ಬಿ. ಟೆಕ್ ಚಾಯ್ವಾಲಿ ಚಹಾ ಪ್ರಿಯರ ಹಾಟ್ ಫೇವರೆಟ್ – ವಿದ್ಯಾರ್ಥಿನಿಯ ಸ್ಪೂರ್ತಿಯ ಕಥೆಯಿದು…

ಸಾಮಾನ್ಯವಾಗಿ ನಾವು ಚಾಯ್ವಾಲಾಗಳ ಬಗ್ಗೆ ಕೇಳಿರುತ್ತೇವೆ. ಪ್ರತಿಯೊಬ್ಬ ಚಹಾ ಪ್ರಿಯರಿಗೂ ಒಬ್ಬೊಬ್ಬ ಫೇವರೆಟ್ ಚಾಯ್ವಾಲಾ ಇರುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿನಿ ತಮ್ಮ ಓದಿನೊಂದಿಗೆ ಟೀ ಸ್ಟಾರ್ಟ್ ಆಪ್ ಆರಂಭಿಸಿ ಚಹಾ ಪ್ರಿಯರ ಫೇವರೆಟ್ ಚಾಯ್ವಾಲಿ ಅನ್ನಿಸಿಕೊಂಡಿದ್ದಾರೆ.
ಹೌದು, ಬಿಹಾರ ಮೂಲದ ಬಿ.ಟೆಕ್ ವಿದ್ಯಾರ್ಥಿನಿ ವರ್ತಿಕಾ ಸಿಂಗ್ ಹರಿಯಾಣದ ಫರಿದಾಬಾದ್‌ನಲ್ಲಿ ಟೀ ಸ್ಟಾಲ್ ಸ್ಥಾಪಿಸಿ, ಫೇವರೆಟ್ ಚಹಾವಾಲಿ ಅನ್ನಿಸಿಕೊಂಡಿದ್ದಾಳೆ.
ಇದನ್ನೂ ಓದಿ: ಪ್ಲೀಸ್ ಅಂದ್ರೆ ಇಲ್ಲಿ ಕಡಿಮೆ ಬೆಲೆಗೆ ಟೀ ಸಿಗುತ್ತೆ!: ಪ್ರೆಸ್ಟನ್ ಕೆಫೆಯ ಮೆನು ಭಾರಿ ವೈರಲ್
ಆರಂಭದಿಂದಲೂ ವರ್ತಿಕಾ ತಾನು ಸ್ವಉದ್ಯೋಗ ಆರಂಭಿಸಿಬೇಕೆಂದು ಉತ್ಸುಕರಾಗಿದ್ದರು. ಸ್ವಉದ್ಯೋಗವನ್ನು ಪ್ರಾರಂಭಿಸಬೇಕಾದರೆ ಪದವಿಯನ್ನು ಪೂರ್ಣಗೊಳಿಸಲು ಇನ್ನೂ 4 ವರ್ಷಗಳವರೆಗೆ ಕಾಯಬೇಕಿತ್ತು. ನಾಲ್ಕು ವರ್ಷಗಳವರೆಗೆ ಕಾಯಲು ಸಿದ್ದವಿಲ್ಲದ ಆಕೆ, ಪುಟ್ಟ ಹೆಜ್ಜೆಗಳನ್ನು ಇಡಲು ನಿರ್ಧರಿಸಿ, ಬಿ. ಟೆಕ್ ಚೈವಾಲಿ ಎಂಬ ಹೆಸರಿನೊಂದಿಗೆ ತಮ್ಮ ಟೀ ಸ್ಟಾಲ್ ಅನ್ನು ಪ್ರಾರಂಭಿಸಿ ಉಶಸ್ಸುಗಳಿಸಿದ್ದಾರೆ. ಅಲ್ಲದೇ ಇದೀಗ ಈಕೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸ್ವಾಗ್ ಸೆ ಡಾಕ್ಟರ್ ಎಂಬ Instagram ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವರ್ತಿಕಾ ತನ್ನ ಟೀ ಸ್ಟಾಲ್ ಬಗ್ಗೆ ಮಾತನಾಡಿ ಟೀ ಸ್ಟಾಲ್ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಫರಿದಾಬಾದ್‌ನ ಗ್ರೀನ್ ಫೀಲ್ಡ್ ಬಳಿ ಟೀ ಸ್ಟಾಲ್ ತೆರೆದಿದ್ದೇನೆ ಮತ್ತು ಸಂಜೆ 5.30 ರಿಂದ ರಾತ್ರಿ 9 ರವರೆಗೆ ತನ್ನ ಸ್ಟಾಲ್ ಹಾಕಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ವರ್ತಿಕಾ ಅವರು ಅಲ್ಯೂಮಿನಿಯಂ ಕೆಟಲ್ ಅನ್ನು ಇರಿಸಲಾಗಿರುವ ಸಣ್ಣ ಒಲೆಯಲ್ಲಿ ವಿವಿಧ ಬಗೆಯ ಚಹಾಗಳನ್ನು ಮಾರಾಟ ಮಾಡುತ್ತಿದ್ದು, ಮಸಾಲಾ, ಲೆಮನ್ ಚಾಯ್ ತಲಾ 20 ರೂ. ಮತ್ತು ಸಾಮಾನ್ಯ ಚಾಯ್ 10 ರೂಗೆ ಮಾರಾಟ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ಅರ್ಥಶಾಸ್ತ್ರ ಪದವೀಧರರೊಬ್ಬರು ಎರಡು ವರ್ಷಗಳಿಂದ ಕೆಲಸ ಸಿಗದ ಹಿನ್ನೆಲೆಯಲ್ಲಿ ಬಿಹಾರದ ರಾಜಧಾನಿ ಪಾಟ್ನಾದ ಮಹಿಳಾ ಕಾಲೇಜಿನ ಬಳಿ ಟೀ ಸ್ಟಾಲ್ ಕೂಡ ಹಾಕಿದ್ದರು. 2019 ರಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಿದ ಪ್ರಿಯಾಂಕಾ ಗುಪ್ತಾ, “ಎಂಬಿಎ ಚಾಯ್ವಾಲಾ” ಎಂದು ಪ್ರಸಿದ್ಧವಾಗಿರುವ ಪ್ರಫುಲ್ ಬಿಲ್ಲೋರ್ ಅವರ ಕಥೆಯನ್ನು ಕೇಳಿದ ನಂತರ ಟೀ ಸ್ಟಾಲ್ ತೆರೆಯಲು ಸ್ಫೂರ್ತಿಯಾಯಿತು ಎಂದು ಹೇಳಿದರು.
View this post on Instagram