಷದ ಭವಿಷ್ಯ ನಿರ್ಧರಿಸಲಿದೆ: ಪ್ರಧಾನಿ ಮೋದಿ

ಪಾಲನ್ಪುರ: ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮುಂದಿನ 25 ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬನಸ್ ಕಾಂತ ಜಿಲ್ಲೆಯ ಪಾಲನ್‌ಪುರ್ ಪಟ್ಟಣದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಗುಜರಾತ್ ಮತ್ತು ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಇದುವರೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೂ, ದೊಡ್ಡ ಮಟ್ಟಕ್ಕೆ ತೆಗೆದುಕೊಳ್ಳುವ ಸಮಯ ಬಂದಿದೆ ಎಂದರು.
ಈ ಚುನಾವಣೆಯು ಯಾರು ಶಾಸಕರಾಗುತ್ತಾರೆ ಅಥವಾ ಯಾರ ಸರ್ಕಾರ ಬರುತ್ತದೆ ಎಂಬುದನ್ನು ನಿರ್ಧರಿಸಲು ಅಲ್ಲ, ಈ ಚುನಾವಣೆಯು ಗುಜರಾತ್‌ನ ಮುಂದಿನ 25 ವರ್ಷಗಳ ಭವಿಷ್ಯವನ್ನು ನಿರ್ಧರಿಸಲು ಎಂದು ಮೋದಿ ಹೇಳಿದರು.
ಇದನ್ನೂ ಓದಿ: ‘ಮಿಂಚಿನಂತಾ ವೇಗದಲ್ಲಿ ಚುನಾವಣಾ ಆಯುಕ್ತರ ನೇಮಕ’-ಕೇಂದ್ರದ ವಿರುದ್ಧ ಸುಪ್ರೀಂ ಗರಂ
ಗುಜರಾತ್‌ನಲ್ಲಿ ಬಲಿಷ್ಠ ಸರ್ಕಾರವನ್ನು ರಚಿಸಲು ನನಗೆ ನಿಮ್ಮ ಬೆಂಬಲ ಬೇಕು. ನಿಮ್ಮ ಸಮಸ್ಯೆಗಳನ್ನು ನೀವು ನನಗೆ ಹೇಳಬೇಕಾಗಿಲ್ಲ ಏಕೆಂದರೆ ನಾನು ಇಲ್ಲಿಯೇ ಬೆಳೆದಿದ್ದೇನೆ ಮತ್ತು ಆ ಸಮಸ್ಯೆಗಳನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ನಾನು ಮನವಿ ಮಾಡುತ್ತೇನೆ. ಬನಸ್ ಕಾಂತ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಗುಜರಾತ್‌ನ ಬಿಜೆಪಿ ಸರ್ಕಾರವು ಪ್ರವಾಸೋದ್ಯಮ, ಪರಿಸರ, ನೀರು, ಹೈನುಗಾರಿಕೆ ಮತ್ತು ಪೌಷ್ಠಿಕಾಂಶದ ಬಗ್ಗೆ ಹೆಚ್ಚಿನ ಹಮಸ ಹರಿಸಿದೆ. ಅತಿ ಕಡಿಮೆ ಅವಧಿಯಲ್ಲಿ, ನೀರಿನ ಕೊರತೆ ಮತ್ತು ವಿದ್ಯುತ್ ಸಮಸ್ಯೆಗಳನ್ನು ಬಗೆ ಹರಿಸಿದ್ದೇವೆ. 20 ರಿಂದ 25 ವರ್ಷ ವಯಸ್ಸಿನ ಯುವಕರಿಗೆ ಕೆಲವು ದಶಕಗಳ ಹಿಂದೆ ಪರಿಸ್ಥಿತಿ ಎಷ್ಟು ಕೆಟ್ಟದಾಗಿತ್ತು ಎಂದು ತಿಳಿದಿಲ್ಲ” ಎಂದು ಹೇಳಿದರು.