ಯಶ್ ಜೊತೆ ರಾಮಾಯಣದಲ್ಲಿ ನಟಿಸಲ್ಲ ಎಂದ ಬಾಲಿವುಡ್ ನಟ – ಕಾರಣವೇನು ಗೊತ್ತಾ?

ನಿತೇಶ್ ತಿವಾರಿ ನಿರ್ದೇಶನದಲ್ಲಿ ‘ರಾಮಾಯಣ’ ಚಿತ್ರ ಅದ್ಧೂರಿಯಾಗಿ ಮೂಡಿ ಬರ್ತಿದೆ. ರಾವಣನ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟ ಜೈದೀಪ್ ಅಹ್ಲಾವತ್ ಗೆ ವಿಭೀಷಣ ಪಾತ್ರ ಮಾಡುವ ಅವಕಾಶ ನೀಡಲಾಗಿತ್ತು. ಆದ್ರೆ ಜೈದೀಪ್ ಈ ಆಫರ್ನ ರಿಜೆಕ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಂಬಾರ್ ಮಾಡುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ – ಕೊಲೆಯಲ್ಲಿ ಅಂತ್ಯ!
ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ವಿಭೀಷಣ ಪಾತ್ರಕ್ಕೆ ನಟ ಜೈದೀಪ್ ಅಹ್ಲಾವತ್ ಆಯ್ಕೆ ಆಗಿದ್ದಾರೆ ಎಂದು ಗುಲ್ಲಾಗಿತ್ತು. ಈ ಬಗ್ಗೆ ದಿ ಲಾಲಂಟಾಪ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸ್ವತಃ ಜೈದೀಪ್ ಅಹ್ಲಾವತ್ ಮಾತನಾಡಿದ್ದಾರೆ. ನನಗೆ ಅವಕಾಶ ಬಂದಿದ್ದು ನಿಜ. ಆದರೆ ನಾನು ನಟಿಸೋಕೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಯಶ್ ಡೇಟ್ಸ್ ಎಂದು ಅವರು ಹೇಳಿದ್ದಾರೆ.
ಯಶ್ ಜೊತೆಗೆ ಸಮಯ ಹೊಂದಿಕೆಯಾಗಲಿಲ್ಲ. ವಿಭೀಷಣನ ದೃಶ್ಯಗಳು ರಾವಣನೊಂದಿಗೆ ಇರಬೇಕಾಗಿರುವುದರಿಂದ ಅದಕ್ಕೆ ನಿರ್ದಿಷ್ಟ ಶೆಡ್ಯೂಲ್ ಅಗತ್ಯವಾಗಿತ್ತು. ಹೀಗಾಗಿ ಪಾತ್ರ ರಿಜೆಕ್ಟ್ ಮಾಡಿದೆ. ನನ್ನ ಡೇಟ್ಸ್ಗಿಂತ ರಾವಣನ ಡೇಟ್ಸ್(ಯಶ್) ಹೆಚ್ಚು ಮುಖ್ಯವಾಗಿತ್ತು ಎನಿಸುತ್ತದೆ ಎಂದು ನಟ ಜೈದೀಪ್ ಅಹ್ಲಾವತ್ ಹೇಳಿದ್ದಾರೆ

ನೋಡಿರಿ

