ಅಪಘಾತವಾಗಿ 50 ವರ್ಷಗಳ ನಂತರ ಈ ಕಾರಿಗೆ ಶುಕ್ರದೆಸೆ! – ತುಕ್ಕು ಹಿಡಿದು ಮೂಲೆ ಗುಂಪಾಗಿದ್ದ ಕಾರು ಭರ್ಜರಿ ಮೊತ್ತಕ್ಕೆ ಸೇಲ್

ಅಪಘಾತವಾಗಿ 50 ವರ್ಷಗಳ ನಂತರ ಈ ಕಾರಿಗೆ ಶುಕ್ರದೆಸೆ! – ತುಕ್ಕು ಹಿಡಿದು ಮೂಲೆ ಗುಂಪಾಗಿದ್ದ ಕಾರು ಭರ್ಜರಿ ಮೊತ್ತಕ್ಕೆ ಸೇಲ್

ಅಪಘಾತದಲ್ಲಿ ವಾಹನಗಳಿಗೆ ಡ್ಯಾಮೆಜ್‌ ಆದರೆ  ಅದನ್ನು ರಿಪೇರಿ ಮಾಡಿಸಬೇಕಾಗುತ್ತದೆ. ಇದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಕೆಲವು ವಾಹನಗಳಂತೂ ಸಂಪೂರ್ಣ ಜಖಂಗೊಂಡಿರುತ್ತದೆ. ಅದನ್ನು ರಿಪೇರಿ ಮಾಡಲು ಸಾಧ್ಯ ಆಗೋದಿಲ್ಲ. ಮಾರಾಟ ಮಾಡಿದ್ರೂ ಅರ್ಧ ಬೆಲೆಯೂ ಸಿಗುವುದಿಲ್ಲ. ಆದರೆ ಇಲ್ಲೊಂದು ಕಾರು ಅಪಘಾತದಲ್ಲಿ ಸಂಪೂರ್ಣ ನಜ್ಜು ಗುಜ್ಜು ಆಗಿದೆ. ತುಕ್ಕು ಹಿಡಿದು ಯಾರಿಗೂ ಬೇಡವಾದ ಸ್ಥಿತಿಯಲ್ಲಿದ್ದರೂ £ 1.5 ಮಿಲಿಯನ್‌ ಪೌಂಡ್‌ ಬೆಲೆಗೆ ಮಾರಾಟವಾಗಿದೆ.

ಸಾಮಾನ್ಯವಾಗಿ ಅಪಘಾತಕ್ಕೀಡಾದ ವಾಹನವನ್ನು ಯಾರೂ ಖರೀದಿಸಲು ರೆಡಿ ಇರಲ್ಲ. ಕೊಂಡರೂ ಅರ್ಧ ಬೆಲೆಗೆ ಮಾರಾಟವಾಗುತ್ತದೆ. ಆದರೆ 1960ರಲ್ಲಿ ರೇಸೊಂದರಲ್ಲಿ ಭಾಗಿಯಾಗಿ ನಂತರ ಅಪಘಾತಕ್ಕೀಡಾಗಿ ತುಕ್ಕು ಹಿಡಿದ ಸ್ಥಿತಿಯಲ್ಲಿದ್ದ ಕಾರೊಂದು ಬರೋಬ್ಬರಿ £ 1.5 ಮಿಲಿಯನ್‌ ಪೌಂಡ್‌  ಅಂದರೆ 15,88,38,060 ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿದೆ.

ಇದನ್ನೂ ಓದಿ: ಸಾಕು ನಾಯಿಗಳು ಕಚ್ಚಾಡಿಕೊಂಡಿತೆಂದು ಮಾಲೀಕರ ಜಗಳ! – ನಡೆದೇ ಹೋಯ್ತು ಘೋರ ದುರಂತ!

ಪಿನಿನ್ ಫರೀನಾ ಕಾರು ಡಿಸೈನ್‌ ಸಂಸ್ಥೆಗೆ (ಪ್ರಸ್ತುತ ಈ ಸಂಸ್ಥೆ ಮಹೀಂದ್ರಾ ಗ್ರೂಪ್ ಮಾಲೀಕತ್ವದಲ್ಲಿದೆ) ಸೇರಿದ 1954ರಲ್ಲಿ ನಿರ್ಮಾಣವಾದ  500 ಮೊಂಡಿಯಲ್ ಸ್ಪೈಡರ್ ಸರಣಿ ಕಾರು ಇದಾಗಿದೆ. ಪಿನಿನ್ ಫರೀನಾ ಸಂಸ್ಥೆ ನಿರ್ಮಾಣ ಮಾಡಿದ 13 ಕಾರುಗಳಲ್ಲಿ ಇದು ಕೂಡ ಒಂದಾಗಿತ್ತು. ಈ ಕಾರನ್ನು ಮಾಜಿ-ಸ್ಕುಡೆರಿಯಾ ಫೆರಾರಿ ತಂಡದ ಚಾಲಕ ಫ್ರಾಂಕೊ ಕೊರ್ಟೆಸ್ ಅವರು ವಿಶ್ವ ಪ್ರಸಿದ್ಧ ಕಾರು ರೇಸಾಗಿದ್ದ ಮಿಲ್ಲೆ ಮಿಗ್ಲಿಯಾದಲ್ಲಿ ಮುನ್ನಡೆಸಿದ್ದರು. ಆದರೆ ಈ ಕಾರಿ 1960 ರಲ್ಲಿ ಈ ಕಾರು ಅಪಘಾತಕ್ಕೀಡಾಗಿ ಸುಟ್ಟು ಹೋಗಿತ್ತು. ಬಳಿಕ ಈ ಕಾರು ಮೂಲೆ ಗುಂಪಾಗಿ ತುಕ್ಕು ಹಿಡಿದ ಸ್ಥಿತಿಯಲ್ಲಿತ್ತು. ಇದೀಗ ಈ ಕಾರು ದಾಖಲೆಯ ಬೆಲೆಗೆ (1. 5 ಮಿಲಿಯನ್ ಪೌಂಡ್‌) ಮಾರಾಟವಾಗಿದ್ದು, ಈ ಆಟೋಮೊಬೈಲ್ ಲೋಕದಲ್ಲಿ ಅಚ್ಚರಿ ಮೂಡಿಸಿದೆ.

