ಪ್ಲೀಸ್​ ಅಂದ್ರೆ ಇಲ್ಲಿ ಕಡಿಮೆ ಬೆಲೆಗೆ ಟೀ ಸಿಗುತ್ತೆ!: ಪ್ರೆಸ್ಟನ್​ ಕೆಫೆಯ ಮೆನು ಭಾರಿ ವೈರಲ್​

ಪ್ಲೀಸ್​ ಅಂದ್ರೆ ಇಲ್ಲಿ ಕಡಿಮೆ ಬೆಲೆಗೆ ಟೀ ಸಿಗುತ್ತೆ!: ಪ್ರೆಸ್ಟನ್​ ಕೆಫೆಯ ಮೆನು ಭಾರಿ ವೈರಲ್​

ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುವುದು ಒಳ್ಳೆಯ ವ್ಯಕ್ತಿಯ ಲಕ್ಷಣ. ಆದರೂ, ಅನೇಕರು ತಮ್ಮ ಸುತ್ತಮುತ್ತಲಿನ ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಈ ಮೌಲ್ಯವನ್ನು ಕಾರ್ಯರೂಪಕ್ಕೆ ತರಲು ಯುಕೆಯಲ್ಲಿನ ಕೆಫೆಯು ತನ್ನ ಗ್ರಾಹಕರ ಸಭ್ಯತೆಯ ಮಟ್ಟಕ್ಕೆ ಅನುಗುಣವಾಗಿ ಮೆನುವೊಂದನ್ನು ತಯಾರಿಸಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಯುವಕನಂತಾಗಲು ನಿತ್ಯ 16 ಕೋಟಿ ರೂ. ಖರ್ಚು! – ಹೇಗಿದೆ ಗೊತ್ತಾ ಈತನ ದಿನಚರಿ?

ಯಕೆಯ ಪ್ರೆಸ್ಟನ್‌ನಲ್ಲಿರುವ ಚಾಯ್ ಸ್ಟಾಪ್ ಎಂಬ ಕೆಫೆ ಹೊಸ ನಿಯಮವನ್ನು ಪರಿಚಯಿಸಿದೆ. ಅದರ ಪ್ರಕಾರ ಗ್ರಾಹಕರು ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ವರ್ತಿಸದಿದ್ದರೆ ಅವರ ಬಿಲ್‌ನ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರು ಸೌಜನ್ಯದಿಂದ ವರ್ತಿಸಿದರೆ ಅವರು ಕಡಿಮೆ ಬೆಲೆಗೆ ಚಹಾ ಕುಡಿಯಬಹುದಾಗಿದೆ.

ವರದಿಯೊಂದರ ಪ್ರಕಾರ, ಕೆಫೆಯನ್ನು 29 ವರ್ಷದ ಉಸ್ಮಾನ್ ಹುಸೇನ್ ಅವರು ಕಳೆದ ವರ್ಷ ಮಾರ್ಚ್​ನಲ್ಲಿ ಪ್ರಾರಂಭಿಸಿದ್ದಾರೆ. ಇಲ್ಲಿ ಚಹಾ, ಡೋನಟ್, ಬೀದಿ ಬದಿ ಆಹಾರ ಮತ್ತು ಸಿಹಿತಿಂಡಿಗಳನ್ನು ಮಾರಾಟ ಮಾಡುವ ಕನಸು ಹೊಂದಿದ್ದಾರೆ. ಗ್ರಾಹಕರು ವ್ಯಾಪಾಸ್ಥರೊಂದಿಗೆ ವಿನಯದಿಂದ ವರ್ತಿಸಬೇಕೆಂಬ ಉದ್ದೇಶದಿಂದ ಈ ಮೆನುವನ್ನು ತಯಾರಿಸಿದ್ದಾರಂತೆ.

ಈ ಮೆನುವಿನ ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಭಾರಿ ವೈರಲ್​ ಆಗುತ್ತಿದೆ. ಈ ಕಾರ್ಯವನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಸೌಜನ್ಯಕ್ಕೆ ಏನು ವೆಚ್ಚವಾಗುವುದಿಲ್ಲ ಇದನ್ನು ಇಷ್ಟಪಡುತ್ತೇನೆ ಎಂದು ಒಬ್ಬರು ಬರೆದುಕೊಂಡ್ರೆ, ಇನ್ನೊಬ್ಬರು ಇದೊಂದು ಜಗತ್ತಿಗೆ ಉತ್ತಮ ಸಂದೇಶ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಕೆಫೆಗೆ ಬರುವ ಗ್ರಾಹಕರು ಆರಂಭದಲ್ಲಿ ತುಂಬಾ ನಯವಾಗಿ ಆರ್ಡರ್​ ಕೇಳುತ್ತಾರೆ. ಆದರೆ ಸ್ವಲ್ಪ ಸಮಯದ ಬಳಿಕ ಅವರ ನಡವಳಿಕೆ ಬದಲಾಗುತ್ತದೆ ಎಂದು ಕೆಫೆ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

suddiyaana