ಮೊಬೈಲ್‌ ಕದ್ದು ಚಲಿಸುತ್ತಿರುವ ರೈಲಿನಿಂದ ಹಾರಿದ ಭೂಪ! – ಆಮೇಲೆ ಏನಾಯ್ತು ಗೊತ್ತಾ?  

ಮೊಬೈಲ್‌ ಕದ್ದು ಚಲಿಸುತ್ತಿರುವ ರೈಲಿನಿಂದ ಹಾರಿದ ಭೂಪ! – ಆಮೇಲೆ ಏನಾಯ್ತು ಗೊತ್ತಾ?  

ರೈಲು ಪ್ರಯಾಣದ ವೇಳೆ ಕಳ್ಳರ ಕಾಟ ಹೆಚ್ಚಾಗಿರುತ್ತೆ. ಸ್ವಲ್ಪ ಎಚ್ಚರ ತಪ್ಪಿದ್ರೂ ನಮ್ಮಲ್ಲಿರೋ ವಸ್ತು ಕಳ್ಳರ ಪಾಲಾಗುತ್ತೆ. ಇದೀಗ ಇಲ್ಲೊಬ್ಬ ರೈಲು ಪ್ರಯಾಣಿಕರ ಫೋನ್‌ ಕಸಿದುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಇಂಗ್ಲೆಂಡ್ ಪರ ಬ್ಯಾಟರ್ ಗಳ ಭರ್ಜರಿ ಪ್ರದರ್ಶನ -10 ವರ್ಷಗಳ ಬಳಿಕ ಭಾರತ ಕೆಟ್ಟ ದಾಖಲೆ  

ಬಿಹಾರದ ಮುಂಗೇರ್ ಬಳಿ ಭಾಗಲ್ಪುರ್-ಮುಜಾಫರ್ಪುರ್ ಜನಸೇವಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ನಡೆದಿದೆ. ಕಳ್ಳನೊಬ್ಬ ಮೊಬೈಲ್ ಫೋನ್ ಕಸಿದುಕೊಂಡು ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ್ದಾನೆ. ವೇಗವಾಗಿ ಚಲಿಸುತ್ತಿದ್ದ ರೈಲಿನ ಫುಟ್‍ಬೋರ್ಡ್‌ನಲ್ಲೇ ನೇತಾಡುತ್ತಾ ಕೊನೆಗೆ ಜಿಗಿದಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಮೊಬೈಲ್‌ ಕದ್ದಾತ ಚಲಿಸುವ ರೈಲಿನ ಕೆಳಗಿನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ್ದಾನೆ. ಸಹ ಪ್ರಯಾಣಿಕರು ಆತನ ಮೇಲೆ ಕೂಗುತ್ತಾ ಬೆಲ್ಟ್‌ನಿಂದ ಹೊಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಳ್ಳ, ಇತರರು ಅಲ್ಲಿಂದ ಹೋಗದಿದ್ದರೆ ಅವರ ಕಾಲುಗಳನ್ನು ಹಿಡಿದು ಕೆಳಗೆ ಎಳೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ, ಕಳ್ಳ ಬೋಗಿಯಿಂದ ಜಾರಿ ಕೆಳಗೆ ಇಳಿದು ರೈಲಿನ ಫುಟ್‌ಬೋರ್ಡ್‌ನಲ್ಲಿ ನೇತಾಡಿದ್ದಾನೆ. ರೈಲು ಸೇತುವೆಯನ್ನು ದಾಟಿದ ನಂತರ ಪೊದೆಗಳಿಗೆ ಹಾರಿ ತಪ್ಪಿಸಿಕೊಂಡಿದ್ದಾನೆ. ಈ ಸಂಬಂಧ ಜಮಾಲ್ಪುರ ರೈಲ್ವೆ ಎಸ್ಪಿ ರಮಣ್ ಚೌಧರಿ, ವಿಡಿಯೋ ತಮ್ಮ ಗಮನಕ್ಕೆ ಬಂದಿದೆ ಮತ್ತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ದೃಢಪಡಿಸಿದರು. ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ವಿಡಿಯೊದಲ್ಲಿ ಕಂಡುಬಂದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.

Shwetha M