1960ಕ್ಕೂ ಮೊದಲು ಈ ಮೊಂಡಿಯಲ್ ಕಾರು ಅಮೆರಿಕಾದ ರೇಸೊಂದರಲ್ಲಿ ಭಾಗಿಯಾಗಿ 147 ಎಂಪಿಹೆಚ್ ವೇಗದಲ್ಲಿ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಇದರ ಅವಶೇಷಗಳನ್ನು ಅದೇ ಹಾನಿಗೊಳಗಾದ ಸ್ಥಿತಿಯಲ್ಲೇ ಸಂರಕ್ಷಿಸಿಡಲಾಗಿತ್ತು. ಇದು ಫ್ಲೋರಿಡಾದ ರಿಯಲ್ ಎಸ್ಟೇಟ್ ಡೆವಲಪರ್ ದಿವಂಗತ ವಾಲ್ಟರ್ ಮೆಡ್ಲಿನ್ ಅವರ ಎಸ್ಟೇಟ್‌ನಲ್ಲಿ ಇಡಲಾಗಿತ್ತು. ಡೆವಲಪರ್ ವಾಲ್ಟರ್ ಮೆಡ್ಲಿನ್ ಅವರು ಇದನ್ನು 1978 ರಲ್ಲಿ ಖರೀದಿಸಿದ್ದರು.  ಆದರೆ ಕಳೆದ ವರ್ಷ ಅವರು ಮೃತಪಟ್ಟ ನಂತರ ಈ ಪೆರಾರಿ ಕಾರಿನ ಅವಶೇಷ ಬೆಳಕಿಗೆ ಬಂದಿತ್ತು. ಇದರ ಜೊತೆ ಅವರ ಸಂಗ್ರಹದಲ್ಲಿದ್ದ ಇನ್ನು 20 ಫೆರಾರಿ ಕಾರು ಬೆಳಕಿಗೆ ಬಂದಿತ್ತು.  ನಂತರ ಈ ಕಾರಿನ ಅವಶೇಷವನ್ನು ಕ್ಯಾಲಿಫೋರ್ನಿಯಾದಲ್ಲಿರುವ ಪ್ರಸಿದ್ಧ ಹರಾಜು ಸಂಸ್ಥೆಯಾದ ಆರ್‌ಎಂ ಸೋಥೆಬಿಯಾ ತನ್ನ ಸುಪರ್ದಿಗೆ ಪಡೆದಿತ್ತು.

ಈ ಕಾರು ಪ್ರಸಿದ್ಧ ರೇಸ್‌ಗಳಾದ ಮಿಲ್ಲೆ ಮಿಗ್ಲಿಯಾ, ಟಾರ್ಗಾ ಫ್ಲೋರಿಯೊ, ಮತ್ತು ಇಮೋಲಾ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಇದು ಆ ಅವಧಿಯಲ್ಲಿ ವ್ಯಾಪಕವಾಗಿ ರೇಸ್‌ನಲ್ಲಿ ಭಾಗಿಯಾದ ಖ್ಯಾತಿ ಗಳಿಸಿತ್ತು. ಆದರೆ ಅಪಘಾತವಾದ ನಂತರ 50 ವರ್ಷಗಳ ನಂತರ ಇದಕ್ಕೆ ಶುಕ್ರದೆಸೆ ಬಂದಿದ್ದು, ಬರೋಬ್ಬರಿ ಬೆಲೆಗೆ ಖರೀದಿಯಾಗಿದೆ. ಇದನ್ನು ನವೀಕರಿಸಿದ ನಂತರ ಹಲವು ಕಾರು ರೇಸ್‌ಗಳ ಗೆಲುವಿಗೆ ಕಾರಣವಾಗಿರುವ ಈ ಕಾರು ರೋಮಾಂಚಕ ಚಾಲನಾ ಅನುಭವ ನೀಡುವ ಭರವಸೆಯಲ್ಲಿದ್ದಾರೆ ಖರೀದಿದಾರರು. ಆದರೆ ಈಗ ಹೊಸದಾಗಿ ಇಷ್ಟು ಹಣ ನೀಡಿ ಕಾರು ಖರೀದಿಸಿದ ಹೊಸ ಮಾಲೀಕರ ವಿವರವನ್ನು ಸಂಸ್ಥೆ ನೀಡಿಲ್ಲ.

suddiyaana