ಚಲಿಸುವ ರೈಲಿನಲ್ಲೇ  WhatsApp ಮೂಲಕ ಫುಡ್‌ ಆರ್ಡರ್ ಮಾಡಬಹುದು! – ಹೇಗೆ ಗೊತ್ತಾ?

ಚಲಿಸುವ ರೈಲಿನಲ್ಲೇ  WhatsApp ಮೂಲಕ ಫುಡ್‌ ಆರ್ಡರ್ ಮಾಡಬಹುದು! – ಹೇಗೆ ಗೊತ್ತಾ?

ದೂರದೂರುಗಳಿಗೆ ರೈಲಿನಲ್ಲಿ ಪ್ರಯಾಣಿಸುವಾಗ ರೈಲು ನಿಲ್ದಾಣಗಳಲ್ಲಿ ಆಹಾರ ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ರೈಲು ನಿಲ್ದಾಣಗಳಲ್ಲಿ ಆಹಾರ ಶುಚಿಯಾಗಿರುವುದಿಲ್ಲ. ಹೀಗಾಗಿ ಅನೇಕರು ಮನೆಯಿಂದಲೇ ಆಹಾರಗಳನ್ನು ತರುತ್ತಾರೆ. ಕೆಲವು ಬಾರಿ ಮನೆಯಿಂದ ಆಹಾರ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ರೈಲ್ವೇ ಪ್ಲಾರ್ಟ್‌ಫಾರ್ಮ್‌ ಬಳಿಯ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಆಹಾರ ಶುಚಿಯಾಗಿ ಇಲ್ಲದಿದ್ರೆ ಆರೋಗ್ಯ ಕೂಡ ಕೆಡುತ್ತೆ. ಹೀಗಾಗಿ ಅನೇಕರು ರೈಲು ನಿಲ್ದಾಣಗಳಲ್ಲಿ ಆಹಾರ ಸೇವಿಸದೇ ಖಾಲಿ ಹೊಟ್ಟೆಯಲ್ಲಿರುತ್ತಾರೆ. ಆದ್ರೆ ಇನ್ನು ಮುಂದೆ ಈ ಸಮಸ್ಯೆ ಇರಲ್ಲ. ನೀವು ಕುಳಿತಲ್ಲಿಂದಲೇ ಆಹಾರ ಆರ್ಡರ್‌ ಮಾಡಬಹುದು.

ಹೌದು, ಇನ್ನುಮುಂದೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿಮ್ಮ ನೆಚ್ಚಿನ ಖಾದ್ಯವನ್ನು ಚಲಿಸುತ್ತಿರುವ ರೈಲಿನಲ್ಲಿ ಕೂತು ಮಾಡಬಹುದು. ಅದೂ ಕೂಡ WhatsApp ಮೂಲಕ ಫುಡ್‌ ಆರ್ಡ್‌ರ್ ಮಾಡಬಹುದು. ಅದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ! –  ಮುಂದಿನ ತಿಂಗಳಿನಿಂದಲೇ ಮಾಲ್ಟ್‌ ವಿತರಣೆಗೆ ನಿರ್ಧರಿಸಿದ ಸರ್ಕಾರ

ಭಾರತೀಯ ರೈಲುಗಳು ತನ್ನ ವೇಗಕ್ಕೆ ಹೆಸರುವಾಸಿಯಾಗಿರುವಂತೆ, ಅತ್ಯುತ್ತಮ ಸೌಲಭ್ಯಗಳಿಗೂ ಜನಪ್ರಿಯವಾಗಿದೆ. ರೈಲಿನಲ್ಲಿ ಆಹಾರ ಮತ್ತು ಪಾನೀಯ ಸೌಲಭ್ಯಗಳು ಸಹ ಲಭ್ಯವಿವೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಆದರೂ ಅನೇಕರು ಪ್ರಯಾಣದ ಸಮಯದಲ್ಲಿ ಆಹಾರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು ಬಯಸುತ್ತಾರೆ. ಇಂತವರಿಗಾಗಿಯೇ ರೈಲ್ವೇ ಇಲಾಖೆ WhatsApp ಮೂಲಕ ಆರ್ಡರ್‌  ಮಾಡುವ ಅವಕಾಶವನ್ನು ಕಲ್ಪಿಸಿದೆ. ಇನ್ನುಮುಂದೆ ರೈಲಿನಲ್ಲಿ ಕುಳಿತುಕೊಂಡು ವಾಟ್ಸಾಪ್ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು.

ರೈಲ್ಮಿತ್ರಾ ಮೂಲಕ WhatsApp ಆಹಾರವನ್ನು ಆರ್ಡರ್ ಮಾಡಿ!

