ಕದ್ದಿದ್ದು ಐಫೋನ್ ಅಲ್ಲ.. ಆಂಡ್ರಾಯ್ಡ್ ಫೋನ್.. – ಬಿಎಂಡಬ್ಲ್ಯು ಕಾರಿನಲ್ಲಿ ಬಂದು ವಾಪಸ್ ನೀಡಿದ ಖದೀಮರು!
ಏನಾದ್ರೂ ಒಂದು ವಸ್ತು ಕಳ್ಳರ ಕಣ್ಣಿಗೆ ಬಿದ್ರೆ ಸಾಕು. ಅದನ್ನ ಕದಿಯೋವರೆಗೂ ಸುಮ್ನೆ ಕೂರಲ್ಲ. ಹೇಗಾದ್ರೂ ಮಾಡಿ ಲಪಟಾಯಿಸಿಕೊಂಡು ಹೋಗುತ್ತಾರೆ. ಕಳ್ಳತನ ಮಾಡಿದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ. ಅದನ್ನು ಮಾರಾಟ ಮಾಡಿ ಬಂದ ಹಣವನ್ನು ಬಳಸಿಕೊಳ್ತಾರೆ. ಕೆಲವೊಮ್ಮೆ ದೊಡ್ಡ ನಿರೀಕ್ಷೆಯಲ್ಲಿ ಕಳ್ಳತನ ಮಾಡುವ ಕಳ್ಳರಿಗೆ ನಿರಾಸೆಯಾಗೋದಿದೆ. ಮನೆಯಲ್ಲಿ ಏನು ಸಿಕ್ಕಿಲ್ಲ ಅಂತಾ ಕಳ್ಳರೇ ಹಣವನ್ನು ಮನೆಯಲ್ಲಿ ಇಟ್ಟು ಬಂದಿರುವ ಉದಾಹಣೆಗಳು ಇದೆ. ಇನ್ನು ಬಂಗಾರ ಎಂದುಕೊಂಡು ಕದ್ದಿದ್ದ ವಸ್ತು ನಕಲಿಯಾಗಿದ್ದೂ ಇದೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಕಳ್ಳರು ತಾವು ಕದ್ದಿದ್ದ ವಸ್ತುಗಳನ್ನು ಬಿಎಂಡಬ್ಲ್ಯು ಕಾರಿನಲ್ಲಿ ಕೊಟ್ಟು ಹೋಗಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಬಿಡಿಗಾಸಿನ ಆಸೆಗೆ ಹೆತ್ತ ಮಗಳನ್ನೇ ಮಾರಿದ ತಾಯಿ – ಮದ್ವೆಯಾದ ವ್ಯಕ್ತಿಯಿಂದ ಅನೈತಿಕ ಚಟುವಟಿಕೆಗೆ ಒತ್ತಾಯ
ಹೌದು, ಅಚ್ಚರಿಯಾದ್ರೂ ಸತ್ಯ. ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಆಕೆಯ ಪತಿ ರಸ್ತೆಬದಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಕಳ್ಳರ ಗುಂಪೊಂದು ಅವರ ಫೋನ್ ಅನ್ನು ಕಳ್ಳನ ಮಾಡಿದೆ. ಬಳಿಕ ಕೆಲವೇ ಹೊತ್ತಲ್ಲಿ ಫೋನ್ ಅನ್ನು ವಾಪಸ್ ಕೊಟ್ಟು ಹೋಗಿದ್ದಾರೆ. ಕಳ್ಳರು ಫೋನ್ ಕೊಟ್ಟು ಹೋಗುವ ವೇಳೆ ವಿಚಾರವೊಂದನ್ನು ತಿಳಿಸಿದ್ದಾರೆ. ಕಳ್ಳರ ವರ್ತನೆ ನೋಡಿ ದಂಪತಿ ಅಚ್ಚರಿಗೊಳಗಾಗಿದ್ದಾರೆ.
ಫೋನ್ ವಾಪಸ್ ಕೊಟ್ಟಿದ್ದೇಕೆ?
ಮಹಿಳೆ ಪ್ರಕಾರ, ಆಕೆ ಪತಿ ಸಾರ್ವಜನಿಕ ಸ್ಥಳದಲ್ಲಿರುವ ವೇಳೆ ಬಂದೂಕು ಹಿಡಿದಿದ್ದ ಇಬ್ಬರು ಮುಸುಕುಧಾರಿ ದರೋಡೆಕೋರರು ಆತನನ್ನು ಅಡ್ಡಗಟ್ಟಿದ್ದಾರೆ. ಕಾರ್ ಕೀ ಸೇರಿದಂತೆ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡಿದ್ದಾರೆ. ದಂಪತಿ ಏನಾಗ್ತಿದೆ ಎಂಬುದನ್ನು ಅರಿಯುವ ಮೊದಲೇ ದರೋಡೆಕೋರರು ಬಿಎಂಡಬ್ಲ್ಯು ಕಾರಿನಲ್ಲಿ ಬಂದು ದಂಪತಿ ಕೈನಿಂದ ಕಸಿದುಕೊಂಡಿದ್ದ ಮೊಬೈಲ್ ವಾಪಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಅಚ್ಚರಿ ವಿಷ್ಯವೊಂದನ್ನು ಹೇಳಿದ್ದಾನೆ. ಇದು ಆಂಡ್ರಾಯ್ಡ್ ಫೋನ್. ಇದು ನಮಗೆ ಬೇಡ. ನಾವು ಐಫೋನ್ ಎಂದುಕೊಂಡಿದ್ದೆವು ಎಂದು ಹೇಳಿದ್ದಾನೆ.
ದರೋಡೆಕೋರರು ಯಾವ ಫೋನನ್ನು ಅಗ್ಗವೆಂದು ವಾಪಸ್ ನೀಡಿದ್ರೋ ಅದು ನನಗೆ ಅಮೂಲ್ಯವಾದದ್ದು ಎಂದು ಮಹಿಳೆ ಹೇಳಿದ್ದಾಳೆ. ಇದು ಬರೀ ಆಂಡ್ರಾಯ್ಡ್ ಅಲ್ಲ. ಇದು ಜೀವನೋಪಾಯದ ಪ್ರಮುಖ ಭಾಗ. ಉಬರ್ ಈಟ್ಸ್ ಮತ್ತು ಇನ್ಸ್ಟಾಕಾರ್ಟ್ನಂತಹ ಸ್ಥಳಗಳಲ್ಲಿ ಕೆಲಸ ಮಾಡಿ ಗಳಿಸಿದ ಹಣದಿಂದ ನಾನು ಅದನ್ನು ಖರೀದಿಸಿದ್ದೆ ಎಂದು ಮಹಿಳೆ ಹೇಳಿದ್ದಾಳೆ.