ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ.. – ನಗ್ನ ಯುವತಿಯ ಮೈಮಾಟಕ್ಕೆ ಲಕ್ಷ ಲಕ್ಷ ಕಳೆದುಕೊಂಡ!

ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ.. – ನಗ್ನ ಯುವತಿಯ ಮೈಮಾಟಕ್ಕೆ ಲಕ್ಷ ಲಕ್ಷ ಕಳೆದುಕೊಂಡ!

ಸೋಶಿಯಲ್‌ ಮೀಡಿಯಾದಲ್ಲಿ ಪಳ ಪಳ ಹೊಳೆಯುವ, ತೆಳ್ಳನೆ ಬೆಳ್ಳನೆ ಇರುವ ಯುವತಿಯರ ಫೋಟೋ ನೋಡಿದ ತಕ್ಷಣ ಕೆಲ ಯುವಕರು ಸಿಕ್ಕಿದ್ದೇ ಚಾನ್ಸ್‌ ಅಂತಾ ಫ್ರೆಂಡ್‌ಶಿಪ್‌ ಮಾಡ್ತಾರೆ. ದಿನವಿಡೀ ಅವರೊಂದಿಗೆ ಚಾಟ್‌, ವಿಡಿಯೋ ಕಾಲ್‌ ಮಾಡಿ ಮಾತನಾಡುತ್ತಾ ಕಾಲ ಕಳೀತಾರೆ. ಹೀಗೆ ಸೋಶಿಯಲ್‌ ಮೀಡಿಯಾದಲ್ಲಿ ಫ್ರೆಂಡ್‌ಶಿಪ್‌ ಬೆಳೆಸುವ ಮುನ್ನ ಎಚ್ಚರ. ಏಕೆಂದರೆ ಹೀಗೆ ಬಣ್ಣಕ್ಕೆ ಮರುಳಾಗಿ ಇಲ್ಲೊಬ್ಬ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ.

ಏನಿದು ಘಟನೆ?

ಹೌದು, ಇತ್ತೀಚಿಗೆ ಸೋಶಿಯಲ್‌ ಮೀಡಿಯಾದಲ್ಲಿ ಅಪರಿಚಿತ ಯುವತಿಯರನ್ನು ಅನೇಕರು ಮೋಸ ಹೋಗುತ್ತಿದ್ದಾರೆ. ಅವರ ವೈಯಾರದ ಮಾತು ನಂಬಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಲ್ಲೊಬ್ಬ ಯುವಕ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದ. ಈತ ಫೇಕ್‌ ಅಕೌಂಟ್ ಕ್ರಿಯೇಟ್ ಮಾಡಿ ಅಪರಿಚಿತ ಹುಡುಗಿಯೊಂದಿಗೆ ಚಾಟ್ ಮಾಡ್ತಿದ್ದ. ಇದೀಗ ಈತನೇ ಈಗ ಹರಕೆಯ ಕುರಿ ಆಗಿದ್ದಾನೆ. ಆನ್‌ಲೈನ್ ಚಾಟ್‌ನಲ್ಲಿ ಈತನಿಗೆ ಯುವತಿ ಬೆತ್ತಲೆ ವೀಡಿಯೋ ತೋರಿಸಿ ಯಾಮಾರಿಸಿದ್ದು, ಇದರಿಂದ ಈತನೂ ಆನ್‌ಲೈನ್‌ ವೀಡಿಯೋ ಕಾಲ್‌ನಲ್ಲಿ ಬೆತ್ತಲಾಗಿದ್ದಾನೆ. ಇದನ್ನೇ ರೆಕಾರ್ಡ್ ಮಾಡಿಕೊಂಡ ಆಕೆ ಹಣ ನೀಡು ಇಲ್ಲ ಮಾನ ಹರಾಜು ಮಾಡುವೆ ಎಂದು ಬ್ಲ್ಯಾಕ್‌ ಮೇಲ್‌ ಶುರು ಮಾಡಿದ್ದಾಳೆ. ಇದರಿಂದಾಗಿ ಮಾನಕ್ಕೆ ಅಂಜಿದ ಆತ ಲಕ್ಷ ಲಕ್ಷ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡು ಅಂತ ಹೇಳಿದ್ದಕ್ಕೆ ಜಗಳ – ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ!

ನ್ಯೂಸ್‌ ಚಾನಲ್‌ಗೆ ವಿಡಿಯೋ ನೀಡುವುದಾಗಿ ಬ್ಲ್ಯಾಕ್‌ ಮೇಲ್‌!

ಹುಬ್ಬಳ್ಳಿಯ ನಗರದ ದತ್ತಾತ್ರೇಯ ಎಂಬಾತ ಹಣ ಕಳೆದುಕೊಂಡ ಯುವಕನಾಗಿದ್ದಾನೆ. ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಳು. ಬಳಿಕ ಸಲುಗೆ ಬೆಳೆಸಿಕೊಂಡು ನಗ್ನವಾಗಿ ವೀಡಿಯೋ ಕಾಲ್‍ನಲ್ಲಿ ಮಾತಾಡುತ್ತಿದ್ದಳು. ಅಲ್ಲದೇ ಯುವಕನಿಗೂ ನಗ್ನವಾಗಲು ಸೂಚಿಸಿದ್ದಳು. ಕೆಲವು ದಿನಗಳು ಹೀಗೆ ಇಬ್ಬರೂ ಮಾತಾಡಿದ್ದು, ಬಳಿಕ ಯುವಕನ ವೀಡಿಯೋಗಳನ್ನು ಸುದ್ದಿವಾಹಿನಿಗಳಿಗೆ ನೀಡುವುದಾಗಿ ಅಪರಿಚಿತರು ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ. ಅಲ್ಲದೇ ಜೀವನವನ್ನು ಹಾಳು ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆತ ಆರೋಪಿಸಿದ್ದಾನೆ.

ದೆಹಲಿ ಪೊಲೀಸ್‌ ಹೆಸರಲ್ಲಿ ಬ್ಲ್ಯಾಕ್‌ ಮೇಲ್‌!

ಯುವಕನಿಗೆ ದೆಹಲಿ ಪೊಲೀಸರ ಹೆಸರಲ್ಲಿ ಫೋನ್‌ ಮಾಡಿ ವಂಚಿಸಿದ್ದಾರೆ. ದೆಹಲಿ ಪೊಲೀಸರು ಮಾತನಾಡುತ್ತಿರುವುದಾಗಿ ಹೇಳಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಹಣದ ಬೇಡಿಕೆಯಿಟ್ಟಿದ್ದಾರೆ. ಅದರಂತೆ ದತ್ತಾತ್ರೇಯ ಹಂತ ಹಂತವಾಗಿ ವಂಚಕರಿಗೆ 2.40 ಲಕ್ಷ ರೂ. ಹಣ ನೀಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ವಂಚಕರು ಕೆಲವು ದಿನಗಳ ಬಳಿಕ ಯೂಟ್ಯೂಬರ್ ಹೆಸರಲ್ಲಿ ಬೆದರಿಕೆ ಹಾಕಿ ಮತ್ತೆ ಹಣದ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಆತಂಕಗೊಂಡ ಯುವಕ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಸಂಬಂಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shwetha M