ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಮ್ಯಾಚ್ – ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟಿ20 ಮ್ಯಾಚ್ – ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

2ನೇ ಟಿ-20 ಮ್ಯಾಚ್​​ನ್ನ ಟೀಂ ಇಂಡಿಯಾ ಸೋತಿತ್ತು.. ಈಗ ನಡೆಯೋದು ಫೈನಲ್ ಮ್ಯಾಚ್. ಭಾರತ-ದಕ್ಷಿಣ ಆಫ್ರಿಕಾ ಟಿ-20 ಸೀರಿಸ್​​ನ ಕೊನೆಯ ಮ್ಯಾಚ್ ಜೊಹಾನ್ಸ್​​ಬರ್ಗ್​ನಲ್ಲಿ ನಡೀತಾ ಇದೆ. ಟೀಂ ಇಂಡಿಯಾಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಹೀಗಾಗಿ ಪ್ಲೇಯಿಂಗ್​-11ನಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋದು ನಿಜಕ್ಕೂ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:  ಎರಡನೇ ಟಿ20 ಪಂದ್ಯ – ಸೌತ್ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾ

ಭಾರತ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು, ನಂತರ ಎರಡನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಹೀಗಾಗಿ ಮೂರನೇ ಟಿ20 ಯಲ್ಲಿ ಭಾರತ ಗೆದ್ದರಷ್ಟೆ ಸರಣಿ ಸೋಲನ್ನು ತಪ್ಪಿಸಬಹುದು. ಟೀಮ್ ಇಂಡಿಯಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಅಂತಾನೇ ಹೇಳಬಹುದು. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್-11 ತುಂಬಾ ಮಹತ್ವ ಪಡೆದಿದೆ.

ಟೀಂ ಇಂಡಿಯಾ PLAYING-11?

  • ಶುಬ್ಮನ್ ಗಿಲ್
  • ಯಶಸ್ವಿ ಜೈಸ್ವಾಲ್ OR ರುತುರಾಜ್ ಗಾಯಕ್ವಾಡ್
  • ಶ್ರೇಯಸ್ ಅಯ್ಯರ್
  • ಸೂರ್ಯಕುಮಾರ್ ಯಾದವ್
  • ರಿಂಕು ಸಿಂಗ್
  • ಇಶಾನ್ ಕಿಶನ್
  • ರವೀಂದ್ರ ಜಡೇಜ
  • ರವಿ ಬಿಷ್ಣೋಯಿ
  • ಮೊಹಮ್ಮದ್ ಸಿರಾಜ್
  • ಮುಕೇಶ್ ಕುಮಾರ್​
  • ಅರ್ಶ್​ದೀಪ್ ಸಿಂಗ್

ಟೀಂ ಇಂಡಿಯಾಗೆ ಸವಾಲ್ ಆಗಿರುವುದು ಬೌಲಿಂಗ್ ವಿಚಾರದಲ್ಲಿ. ಎರಡನೇ ಪಂದ್ಯ ಸೋಲಲು ಕಾರಣ ಕೂಡಾ ಬೌಲಿಂಗ್ ವೈಫಲ್ಯ. ಆಸ್ಟ್ರೇಲಿಯಾ ವಿರುದ್ಧದ ಟ-20 ಸೀರಿಸ್​ ವೇಳೆಯೂ ಅಷ್ಟೇ ನಮ್ಮ ಬೌಲಿಂಗ್ ಅಷ್ಟಕ್ಕಷ್ಟೇ ಇತ್ತು. ಟಿ-20ಯಲ್ಲಿ ಬೌಲಿಂಗೇ ಟೀಮ್ ಇಂಡಿಯಾದ ವೀಕ್​ನೆಸ್ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಈ 3ನೇ ಟಿ-20 ಮ್ಯಾಚ್​ ಬಳಿಕ ಟೀಂ ಇಂಡಿಯಾಗೆ ಇನ್ನು ಉಳಿದಿರೋದು ಮೂರು ಟಿ-20 ಮ್ಯಾಚ್​​ಗಳಷ್ಟೇ. ಅದು ಅಫ್ಘಾನಿಸ್ತಾನದ ವಿರುದ್ಧ. ಅದಾದ್ಮೇಲೆ ನೇರವಾಗಿ ವರ್ಲ್ಡ್​​ಕಪ್​ ಆಡಬೇಕು. ಹೀಗಾಗಿ ವರ್ಲ್ಡ್​​ಕಪ್​​ಗೆ ಟಿ-20 ಟೀಮ್​ನ್ನ ಸೆಟ್ ಮಾಡೋಕೆ ಈ ಮ್ಯಾಚ್​​ ಬಿಟ್ಟು ಸಿಗೋದು 3 ಮ್ಯಾಚ್​ಗಳಷ್ಟೇ. ಆ ಮೂರು ಮ್ಯಾಚ್​ಗಳಲ್ಲೇ ಟಿ-20 ಟೀಂನ್ನ ಫೈನಲ್ ಮಾಡಬೇಕು. ನಂತರ ಐಪಿಎಲ್ ನಡೆಯುತ್ತೆ. ಅಲ್ಲಿನ ಪರ್ಫಾಮೆನ್ಸ್​ ಕೂಡ ಕೌಂಟ್ ಆಗಬಹುದು. ಆದ್ರೆ ವರ್ಲ್ಡ್​ಕಪ್​​ಗೆ ಟಿ-20 ಟೀಂನ್ನ ಸೆಟ್ ಮಾಡೋದು, 15 ಮಂದಿಯನ್ನ ಪಿಕ್ ಮಾಡೋದು ಅಷ್ಟೊಂದು ಸುಲಭ ಇಲ್ಲ. ಹೀಗಾಗಿ ಮುಂದಿನ ಎಲ್ಲಾ ಮ್ಯಾಚ್​ಗಳು ಕೂಡ ಟೀಂ ಇಂಡಿಯಾಗೆ ತುಂಬಾನೆ ಇಂಪಾರ್ಟೆಂಟ್.

Sulekha