ಮುಖದ ಮೇಲೆ 2 ಸೊಂಡಿಲು.. ಚೂಪಾದ ಹಲ್ಲುಗಳು.. – ಡೈನೋಸಾರ್‌ಗಿಂತ ಮೊದಲು ಭೂಮಿ ಮೇಲೆ ಬದುಕಿದ್ದ ದೈತ್ಯ ಜೀವಿ ಇದು!  

ಮುಖದ ಮೇಲೆ 2 ಸೊಂಡಿಲು.. ಚೂಪಾದ ಹಲ್ಲುಗಳು.. – ಡೈನೋಸಾರ್‌ಗಿಂತ ಮೊದಲು ಭೂಮಿ ಮೇಲೆ ಬದುಕಿದ್ದ ದೈತ್ಯ ಜೀವಿ ಇದು!  

ಭೂಮಿಯ ಮೇಲೆ ಇತ್ತು ಎಂದು ಹೇಳಲಾಗುತ್ತಿರುವ ಡೈನೋಸಾರ್‌ ದೈತ್ಯ ಪ್ರಾಣಿ ಅಂತಾ ಅನಾದಿಕಾಲದಿಂದಲೂ ನಾವು ಕೇಳುತ್ತಾ ಬಂದಿದ್ದೇವೆ. ದೈತ್ಯ ಡೈನೋಸಾರ್‌ಗಳನ್ನು ನಾವು ಸಿನಿಮಾ, ಕಾರ್ಟೂನ್‌ಗಳಲ್ಲಿ ನೋಡಿದ್ದೇವೆ.  ಅವುಗಳ ಮುಂದೆ ಹುಲಿ, ಸಿಂಹಗಳಂತಹ ಕ್ರೂರ ಪ್ರಾಣಿಗಳು ಕೂಡ ಇರುವೆಗಳಂತೆ ಕಾಣುತ್ತವೆ. ಅವುಗಳು ಬಾಯಿ ಬಿಟ್ಟರೆ ಸಾಕು ಬೆಂಕಿಯನ್ನೇ ಉಗುಳುತ್ತವೆ. ಡೈನೋಸಾರ್‌ ಗಳ ಸ್ಟೋರಿಯನ್ನು ಕೇಳಿದಾಗ ಮೈ ನಡುಕ ಹುಟ್ಟುತ್ತೆ. ಆದ್ರೆ ಈ ಭೂಮಿ ಮೇಲೆ ಡೈನೋಸಾರ್‌ಗಿಂತಲೂ ದೊಡ್ಡ ಪ್ರಾಣಿಯೊಂದು ಇತ್ತು ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

ಹೌದು.. ಸಾಮಾನ್ಯವಾಗಿ ಭೂಮಿ ಮೇಲೆ ಜೀವಿಸುತ್ತಿದ್ದ ದೈತ್ಯ ಪ್ರಾಣಿ ಡೈನೋಸಾರ್‌ ಮಾತ್ರ ಎಂದು ಅಂದುಕೊಂಡಿದ್ದೆವು. ಆದರೆ ಈಗ ಡೈನೊಸಾರ್ ಗಿಂತಲೂ ದೊಡ್ಡ ಜೀವಿ ಇತ್ತು ಎನ್ನುವುದು ಬೆಳಕಿಗೆ ಬಂದಿದೆ. ಹಿಂದೆ ಡೈನೊಸಾರ್ ಮೊಟ್ಟೆ ಹಾಗೂ ಪಳೆಯುಳಿಕೆಗಳು ಸಿಕ್ಕಂತೆಯೇ ಈಗ ಡೈನೊಸಾರ್ ಗಿಂತಲೂ ಮೊದಲು ಅಸ್ತಿತ್ವದಲ್ಲಿದ್ದ ಅಥವಾ ಡೈನೊಸಾರ್ ಅವಧಿಯಲ್ಲೇ ಇದ್ದ ಒಂದು ದೊಡ್ಡ ಪ್ರಾಣಿಯ ಪಳೆಯುಳಿಕೆ ದೊರಕಿದೆ. ಈ ಜೀವಿಗೆ ಚೂಪಾದ ಹಲ್ಲುಗಳು ಮತ್ತು ಮುಖದ ಮೇಲೆ ಎರಡು ಸೊಂಡಿಲು ಇದೆ. ಬಹುಶಃ ಈ ಜೀವಿಯೂ ಡೈನೊಸಾರ್ ಯುಗಕ್ಕೆ ಅಥವಾ ಅದಕ್ಕಿಂತ ಮುಂಚೆಯೇ ಇತ್ತು ಎನ್ನುವುದನ್ನು ವಿಜ್ಞಾನಿಗಳು ಕಂಡುಹಿಡಿಸಿದ್ದಾರೆ. ದೈತ್ಯ ಪ್ರಾಣಿಗಳ ಅವಶೇಷಗಳು ಸಿಕ್ಕಂತೆ ಅವುಗಳ ಬಗೆಗಿನ ಮಾಹಿತಿಗಳು ಕೂಡ ಮುನ್ನಲೆಗೆ ಬರುತ್ತಿವೆ.

