3ನೇ ಸ್ಲಾಟ್.. 7 ಮ್ಯಾಚ್.. 5 ಪ್ಲೇಯರ್ಸ್.. ಅವ್ರ್ ಬಿಟ್ ಇವ್ರ್ ಬಿಟ್ ಅವರ್ಯಾರು? – BCCI ಪ್ರಯೋಗವೇ ಭಾರತಕ್ಕೆ ಮುಳುವು?

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆದ್ಮೇಲೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸ್ಲಾಟ್ಗಳಲ್ಲಿ ವೇರಿಯೇಷನ್ಸ್ ಆಗ್ತಿದೆ. ಅದ್ರಲ್ಲೂ ನಂಬರ್ 3 ಸ್ಲಾಟ್ನಲ್ಲಿ ಎಕ್ಸ್ಪೆರಿಮೆಂಟ್ ನಿಂತೇ ಇಲ್ಲ. ಇಂಗ್ಲೆಂಡ್ ಸರಣಿಯಲ್ಲೂ ಕೂಡ ಅದೇ ಕಂಟಿನ್ಯೂ ಆಗ್ತಿದೆ. ಶಾಕಿಂಗ್ ವಿಚಾರ ಅಂದ್ರೆ ನಂಬರ್ 3ನಲ್ಲಿ ಆಡ್ತಿರೋ ಯಾರೊಬ್ರಿಂದಲೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಬಂದಿಲ್ಲ.
ಇದನ್ನೂ ಓದಿ: ಬೆಂಗಳೂರಲ್ಲಿ ವಿಶ್ವದ ನಂಬರ್ ವನ್ ಜಾವಲಿನ್ ಪಟು – ನೀರಜ್ ಚೋಪ್ರಾ ಕೆಒಎ ಹಾಲ್ ಆಫ್ ಫೇಮ್ ಗೌರವ
ಟೀಂ ಇಂಡಿಯಾದಲ್ಲಿ ಸದ್ಯ 3ನೇ ಸ್ಲಾಟ್ ಅನ್ನೋದು ಗೆಸ್ಟ್ ಅಪ್ಪಿಯರೆನ್ಸ್ ಥರ ಆಗೋಗಿದೆ. ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ ಆಟಗಾರರೂ ಬದಲಾಗ್ತಿದ್ದಾರೆ. ಬಟ್ ಈ ನಂಬರ್ನಲ್ಲಿ ಆಡಿದಂಥ ಯಾರೊಬ್ಬರಿಗೂ ಕಂಟಿನ್ಯೂಯಸ್ ಸ್ಲಾಟ್ ಸಿಕ್ಕಿಲ್ಲ. ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಶುರುವಾಗಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಳ್ತು. ಹೀಗಾಗಿ ಭಾರತ ಫಸ್ಟ್ ಬ್ಯಾಟಿಂಗ್ಗೆ ಬರಬೇಕಾಯ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ಕೆಎಲ್ ರಾಹುಲ್ 2 ರನ್ ಗಳಿಸಿ ಔಟ್ ಆಗಿದ್ರು. ರಾಹುಲ್ ಪೆವಿಲಿಯನ್ ಸೇರಿದ ಬಳಿಕ ಮೂನರನೇ ಕ್ರಮಾಂಕದಲ್ಲಿ ಕ್ರಿಸ್ಗೆ ಬಂದಿದ್ದೇ ಕರುಣ್ ನಾಯರ್. ಕಳೆದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಕರುಣ್ ನಾಯರ್ 2ನೇ ಪಂದ್ಯಕ್ಕೆ ಮುಂಬಡ್ತಿ ಪಡ್ದು 3ನೇ ಸ್ಲಾಟ್ನಲ್ಲಿ ಕಣಕ್ಕಿಳಿದಿದ್ರು. ಬಟ್ ಒನ್ಸ್ ಅಗೇನ್ ಕರುಣ್ರಿಂದಲೂ ಮೂರನೇ ಸ್ಲಾಟ್ನಲ್ಲಿ ಬಿಗ್ ಸ್ಕೋರ್ ಬರ್ಲಿಲ್ಲ.
ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಐವರಿಗೆ ಮೂರನೇ ಸ್ಲಾಟ್!
ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಸಾಯಿ ಸುದರ್ಶನ್ ಅವರನ್ನು ಎರಡನೇ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಗಿತ್ತು. ಹೀಗಾಗಿ ಕರುಣ್ ನಾಯರ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಯ್ತು. ಬಟ್ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಟೀಮ್ ಇಂಡಿಯಾ ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಐವರು ಬ್ಯಾಟರ್ಗಳನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದೆ. ಅಂದ್ರೆ ಯಾವುದೇ ಬ್ಯಾಟ್ಸ್ಮನ್ ಕೂಡ ಸ್ಥಿರವಾಗಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಅವಕಾಶ ನೀಡಿಲ್ಲ. ಸೋ ಕಳೆದ 7 ಪಂದ್ಯಗಳಲ್ಲಿ 3ನೇ ಕ್ರಮಾಂಕದ ಹಾವು ಏಣಿ ಆಟದ ಬಗ್ಗೆ ನೋಡ್ತಾ ಹೋಗೋಣ.
3ನೇ ಸ್ಲಾಟ್ ಕಣ್ಣಾಮುಚ್ಚಾಲೆ!
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಆಡಿದ್ದು ಕನ್ನಡಿಗ ದೇವದತ್ ಪಡಿಕ್ಕಲ್. ಪಡಿಕ್ಕಲ್ ಫಸ್ಟ್ ಇನ್ನಿಂಗ್ಸ್ನಲ್ಲಿ ಡಕ್ ಔಟ್ ಆದ್ರೆ ಎರಡನೇ ಇನ್ನಿಂಗ್ಸ್ನಲ್ಲಿ 25 ರನ್ ಗಳಿಸಿ ಔಟಾಗಿದ್ರು. ಸೋ ಬಿಗ್ ಸ್ಕೋರ್ ಬಂದಿಲ್ಲ ಅಂತಾ ಸರಣಿಯ ಎರಡನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 31 ರನ್ ಗಳಿಸಿದ್ದ ಗಿಲ್ ಎರಡನೇ ಇನ್ನಿಂಗ್ಸ್ನಲ್ಲಿ 21 ರನ್ಗಳಿಗೆ ಆಟ ಮುಗಿಸಿದ್ರು. ಆ ಬಳಿಕ ಮೂರನೇ ಪಂದ್ಯದಲ್ಲೂ ಗಿಲ್ರನ್ನೇ ಮುಂದುವರಿಸಲಾಗಿತ್ತು. ಮೂರನೇ ಪಂದ್ಯದ ಫಸ್ಟ್ ಇನ್ನಿಂಗ್ಸ್ನಲ್ಲಿ ಗಿಲ್ 1 ರನ್ ಗಳಿಸಿ ಔಟಾಗಿದ್ರು. ಪಂದ್ಯ ಡ್ರಾ ಆಗಿದ್ರಿಂದ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸಿರಲಿಲ್ಲ. ಬಟ್ ಅಚ್ಚರಿ ಎನ್ನುವಂತೆ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 24 ರನ್ ಗಳಿಸಿದ್ದ ರಾಹುಲ್ ಎರಡನೇ ಇನ್ನಿಂಗ್ಸ್ನಲ್ಲಿ ಡಕ್ ಔಟ್ ಆಗಿದ್ರು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರನ್ನೇ ಮತ್ತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಯಿತು. ಈ ಪಂದ್ಯದಲ್ಲಿ ಗಿಲ್ ಮೊದಲ ಇನ್ನಿಂಗ್ಸ್ನಲ್ಲಿ 20 ರನ್, ಎರಡನೇ ಇನ್ನಿಂಗ್ಸ್ನಲ್ಲಿ 13 ರನ್ಗಳಿಗೆ ಔಟ್ ಆಗಿದ್ರು. ಸೋ ಈ ಐದೂ ಪಂದ್ಯಗಳಲ್ಲೂ ಯಾವೊಬ್ಬ ಪ್ಲೇಯರ್ ಕೂಡ ನಂಬರ್ 3 ಸ್ಲಾಟ್ನಲ್ಲಿ ಅರ್ಧಶತಕ ಬಾರಿಸೋಕೂ ಸಾಧ್ಯವಾಗಿಲ್ಲ. ಇದೀಗ ಟೆಸ್ಟ್ ಕ್ರಿಕೆಟ್ನಿಂದ ವಿರಾಟ್ ಕೊಹ್ಲಿ ನಿವೃತ್ತರಾಗಿರೋದ್ರಿಂದ 4ನೇ ಕ್ರಮಾಂಕದಲ್ಲಿ ಗಿಲ್ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಇಂಗ್ಲೆಂಡ್ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಸೋ ಆಂಗ್ಲರ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಬಟ್ ಸುದರ್ಶನ್ ಫಸ್ಟ್ ಇನ್ನಿಂಗ್ಸ್ನಲ್ಲಿ ಡಕ್ ಔಟ್ ಆದ್ರೆ ಎರಡನೇ ಇನ್ನಿಂಗ್ಸ್ನಲ್ಲಿ 30 ರನ್ ಗಳಿಸಿದ್ರು. ಸೋ ಈಗ ಸಾಯಿ ಸುದರ್ಶನ್ ಅವರನ್ನು ಎರಡನೇ ಪಂದ್ಯದಿಂದ ಕೈ ಬಿಡಲಾಗಿದೆ. ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಅವ್ರನ್ನ ಕಣಕ್ಕಿಳಿಸಲಾಗಿದೆ. ವಿಪರ್ಯಾಸ ಅಂದ್ರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ 31 ರನ್ಗಳಿಗೆ ಔಟಾದ್ರು. ದ್ವಿತೀಯ ಇನಿಂಗ್ಸ್ನಲ್ಲೂ ಬಿಗ್ ಸ್ಕೋರ್ ಬಂದಿಲ್ಲ ಅಂದ್ರೆ ಮತ್ತೆ ಮೂರನೇ ಕ್ರಮಾಂಕದ ಬ್ಯಾಟರ್ ಬದಲಾದ್ರೂ ಅಚ್ಚರಿ ಇಲ್ಲ.
ಸೋ ಇಲ್ಲಿ ಟೀಮ್ ಇಂಡಿಯಾ ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಐವರು ಬ್ಯಾಟರ್ಗಳನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದೆ. ಬಟ್ ಯಾರೊಬ್ರಿಂದಲೂ ಹಾಫ್ ಸೆಂಚುರಿ ಕೂಡ ಬಂದಿಲ್ಲ. ಅರ್ಧಶತಕ ಬಿಡಿ. 31 ರನ್ಗಳು ಬಂದಿರೋದೇ ಹೈಯೆಸ್ಟ್. ನಾರ್ಮಲಿ ಓಪನಿಂಗ್ ಬ್ಯಾಟರ್ ವಿಕೆಟ್ ಬಿದ್ದಾಗ ತಂಡವನ್ನ ಬಿಗ್ ಸ್ಕೋರ್ನತ್ತ ಕೊಂಡೊಯ್ಯೋ ಜವಾಬ್ದಾರಿ ಮೂರನೇ ಸ್ಲಾಟ್ ಬ್ಯಾಟರ್ ಮೇಲಿರುತ್ತೆ. ಹೆಚ್ಚಿನ ನಿರೀಕ್ಷೆಗಳೂ ಇರುತ್ತೆ. ಬಟ್ ಯಾವೊಬ್ಬ ಬ್ಯಾಟರ್ ಕೂಡ ಅಂಥಾ ಭರವಸೆಯ ಆಟ ಆಡಿಲ್ಲ. ಇತ್ತ ಮ್ಯಾನೇಜ್ಮೆಂಟ್ ಕೂಡ ಯಾರೊಬ್ಬರಿಗೂ ಕಂಟಿನ್ಯೂಯಸ್ ಅವಕಾಶಗಳನ್ನೂ ಕೊಟ್ಟಿಲ್ಲ. ಅವ್ರ್ ಬಿಟ್ ಇವ್ರ್ ಬಿಟ್ ಅವರ್ಯಾರು ಅನ್ನೋ ಹಾಗೆ ಎಲ್ಲರ ಮೇಲೂ ಪ್ರಯೋಗ ಮಾಡ್ತಿದೆ. ಇದೇ ಪ್ರಯೋಗ ತಂಡಕ್ಕೂ ಹೊಡೆತ ನೀಡ್ತಿದೆ.

ನೋಡಿರಿ

