ಒಂದು ತಿಂಗಳ ಮಗು ಜೊತೆ ಕರ್ತವ್ಯಕ್ಕೆ ಬಂದ ಮೇಯರ್ – ಫೋಟೋ ವೈರಲ್ ಬೆನ್ನಲ್ಲೇ ಭಾರೀ ವಿವಾದ

ಒಂದು ತಿಂಗಳ ಮಗು ಜೊತೆ ಕರ್ತವ್ಯಕ್ಕೆ ಬಂದ ಮೇಯರ್ – ಫೋಟೋ ವೈರಲ್ ಬೆನ್ನಲ್ಲೇ ಭಾರೀ ವಿವಾದ

ಕೇರಳದ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ತಮ್ಮ ಒಂದು ತಿಂಗಳ ಮಗುವನ್ನ ಕರೆದುಕೊಂಡು ಕರ್ತವ್ಯಕ್ಕೆ ಹಾಜರಾಗಿರೋದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಂದು ತಿಂಗಳ ಮಗುವನ್ನ ಮಡಿಲಲ್ಲಿಟ್ಟುಕೊಂಡು ಮೇಯರ್ ಆರ್ಯ ದಾಖಲೆಗಳಿಗೆ ಸಹಿ ಹಾಕುತ್ತಿರುವ ಫೋಟೋ ಈಗ ಭಾರಿ ವೈರಲ್ ಆಗಿದೆ. ಮೇಯರ್​ ನಡೆಗೆ ಒಂದಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದ ನಿಖಿಲ್ ಕುಮಾರಸ್ವಾಮಿ – ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾದ ಜೆಡಿಎಸ್ ಯುವ ಮುಖಂಡ

ಮಹಿಳೆಯರು ತಮ್ಮ ವೃತ್ತಿಪರ ಮತ್ತು ಖಾಸಗಿ ಜೀವನವನ್ನ ಎಷ್ಟು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ ಅನ್ನೋದಕ್ಕೆ ಇದೊಂದು ನಿದರ್ಶನ. ಕೆಲಸದ ಜೊತೆಗೆ ಖಾಸಗಿ ಜೀವನವನ್ನ ಹೇಗೆ ಸಮತೋಲನ ಮಾಡಿಕೊಳ್ಳಬೇಕು ಅನ್ನೋದಕ್ಕೆ ಉಳಿದೆಲ್ಲಾ ಮಹಿಳೆಯರಿಗೂ ಆರ್ಯ ರಾಜೇಂದ್ರನ್ ಆದರ್ಶ. ತಾಯಿತನಕ್ಕಾಗಿ ಮಹಿಳೆಯರು ತಮ್ಮ ಕೆರಿಯರ್​​ನ್ನೇ ತ್ಯಜಿಸಬೇಕಾದ ಅವಶ್ಯಕತೆ ಇಲ್ಲ ಅಂತಾ ಹಲವು ಮಂದಿ ಕಾಮೆಂಟ್ ಮಾಡಿದ್ದಾರೆ. ಆದ್ರೆ ಇನ್ನೂ ಕೆಲವರು ಮಹಿಳಾ ಮೇಯರ್​ ನಡೆಯನ್ನ ಟೀಕಿಸಿದ್ದಾರೆ. ಫೋಟೋಗೆ ಪೋಸ್​​ ಕೊಡೋದಕ್ಕೆ ಈ ರೀತಿ ಮಗುವನ್ನ ಹಿಡಿದುಕೊಂಡಿದ್ದಾರಷ್ಟೇ.

ಉನ್ನತ ಮಟ್ಟದ ಸರ್ಕಾರಿ ಉದ್ಯೋಗಗಳಲ್ಲಿರುವ ಮಹಿಳೆಯರಿಗೆ ಕರ್ತವ್ಯದ ವೇಳೆಯೂ ಬೇಕಾದ ಸವಲತ್ತುಗಳೆಲ್ಲಾ ಸಿಗುತ್ತೆ. ಆದ್ರೆ ದಿನಗೂಲಿ ಕಾರ್ಮಿಕ ಮಹಿಳೆಯರಿಗೆ ಯಾವುದೇ ಸೌಲಭ್ಯ ಇರೋದಿಲ್ಲ. ಆದ್ರೂ ಅವರು ಮಕ್ಕಳನ್ನ ಹೊತ್ತುಕೊಂಡು. ಇಲ್ಲಾ ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಬರ್ತಾರೆ. ಅವರ ಬಗ್ಗೆ ಯಾರೂ ಸುದ್ದಿ ಮಾಡೋದಿಲ್ಲ ಅಂತಾ ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಮೇಯರ್ ಫೋಟೋದಿಂದಾಗಿ ಮಹಿಳೆಯರು ಕೆಲಸ ಮಾಡೋ ಜಾಗದಲ್ಲಿ ಮಕ್ಕಳ ಆರೈಕೆ ಸೌಲಭ್ಯವನ್ನ ಕಲ್ಪಿಸಬೇಕು. ಶಿಶು ವಿಹಾರ ಕೇಂದ್ರಗಳನ್ನ ಕೂಡ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕೇರಳ ಸರ್ಕಾರ ಇದಕ್ಕೆ ಬೇಕಾದ ಕ್ರಮಗಳನ್ನ ಕೈಗೊಂಡ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಇಂಥಾ ಸೂಕ್ಷ್ಮ ವಿಚಾರಗಳಿಗೆ ಕೇರಳದ ಸರ್ಕಾರ ಕೂಡಲೇ ಸ್ಪಂದಿಸಿರೋದಕ್ಕೆ ಹಲವು ಉದಾಹರಣೆಗಳಿವೆ. ಆದ್ರೆ ಇದು ಕೇವಲ ಕೇರಳಕ್ಕಷ್ಟೇ ಅಲ್ಲ ಕರ್ನಾಟಕ ಸೇರಿದಂತೆ ಇಡೀ ದೇಶಕ್ಕೆ ಅನ್ವಯವಾಗುವಂಥಾ ಗಂಭೀರ ವಿಚಾರ.

 

Shantha Kumari