ಇದನ್ನೂ ಓದಿ: ಭೂಮಿಯ ವಿಕಸನಕ್ಕೆ ಸೂರ್ಯನೇ ಶಕ್ತಿ – ಬೆಂಕಿಯ ಉಂಡೆಯಂತಿದ್ದ ಭೂಮಿ ಅಸ್ತಿತ್ವ ಶುರುವಾಗಿದ್ದು ಎಲ್ಲಿಂದ?

26 ವರ್ಷದ ಹಿಂದೆ ಅಂದರೆ 1997 ರಲ್ಲಿ ಆಸ್ಟ್ರೇಲಿಯಾದ ಒಬ್ಬ ಕೋಳಿ ಸಾಕಿದವನಿಗೆ ಒಂದು ದೈತ್ಯಾಕಾರದ ಪಳೆಯುಳಿಕೆ ಸಿಕ್ಕಿತ್ತು. ಆದರೆ ಆ ಸಮಯದಲ್ಲಿ ವಿಜ್ಞಾನಿಗಳಿಗೆ ಅದು ಯಾವ ಜೀವಿ, ಅದರ ಹೆಸರೇನು ಎಂಬ ಪೂರ್ವಾಪರಗಳ ಬಗ್ಗೆ ವಿಜ್ಞಾನಿಗಳಿಗೂ ತಿಳಿದಿರಲಿಲ್ಲ. ಹಲವು ವರ್ಷಗಳ ಸತತ ಸಂಶೋಧನೆಯಿಂದ ಈಗ ಆ ಜೀವಿಯ ಬಗ್ಗೆ ಮಾಹಿತಿಗಳು ಸಿಕ್ಕಿವೆ. ಇದು ಮೊಸಳೆಯನ್ನೇ ಹೋಲುವ ದೊಡ್ಡ ಜೀವಿಯಾಗಿದೆ. ಆದರೆ ಇದರ ಮುಖದ ಮೇಲೆ ಇರುವ ಎರಡು ಸೊಂಡಿಲು ಇದನ್ನು ಮೊಸಳೆಗಿಂತ ಭಿನ್ನವಾಗಿಸಿದೆ. ವಿಜ್ಞಾನಿಗಳು ಈ ಜೀವಿಗೆ ಅರೆನಾರೆಪೆಟನ್ ಸುಪಿನಾಟಸ್ ಎಂದು ಹೆಸರಿಟ್ಟಿದ್ದಾರೆ. ಇದೊಂದು ಹರಿದಾಡುವ ಪ್ರಾಣಿಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಅಪರೂಪದ ಜೀವಿಯ ಬಗ್ಗೆ ತಿಳಿದುಕೊಳ್ಳಲು ವಿಜ್ಞಾನಿಗಳು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಬರೋಬ್ಬರಿ 26 ವರ್ಷ,  ಈ ಜೀವಿಯನ್ನು ಹೇಗೆ ಪತ್ತೆ ಮಾಡಬೇಕೆನ್ನುವ ಚಿಂತೆ ವಿಜ್ಞಾನಿಗಳನ್ನು ಕಾಡುತ್ತಿತ್ತು. ಕೊನೆಗೆ ಎಕ್ಸ – ರೇ ಸಹಾಯದಿಂದ ಈ ಜೀವಿಯನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ. ಅರೆನಾರೆಪೆಟನ್ ಸುಪಿನಾಟಸ್ ಜೀವಿಯ ಎಕ್ಸ ರೇ ತೆಗೆಯುವ ಮಷಿನ್ ಕೂಡ ಸಾಮಾನ್ಯದ್ದಾಗಿರಲಿಲ್ಲ. ವಿದೇಶಗಳಿಂದ ತಂದ ಸರಕುಗಳನ್ನು ಸ್ಕ್ಯಾನ್ ಮಾಡಲು ಬಳಸುವ ಮಷಿನ್ ಸಹಾಯದಿಂದ ಈ ಜೀವಿಯ ಸ್ಕ್ಯಾನಿಂಗ್ ನಡೆಸಲಾಗಿತ್ತು. ಹಾಗಾಗಿಯೇ ಅನೇಕ ವರ್ಷಗಳ ನಂತರ ಈ ಜೀವಿ ಯಾವ ಜಾತಿಗೆ ಸೇರಿದೆ ಎನ್ನುವುದು ತಿಳಿದುಬಂತು.

ಈ ಸಂಶೋಧನೆಯಿಂದ ಈ ಜೀವಿ ಮೊಸಳೆ ಜಾತಿಗೆ ಸೇರಿದೆ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಇದರ ಹೊರತಾಗಿ ಈ ಜೀವಿ ಯಾವುದೋ ವಿಶೇಷ ಜಾತಿಗೆ ಸೇರಿದ ಪ್ರಾಣಿಯೂ ಆಗಿರಬಹುದು. ಇಂತಹ ಜೀವಿ ಭೂಮಿಯ ಮೇಲೆ ಇತ್ತು ಎನ್ನುವ ಕುರುಹು ಕೂಡ ಈ ಮೊದಲು ಯಾರಿಗೂ ತಿಳಿಯದೇ ಇರಬಹುದು. ಈ ಪ್ರಾಣಿಯ ಪಳೆಯುಳಿಕೆಯ ಕುರಿತು ಅಧ್ಯಯನ ನಡೆಸಿದ ವಿಜ್ಞಾನಿಗಳು ಅರೆನಾರೆಪೆಟನ್ ಸುಪಿನಾಟಸ್ ಹೆಚ್ಚಿನ ಸಮಯ ನೀರಿನಲ್ಲೇ ಕಳೆಯುತ್ತಿತ್ತು. ಆಹಾರಕ್ಕಾಗಿ ನೀರಿನಲ್ಲಿರುವ ಮೀನುಗಳನ್ನೇ ಬೇಟೆಯಾಡಿ ತಿನ್ನುತ್ತಿತ್ತು ಎಂದಿದ್ದಾರೆ. ಭೂಮಿ ತನ್ನಲ್ಲಿ ಅನೇಕ ಅಚ್ಚರಿ ಹಾಗೂ ಅದ್ಭುತಗಳನ್ನು ಹೊಂದಿದೆ. ಎಲ್ಲೋ ಅಪರೂಪಕ್ಕೊಮ್ಮೆ ಅಂತಹ ಅದ್ಭುತಗಳು ಮನುಷ್ಯರ ಕಣ್ಣಿಗೆ ಕಾಣಿಸಿತ್ತವೆ ಎನ್ನುವುದು ಇಂತಹ ಸಂಗತಿಗಳಿಂದ ಸ್ಪಷ್ಟವಾಗುತ್ತದೆ.

suddiyaana