ಈ ಮಂಚದ ಬೆಲೆ ಬರೋಬ್ಬರಿ 1,12,075 ರೂಪಾಯಿ – ಅಂತಹ ವಿಶೇಷತೆ ಏನೀದೆ ಗೊತ್ತಾ?

ಈ ಮಂಚದ ಬೆಲೆ ಬರೋಬ್ಬರಿ 1,12,075 ರೂಪಾಯಿ – ಅಂತಹ ವಿಶೇಷತೆ ಏನೀದೆ ಗೊತ್ತಾ?

ಇಂದಿನ ಜಮಾನದಲ್ಲಿ ಎಲ್ಲವೂ ಬದಲಾಗುತ್ತಿದೆ. ಹಳೆಯದು, ಬೇಡ ಎಂದು ಬಿಸಾಡುವ ವಸ್ತು ಕೂಡಾ ಲಕ್ಷಾಂತರ ರೂಪಾಯಿಗೆ ಮಾರಾಟವಾಗುವುದನ್ನು ನಾವು ಕೇಳಿರುತ್ತೇವೆ. ಹರಿದ ಬಟ್ಟೆ, ಹಳೆ ಚಪ್ಪಲಿ, ಹಳೆ ಕಾಲದ ವಾಚ್ ಇವೆಲ್ಲವೂ ಊಹಿಸಿದ್ದಕ್ಕಿಂತಲೂ ಅಧಿಕ ಬೆಲೆಗೆ ಮಾರಾಟವಾಗಿರುವ ಸುದ್ದಿಗಳನ್ನು ಪತ್ರಿಕೆಗಳನ್ನು ಓದಿರುತ್ತೇವೆ. ಇದೀಗ ಉತ್ತರ ಭಾರತದಲ್ಲಿ ಹಾಗೂ ಹಲವು ಹಳ್ಳಿಗಳ ಕಡೆ ಜನ ಸಾಮಾನ್ಯರು ಬಳಸೋ ಚಾರ್ಪಾಯಿ ಅಥವಾ ಹಗ್ಗದ ಮಂಚಕ್ಕೆ ಅಮೆರಿಕದ ಇ – ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವಾಗುತ್ತಿದೆ. ಅದರ ಬೆಲೆ ಎಷ್ಟು ಎಂದು ಕೇಳಿದ್ರೆ ಶಾಕ್ ಆಗ್ತೀರಾ..

ಇದನ್ನೂ ಓದಿ: ಪ್ಲೀಸ್​ ಅಂದ್ರೆ ಇಲ್ಲಿ ಕಡಿಮೆ ಬೆಲೆಗೆ ಟೀ ಸಿಗುತ್ತೆ!: ಪ್ರೆಸ್ಟನ್​ ಕೆಫೆಯ ಮೆನು ಭಾರಿ ವೈರಲ್​

ಸಾಮಾನ್ಯವಾಗಿ ಚಾರ್ಪಾಯಿ ಅಥವಾ ಹಗ್ಗದ ಮಂಚ ಸಾವಿರಾರು ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭಿಸುತ್ತದೆ. ಆದರೆ ಅಮೆರಿಕದ ಇ – ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಾಮಾನ್ಯ ಮಂಚಕ್ಕೆ ಸಾವಿರ, ಹತ್ತು ಸಾವಿರ ಅಲ್ಲ, ಬರೋಬ್ಬರಿ 1,12,075 ರೂಪಾಯಿ ಬೆಲೆಗೆ ಮಾರಾಟವಾಗಿದೆ. ಇದರ ಬೆಲೆಯ ಫೋಟೋಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.

ಇದೇ ರೀತಿ, ಇನ್ನೂ ಕೆಲವು ವೆರೈಟಿ ಚಾರ್ಪಾಯಿಯನ್ನು ನೋಡಲು ಬಯಸಿದರೆ Etsy ಯ ವೆಬ್‌ಸೈಟ್‌ನಲ್ಲಿ ನೀವು ನಮ್ಮ ದೇಸಿ ಚಾರ್ಪಾಯಿಯ ಹಲವಾರು ಪ್ರಕಾರಗಳನ್ನು ನೋಡಬಹುದು. ಮತ್ತು ಕೆಲವು ಜನರು ನಿಜವಾಗಿಯೂ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಆ ಹಗ್ಗದ ಮಂಚಗಳನ್ನು ಖರೀದಿಸಸಿದ್ದಾರೆ. ಈ ವೆಬ್ ಸ್ಐಟ್ ನಲ್ಲಿ ಉತ್ಪನ್ನದ ಸ್ಟಾಕ್‌ ಕಡಿಮೆ ಇದೆ ಎಂಬ ಸಂದೇಶವನ್ನು ಸಹ ಪಟ್ಟಿ ಮಾಡಲಾಗಿದೆ. ನಾಲ್ಕು ಮಂಚಗಳು ಮಾತ್ರ ಸ್ಟಾಕ್‌ನಲ್ಲಿದೆ ಹಾಗೂ ಒಂದು ಮಂಚವನ್ನು ಖರೀದಿದಾರರೊಬ್ಬರ ಕಾರ್ಟ್‌ನಲ್ಲಿದೆ ಎಂದು ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.

ಕೆಲ ದಿನಗಳ ಹಿಂದೆ ಬ್ಯಾಲೆನ್ಸಿಯಾಗ ಎಂಬ ಐಷಾರಾಮಿ ಬ್ರ್ಯಾಂಡ್‌ ಈ ಹಿಂದೆ ಕಸದ ಬ್ಯಾಗ್‌ಗಳಿಂದ ಸ್ಫೂರ್ತಿ ಪಡೆದ ಬ್ಯಾಗ್‌ವೊಂದನ್ನಿ ಬಿಡುಗಡೆ ಮಾಡಿತು. ಈ ಬ್ರಾಂಡ್ ಬ್ಯಾಗ್ ಅನ್ನು 1.4 ಲಕ್ಷ ರೂ.ಗೆ ಮಾರಾಟ ಮಾಡಿದೆ.

suddiyaana