ಭಾರತವೇ ಸೂಪರ್ ಸ್ಟ್ರಾಂಗ್ ಎಂದ PAK -ವೈಟ್ ಬಾಲ್ ಕ್ರಿಕೆಟ್ ನಲ್ಲಿ ಮುಟ್ಟೋಕಾಗಲ್ವಾ?
ಪಾಕ್ ಕೋಚ್ ಸತ್ಯ ಒಪ್ಪಿಕೊಂಡಿದ್ದೇಕೆ?

ಭಾರತವೇ ಸೂಪರ್ ಸ್ಟ್ರಾಂಗ್ ಎಂದ PAK -ವೈಟ್ ಬಾಲ್ ಕ್ರಿಕೆಟ್ ನಲ್ಲಿ ಮುಟ್ಟೋಕಾಗಲ್ವಾ?ಪಾಕ್ ಕೋಚ್ ಸತ್ಯ ಒಪ್ಪಿಕೊಂಡಿದ್ದೇಕೆ?

ಭಾರತ ಹಾಗೇ ಪಾಕಿಸ್ತಾನದ ನಡುವೆ ಸಾಕಷ್ಟು ಡಿಫ್ರೆನ್ಸಸ್ ಇದೆ. ರಾಜತಾಂತ್ರಿಕ ವಿಚಾರ, ಕ್ರೀಡೆ, ಜನಜೀವನ,  ಡಿಫೆನ್ಸ್, ಫೈನಾನ್ಶಿಯಲ್ ಹೀಗೆ ಎಲ್ಲದ್ರಲ್ಲೂ ಪಾಕಿಸ್ತಾನಕ್ಕಿಂತ ಭಾರತ 100ಪಟ್ಟು ಮುಂದಿದೆ. ಇದು ಜಗತ್ತಿಗೇ ಗೊತ್ತಿರುವಂತ ಸತ್ಯ ಕೂಡ. ಈಗ ಇದೇ ಸತ್ಯವನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಕೂಡ ಒಪ್ಪಿಕೊಂಡಿದ್ದಾರೆ. ಭಾರತ ಸೂಪರ್ ಸ್ಟ್ರಾಂಗ್ ಅನ್ನೋದನ್ನ ಓಪನ್ನಾಗೇ ಹೇಳಿದ್ದಾರೆ.

ಇದನ್ನೂ ಓದಿ : 2ನೇ ಪಂದ್ಯಕ್ಕಾದ್ರೂ ಆಡ್ತಾರಾ ವೈಭವ್ ಸೂರ್ಯವಂಶಿ – ಟಾಪ್-5ನಲ್ಲಿ ಚೇಂಜ್ ಮಾಡ್ತಿಲ್ಲ ಏಕೆ?

ವಿಶ್ವಕ್ರಿಕೆಟ್​ನಲ್ಲಿ ಬಿಸಿಸಿಐ ದೊಡ್ಡಣ್ಣ. ಆಟಗಾರರ ಪ್ರದರ್ಶನವೂ ಹಾಗೇ ಇದೆ. ರೆವೆನ್ಯೂ ವಿಚಾರದಲ್ಲೂ ಭಾರತೀಯ ಅಭಿಮಾನಿಗಳಿಂದಲೇ ಹಣದ ಹೊಣೆಯೇ ಹರಿದು ಬರುತ್ತೆ. ಟೀಂ ಇಂಡಿಯಾ ವೈಟ್ ಬಾಲ್ ಫಾರ್ಮೆಟ್​ನಲ್ಲಂತೂ ಪೀಕ್ ಪರ್ಫಾಮೆನ್ಸ್ ಇದೆ.  ಇದೇ ಸತ್ಯವನ್ನ ಪಾಕಿಸ್ತಾನ ವೈಟ್ ಬಾಲ್ ಕ್ರಿಕೆಟ್ ಕೋಚ್ ಆಗಿರುವ ಮೈಕ್ ಹಸ್ಸನ್ ಹೇಳಿದ್ದಾರೆ. ಆರ್‌ಸಿಬಿಯ ಮಾಜಿ ಕೋಚ್ ಆಗಿದ್ದ ನ್ಯೂಜಿಲೆಂಡ್ ಮೂಲದ ಮೈಕ್ ಹೆಸ್ಸನ್, 2025ರಲ್ಲಿ ಪಾಕಿಸ್ತಾನ ಸೀಮಿತ ಓವರ್‌ಗಳ ತಂಡದ ಹೆಡ್‌ಕೋಚ್ ಆಗಿದ್ದು ಈಗ ಪಾಕಿಸ್ತಾನದ ಹುಳುಕುಗಳನ್ನ ಬಟಾಬಯಲು ಮಾಡಿದ್ದಾರೆ.

