25 ವರ್ಷಗಳ ಹಳೇ ಶೂ 18 ಕೋಟಿ ರೂ. ಗೆ ಮಾರಾಟ! – ಏನಿದರ ವಿಶೇಷತೆ?
ಕಾರು, ಐಷಾರಾಮಿ ಮನೆ, ಚಿನ್ನಾಭರಣ, ಹಳೇ ಕಾಲದ ವಸ್ತುಗಳನ್ನು ಹರಾಜು ಇಡುವುದನ್ನು ನಾವು ಕೇಳಿರುತ್ತೇವೆ. ಆದ್ರೆ ಒಂದು ಜೊತೆ ಹಳೇ ಶೂ ಕೋಟಿಗಟ್ಟಲೆ ರೂಪಾಯಿಗೆ ಹರಾಜಾಗಿದೆ ಅಂದ್ರೆ ನೀವು ನಂಬುತ್ತೀರಾ? ಹೌದು, ಇಲ್ಲೊಂದು 25 ವರ್ಷಗಳ ಹಳೆಯ ಶೂ ಬರೋಬ್ಬರಿ 18 ಕೋಟಿ ರೂಪಾಯಿಗೆ (2.2 ಮಿಲಿಯನ್ ಡಾಲರ್) ಹರಾಜಾಗಿದೆ.
ಹೌದು, ಬಾಸ್ಕೆಟ್ ಬಾಲ್ ದಿಗ್ಗಜ ಮೈಕಲ್ ಜೋರ್ಡಾನ್ 1998ರ ಎನ್‌ಬಿಎ ಅಂತಿಮ ಪಂದ್ಯದಲ್ಲಿ ಧರಿಸಿದ್ದ ‘ಏರ್ ಜೋರ್ಡಾನ್ 13’ ಶೂ ಇದು. ಈ ಶೂ ಹರಾಜಿನಲ್ಲಿ ಬರೋಬ್ಬರಿ 2.2 ಮಿಲಿಯನ್ ಡಾಲರ್(ಸುಮಾರು 18 ಕೋಟಿ ರುಪಾಯಿ)ಗೆ ಮಾರಾಟವಾಗಿದೆ. ಈ ಮೂಲಕ ಜಗತ್ತಿನಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಶೂ ಎನಿಸಿಕೊಂಡಿದೆ.
ಇದನ್ನೂ ಓದಿ: ‘ಸಿಕ್ಸರ್ ರಿಂಕು ಸಿಂಗ್ ಸೂಪರ್ ಮ್ಯಾನ್’ -ಬಾಲಿವುಡ್ ಸೆಲೆಬ್ರಿಟಿಗಳ ಕಣ್ಣಲ್ಲಿ ರಿಯಲ್ ಹೀರೋ ಆದ ಕ್ರಿಕೆಟಿಗ
ಮೈಕಲ್ ಜೋರ್ಡಾನ್ 1998ರಲ್ಲಿ ಎನ್‌ಬಿಎ ಫೈನಲ್ ಗೇಮ್ 2 ಸರಣಿಯಲ್ಲಿ ಚಿಕಾಗೋ ಬುಲ್ಸ್ ಪರ ಜೋರ್ಡಾನ್ ಕೊನೆ ಪಂದ್ಯವಾಡಿದ್ದರು. ಆ ಪಂದ್ಯವನ್ನು ಲಾಸ್ಟ್ ಡ್ಯಾನ್ಸ್ ಎಂದೇ ಕರೆಯಲಾಗುತ್ತದೆ. ಈ ಮೊದಲು 2021ರಲ್ಲಿ ಅಮೆರಿಕದ ರಾರಯಪರ್ ಕಾನ್ಯೆ ವೆಸ್ಟ್ ಅವರ ಶೂ 1.8 ಮಿಲಿಯನ್ ಡಾಲರ್ಗೆ ಹರಾಜಾಗಿದ್ದು ದಾಖಲೆಯಾಗಿತ್ತು.
ಎನ್‌ಬಿಎ ಜೋರ್ಡನ್ ಅವರ ವೃತ್ತಿಜೀವನದ ಕೊನೆಯ ಟೂರ್ನಿ ಇದಾಗಿತ್ತು. ಆ ಪಂದ್ಯದಲ್ಲಿ ಚಿಕಾಗೋ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಯೂಟಾ ಜಾಝ್ ತಂಡದ ವಿರುದ್ಧದ ಫೈನಲ್‌ನಲ್ಲಿ 37 ಪಾಯಿಂಟ್ಸ್ ಕಲೆಹಾಕಿದ್ದರು. ಇದರಿಂದ ಬುಲ್ಸ್ ತಂಡ 93-88 ಪಾಯಿಂಟ್ಸ್‌ಗಳಿಂದ ಜಯಿಸಿತ್ತು. ಆ ಪಂದ್ಯದಲ್ಲಿ ಜೋರ್ಡನ್ ವಿವಿಧ ಶೂಗಳನ್ನೂ ಧರಿಸಿದ್ದರು. ಅವರು ಕೊನೆಯದಾಗಿ ಧರಿಸಿದ್ದ ಶೂಗಳನ್ನ ಹರಾಜಿಗೆ ಇಡಲಾಗಿತ್ತು ಎಂದು ನ್ಯೂಯಾರ್ಕ್‌ನ ಸೋದೆಬೀಸ್ ಹರಾಜು ಸಂಸ್ಥೆ ತಿಳಿಸಿದೆ.
ಸೋದೆಬೀಸ್ ಸಂಸ್ಥೆ ನಡೆಸಿದ ಹರಾಜಿನಲ್ಲಿ ಶೂಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಅಮೆರಿಕದ ಗಾಯಕ ಕಾವ್ಯ ವೆಸ್ಟ್ ಅವರ ಶೂಗಳು 2021ರ ಹರಾಜಿನಲ್ಲಿ 14.74 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿದ್ದು ದಾಖಲೆಯಾಗಿತ್ತು. ಇನ್ನು ಜೋರ್ಡನ್ ಅವರು 1998ರ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿ 2022ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ 82 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿತ್ತು.