ತೀರ್ಥಹಳ್ಳಿಯಲ್ಲಿ ಎಣ್ಣೆ ವಿಷ್ಯಕ್ಕೆ ಕಿರಿಕ್- ಎಣ್ಣೆ ಕುಡಿಯಲ್ಲ ಎಂದಿದ್ದಕ್ಕೆ ಚಾ*ಕು ಇರಿತ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂರಿನ ಕುರುವಳ್ಳಿಯ ದುರ್ಗಾಂಬಾ ವೈನ್ ಸ್ಟೋರ್ ಬಳಿವ್ಯಕ್ತಿಯೋರ್ವನಿಗೆ ತಾನು ಎಣ್ಣೆ ಕುಡಿಸುತ್ತೇನೆ ಎಂದು ಹೇಳಿದಾಗ ಆತ ಬೇಡ ಎಂದ ಕಾರಣಕ್ಕೆ ಚಾಕು ಇರಿದ ವಿಚಿತ್ರ ಘಟನೆ ನಡೆದಿದೆ.
ಇದನ್ನೂ ಓದಿ: ಇಂದಿನಿಂದ ಕರುನಾಡಿನಲ್ಲಿ SIR ಶುರು – ಹೇಗೆ ನಡೆಯುತ್ತೆ? ನಿಮ್ಮ ಹತ್ತಿರ ಯಾವ ದಾಖಲೆ ಇರಬೇಕು?
ಕೂಲಿ ಕೆಲಸ ಮಾಡಿಕೊಂಡು ಎಣ್ಣೆ ಕುಡಿಯಲು ಕುರುವಳ್ಳಿ ಬಾರ್ ಬಳಿ ವ್ಯಕ್ತಿಯೋರ್ವ ಬಂದಿದ್ದಾನೆ. ಈ ವೇಳೆ ಆತನ ಪರಿಚಯ ಇರುವ ಇಬ್ಬರು ಸಹೋದರರು ಬಂದಿದ್ದಾರೆ.. ನಂತರ ಸಹೋದರರು ವ್ಯಕ್ತಿಗೆ ಒಂದು ಬಿಯರ್ ಬಾಟಲ್ ಕೊಡಿಸುವುದಾಗಿ ಹೇಳಿದ್ದಾರೆ. ಆತ ಬೇಡ ಎಂದು ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ಅವರು ಸೂ**ಮಗನೆ ಬೇರೆಯವರು ಕೊಡಿಸಿದರೆ ಕುಡಿಯುತ್ತಿಯಾ ನಾನು ಕೊಡಿಸಿದರೆ ಕುಡಿಯಲ್ವ ಎಂದು ಜೋರು ಗಲಾಟೆ ಮಾಡಿದ್ದಾರೆ. ಸಹೋದರರಲ್ಲಿ ಓರ್ವ ಬಿಯರ್ ಬಾಟಲಿಯಿಂದ ಹೊಡೆಯಲು ಮುಂದಾಗಿದ್ದಾನೆ.. ಆಗ ವ್ಯಕ್ತಿ ಸಹೋದರರಿಗೆ ನಿಮ್ಮ ಮತ್ತೊರ್ವ ಅಣ್ಣನಿಗೆ ಹೇಳುತ್ತೇನೆ ಎಂಬುದಾಗಿ ತಿಳಿಸಿದ್ದಾನೆ…
ಆಗ ಸಹೋದರರಲ್ಲಿ ಓರ್ವ ತನ್ನ ಕೈಯಲ್ಲಿದ್ದ ಚಾಕುವಿನಿಂದ ನೀನು ಬದುಕಿದರೆ ಅಲ್ಪ ಹೇಳೋದು ಎಂದು ಚಾಕುವನ್ನು ವ್ಯಕ್ತಿಗೆ ಬೀಸಿದ್ದು ಆತ ತಪ್ಪಿಸಿಕೊಂಡಾಗ ಚಾಕುವಿನಿಂದ ವ್ಯಕ್ತಿಯ ಬೆನ್ನಿಗೆ ಚುಚ್ಚಿದ್ದಾನೆ. ತಕ್ಷಣವೇ ಬಾರ್ ಮಾಲಿಕರು, ಕ್ಯಾಶಿಯರ್ ಮತ್ತು ಅಕ್ಕಪಕ್ಕದವರು ಆತನನ್ನು ಉಪಚರಿಸಿ ಜೆ.ಸಿ ಆಸ್ಪತ್ರೆಗೆ ರವಾನಿಸಿದ್ದಾರೆ.. ಈ ವಿಚಾರವಾಗಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರು ಸಹೋದರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ..

ನೋಡಿರಿ