ಭಾರತವನ್ನ ಸೋಲಿಸೋದು ಜಗತ್ತಿನ ಬಲಿಷ್ಠ ತಂಡಗಳಿಗೂ ಕಷ್ಟ!

ಕ್ರಿಕೆಟ್ ನಲ್ಲಿ ಭಾರತ ತಂಡದ ಪ್ರದರ್ಶನ ಬಗ್ಗೆ ಮಾತನಾಡಿರುವ ಮೈಕ್ ಹೆಸ್ಸೆನ್, ಇದೇ ವೇಳೆ ಪಾಕಿಸ್ತಾನದ ಶೋಚನೀಯ ಸ್ಥಿತಿಯನ್ನೂ ವಿವರಿಸಿದ್ದಾರೆ. ಕಳೆದ ವರ್ಷ ನಡೆದ ಏಷ್ಯಾಕಪ್ ಟೂರ್ನಿಯನ್ನೇ ಎಕ್ಸಾಂಪಲ್ ನೀಡಿದ್ದಾರೆ. ಕಳೆದ ವರ್ಷ ನಡೆದ ಏಷ್ಯಾಕಪ್​ನಲ್ಲಿ ನಾವು ಭಾರತವನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಗೆದ್ದಿದ್ದೇವೆ. ಇದರರ್ಥ ಪಾಕಿಸ್ತಾನ ಮಾತ್ರವಲ್ಲ ಜಗತ್ತಿನ ಪ್ರತಿಯೊಂದು ತಂಡವು ಭಾರತವನ್ನು ಸೋಲಿಸಲು ಒದ್ದಾಡುತ್ತಿವೆ ಎನ್ನೋ ಮೂಲಕ ಭಾರತದ ಶಕ್ತಿಯನ್ನ ಒಪ್ಪಿಕೊಂಡಿದ್ದಾರೆ. ಸರಿಯೋ, ತಪ್ಪೋ, ಪಾಕಿಸ್ತಾನದ ಸಾಮರ್ಥ್ಯವನ್ನು ಭಾರತದ ವಿರುದ್ಧ ಅವರ ಪ್ರದರ್ಶನದ ಆಧಾರದಲ್ಲಿ ಅಳೆಯಲಾಗುತ್ತದೆ. ಸದ್ಯದ ಮಟ್ಟಿಗಂತೂ ಟೀಂ ಇಂಡಿಯಾ ಕೇವಲ ಜಗತ್ತಿನ ಅತ್ಯುತ್ತಮ ತಂಡ ಮಾತ್ರವಲ್ಲ, ಇತರ ತಂಡಗಳಿಗಿಂತ ಮೈಲುಗಟ್ಟಲೇ ಮುಂದಿದೆ ಎಂದಿದ್ದಾರೆ. ಹಸ್ಸೆನ್​ರ ಇದೇ ಮಾತುಗಳು ಕ್ರಿಕೆಟ್ ಲೋಕದಲ್ಲಿ ಕಿಚ್ಚು ಹಚ್ಚಿದೆ.

ಐಸಿಸಿ ಟೂರ್ನಿಗಳಲ್ಲಿ ಮಕಾಡೆ ಮಲಗುತ್ತಿದೆ ಪಾಕಿಸ್ತಾನ!

ಇನ್ನು ಇದೇ ವೇಳೆ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ಫೇಲ್ಯೂರ್ ಬಗ್ಗೆಯೂ ಮಾತನಾಡಿದ್ದಾರೆ. 2023-2025ರ ಅವಧಿಯಲ್ಲಿ ಐಸಿಸಿ ಟೂರ್ನಿಗಳಲ್ಲಿ ಗುಂಪು ಹಂತದಿಂದಲೇ ಹೊರಬಿದ್ದಿದೆ. ಅದ್ರಲ್ಲೂ ವಿಶ್ವಕಪ್ ಹಾಗೂ ಏಷ್ಯಾ ಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಗೆಲ್ಲುವುದು ಕನಸಿನ ಮಾತಾಗಿಯೇ ಉಳಿದಿದೆ. 2025ರ ಯುಎಇಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಉಭಯ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರರಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಗುಂಪು ಹಂತ, ಸೂಪರ್ ಫೋರ್ ಹಾಗೂ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತ, ತನ್ನ ಒಂಬತ್ತನೇ ಏಷ್ಯಾ ಕಪ್ ಮುಡಿಗೇರಿಸಿಕೊಂಡಿತ್ತು. ಫೈನಲ್ ಪಂದ್ಯದಲ್ಲಿ 1 ವಿಕೆಟ್‌ಗೆ 113 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ, ದಿಢೀರ್ ಕುಸಿತ ಕಂಡು 146 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು ಭಾರತ 19.4 ಓವರ್‌ಗಳಲ್ಲಿ ಬೆನ್ನತ್ತಿ ಜಯ ಸಾಧಿಸಿತ್ತು. ಅಷ್ಟೇ ಅಲ್ಲ ವೈಟ್ ಬಾಲ್ ವಿಶ್ವಕಪ್​ಗಳಲ್ಲೂ ಭಾರತ ಟಾಪ್​ನಲ್ಲೇ ಇದೆ.