ನೀವು ವಾಟ್ಸಾಪ್ ಮೂಲಕ ಆಹಾರವನ್ನು ಆರ್ಡರ್ ಮಾಡಬೇಕು ಎಂದು ಬಯಸಿದರೆ ಈ ವಿಚಾರ ತಿಳಿದುಕೊಳ್ಳಬೇಕು. ವಾಸ್ತವವಾಗಿ, ರೈಲ್ಮಿತ್ರಾ WhatsApp ಆಹಾರ ಆರ್ಡರ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ರೈಲ್‌ಮಿತ್ರಾ ವಾಟ್ಸಾಪ್ ಆಹಾರ ಆದೇಶದ ಮೂಲಕ, ಪ್ರಯಾಣಿಕರು ಚಾಟ್ ಮಾಡಬಹುದು ಮತ್ತು ಆಹಾರದಲ್ಲಿ ಏನು ಪಡೆಯಬಹುದು ಎಂಬ ಪ್ರಶ್ನೆಗಳಿಗೆ ಉತ್ತರಿಸಬಹುದು. ಹಲವು ಬಾರಿ ರೈಲ್‌ಮಿತ್ರಾ ಪ್ರಯಾಣಿಕರಿಗೆ ಮೆನು ಕಾರ್ಡ್ ಕಳುಹಿಸುತ್ತದೆ. ಇದರಿಂದ ಸುಲಭವಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಆರ್ಡರ್‌ ಮಾಡಬಹುದು.

WhatsApp ನಂಬರ್‌ ಯಾವುದು?

ವಾಟ್ಸಾಪ್‌ ಮೂಲಕ ಫುಡ್‌ ಆರ್ಡ್‌ ಮಾಡಲು ರೈಲ್ವೇ ಇಲಾಖೆ ವಾಟ್ಸ್‌ಪ್‌ ನಂಬರ್‌ಕೂಡ ಒದಗಿಸಿದೆ.  ರೈಲ್ವೆ ಪ್ರಯಾಣಿಕರು 8102888222 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಅಥವಾ ಕರೆ ಮಾಡುವ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು. ಈ ಸೌಲಭ್ಯವು ಪ್ರಸ್ತುತ ಕೆಲವು ರೈಲುಗಳು ಮತ್ತು ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದೆ.

WhatsApp ಮೂಲಕ ರೈಲಿನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಹೇಗೆ?

  • ಮೊದಲಿಗೆ ರೈಲ್‌ಮಿತ್ರ ನೀಡಿರುವ ವಾಟ್ಸಾಪ್ ಸಂಖ್ಯೆ 8102888222 ಅನ್ನು ನಿಮ್ಮ ಮೊಬೈಲ್‌ನಲ್ಲಿ ಸೇರಿಸಿ.
  • ಆ ಸಂಖ್ಯೆಗೆ ಮೊದಲ ಹಾಯ್ ಅಥವಾ ಹಲೋ ಎಂಬ ಸಂದೇಶವನ್ನು ಕಳುಹಿಸಿ.
  • ನೀವು ಸಂದೇಶವನ್ನು ಕಳುಹಿಸಿದ ತಕ್ಷಣ, ನಿಮಗೆ ಉತ್ತರ ಬರುತ್ತದೆ. ಉತ್ತರವನ್ನು ಸ್ವೀಕರಿಸಿದ ನಂತರ 10 ಅಂಕಿಗಳ PNR ಸಂಖ್ಯೆಯನ್ನು ಹಂಚಿಕೊಳ್ಳಲು ನಿಮ್ಮನ್ನು ಕೇಳಲಾಗುತ್ತದೆ.
  • PNR ಸಂಖ್ಯೆಯನ್ನು ಹಂಚಿಕೊಂಡ ನಂತರ, ಆಹಾರ ಮೆನುವನ್ನು ರೈಲ್ವೆ ಕಳುಹಿಸುತ್ತದೆ ಅಥವಾ ನೀವು ಇಷ್ಟಪಡುವುದನ್ನು ನೀವು ಆರ್ಡರ್ ಮಾಡಬಹುದು.
  • ಆರ್ಡರ್ ಮಾಡಿದ ನಂತರ ಕ್ಯಾಶ್‌ ಆನ್‌ ಡೆಲಿವರಿ ಅಥವಾ ಆನ್‌ಲೈನ್ ಪಾವತಿ ಮಾಡಬಹುದು.

ರೈಲಿನಲ್ಲಿ ಆಹಾರವನ್ನು ಆರ್ಡರ್ ಮಾಡಲು ಇತರ ಆಯ್ಕೆಗಳು ಯಾವುವು?

ಒಂದು ವೇಳೆ WhatsApp ಸಂಖ್ಯೆಯ ಮೂಲಕ ಆಹಾರವನ್ನು ಆರ್ಡರ್‌ ಮಾಡಲು ಆಗದಿದ್ದರೆ, ಇದಕ್ಕೆ ಪರ್ಯಾಯ ಮಾರ್ಗವು ಇದೆ. ಹೌದು, ನೀವು IRCTC ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು. ಇದಲ್ಲದೆ, ನೀವು ಇತರ ಅಪ್ಲಿಕೇಶನ್‌ಗಳನ್ನು ಬಳಸಬಹುದು.

Shwetha M