ಈ ಕೋಳಿ ಮರಿಗೆ ಎರಡಲ್ಲ, ನಾಲ್ಕು ಕಾಲು – ಅಪರೂಪದ ದೃಶ್ಯ

ಈ ಕೋಳಿ ಮರಿಗೆ ಎರಡಲ್ಲ, ನಾಲ್ಕು ಕಾಲು – ಅಪರೂಪದ ದೃಶ್ಯ

ಕೋಳಿಗೆ ಎರಡು ಕಾಲು ಇರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಅದು ಸಾಮಾನ್ಯ ವಿಚಾರ. ಎಂದಾದರೂ ಕೋಳಿಗೆ ನಾಲ್ಕು ಕಾಲುಗಳಿವೆ ಅಂತಾ ಕೇಳಿದ್ದೀರಾ? ಆರೇ, ಇದೇನಿದು ವಿಚಿತ್ರ ಎಂದರೂ ಇದು ಸತ್ಯ. ಇತ್ತೀಚೆಗಷ್ಟೇ ಜನಿಸಿದ ಕೋಳಿ ಮರಿಗೆ ನಾಲ್ಕು ಕಾಲುಗಳಿವೆ ಎಂದು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ವೈರಲ್ ಆಗುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಕೋಳಿ ಪಕ್ಕ ಕುಳಿತಿದ್ದಾನೆ. ಬಳಿಕ ಅವನ ಬಳಿಯಲ್ಲೇ ಓಡಾಡುತ್ತಿರುವ ಕೋಳಿ ಮರಿಯೊಂದನ್ನು ಹಿಡಿದು, “ಇಲ್ಲಿ ನಾಲ್ಕು ಕಾಲಿರುವ ಕೋಳಿ ಮರಿ ಜನಿಸಿದೆ. ಈ ಮರಿ ಆರೋಗ್ಯಕರವಾಗಿದೆ” ಎಂದು ಹೇಳಿದ್ದಾನೆ. ಅಲ್ಲದೇ ನಾಲ್ಕು ಕಾಲಿನ ಕೋಳಿ ಮರಿ ದೊಡ್ಡದಾದ ಬಳಿಕ ಮತ್ತೆ ವಿಡಿಯೋ ಮಾಡಿ ತೋರಿಸುತ್ತೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ.

ಇದನ್ನೂ ಓದಿ: ಹಿಮಸೀಳಿ ಸಾಗುವ ಯೋಧ – ಯೋಧನ ನಗುಮುಖಕ್ಕೆ ಸೆಲ್ಯೂಟ್ ಎಂದ ನೆಟ್ಟಿಗರು

@saquib12pathans ಎಂಬ ಬಳಕೆದಾರರು ಈ ವೀಡಿಯೊವನ್ನು  ಇನ್​ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊದ ಶೀರ್ಷಿಕೆಯು “ಕೋಳಿ ಮರಿಯ ನಾಲ್ಕು ಕಾಲುಗಳು” ಎಂದು ನೀಡಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. “ಇದು ಅದ್ಭುತವಾಗಿದೆ. ಕೋಳಿಗೆ ನಾಲ್ಕು ಕಾಲುಗಳು ಹೇಗೆ. ನಂಬಲು ಸಾಧ್ಯವಿಲ್ಲ” ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

suddiyaana