3 ವರ್ಷಗಳಲ್ಲಿ ಮೂರು ಐಸಿಸಿ ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ!

ವೈಟ್ ಬಾಲ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಡಾಮಿನೇಷನ್ ಹೇಗಿದೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್. ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಐಸಿಸಿಯ ಪ್ರತಿಷ್ಠಿತ ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಅದೂ ಸತತವಾಗಿ ಯಾರೊಬ್ರಿಗೂ ಟ್ರೋಫಿ ಬಿಟ್ಟುಕೊಟ್ಟಿಲ್ಲ. 2024ರಲ್ಲಿ ಟಿ20 ವಿಶ್ವಕಪ್, 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರಲ್ಲಿ ಮತ್ತೊಮ್ಮೆ ಐಸಿಸಿ ಟಿ20 ಟ್ರೋಫಿಗೆ ಮುತ್ತಿಕ್ಕಿದೆ. ಪಾಕ್ ವಿರುದ್ಧವಂತೂ ಕಳೆದ ನಾಲ್ಕು ವರ್ಷಗಳಿಂದ ಅನ್ ಬೀಟನ್ ಟೀಂ ಆಗಿ ಮುನ್ನುಗ್ತಿದೆ.

ಭಾರತದ ವಿರುದ್ಧ ಪಾಕ್ ಗೆದ್ದು 4 ವರ್ಷಗಳೇ ಕಳೆದಿದೆ!

ಪಾಕಿಸ್ತಾನ ಟೀಂ ಐಸಿಸಿ ಟ್ರೋಫಿಗಳನ್ನ ಗೆಲ್ಲೋದಿರ್ಲಿ ಭಾರತದ ವಿರುದ್ಧ ಪಂದ್ಯ ಗೆದ್ದೇ ನಾಲ್ಕು ವರ್ಷ ಕಳೆದಿದೆ. ಕೊನೆಯ ಬಾರಿಗೆ ಪಾಕಿಸ್ತಾನ ಗೆದ್ದ್ದದ್ದು 2022ರ ಸೆಪ್ಟೆಂಬರ್ ನಾಲ್ಕರಂದು. ಏಷ್ಯಾಕಪ್​ನಲ್ಲಿ. ಸೂಪರ್ 4 ಪಂದ್ಯದಲ್ಲಿ. ದುಬೈನಲ್ಲಿ ನಡೆದ ಈ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತ್ತು. ಇನ್ನು ಐಸಿಸಿ ಈವೆಂಟ್​ಗಳಲ್ಲಿ ನೋಡೋದಾದ್​ರೆ ಭಾರತ ತಂಡವು ಕೊನೆಯ ಬಾರಿಗೆ ಪಾಕಿಸ್ತಾನದ ವಿರುದ್ಧ ಸೋತದ್ದು 2021ರಲ್ಲಿ. ಅಕ್ಟೋಬರ್ 24ರಂದು ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ 10 ವಿಕೆಟ್‌ಗಳ ಭಾರಿ ಅಂತರದಿಂದ ಸೋತಿತ್ತು. ಅದಾದ್ಮೇಲೆ ಪಾಕಿಸ್ತಾನ ಗೆದ್ದಿದ್ದೇ ಇಲ್ಲ. 2022ರ ಏಷ್ಯಾಕಪ್​ನಲ್ಲಿ ಗೆದ್ದ ಪಾಕಿಸ್ತಾನ ಆ ನಂತ್ರ ಸತತ 7 ಪಂದ್ಯಗಳಲ್ಲಿ ಮುಗ್ಗರಿಸಿದೆ. ಟಿ-20 ವಿಶ್ವಕಪ್, ಏಷ್ಯಾಕಪ್, ಏಕದಿನ ವಿಶ್ವಕಪ್ ಹೀಗೆ ಎದುರು ಬದುರಾದಾಗಲೆಲ್ಲಾ ಪಾಕಿಸ್ತಾನ ಹೀನಾಯ ಸೋಲುಗಳನ್ನ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಪಾಕ್ ಟೀಂ ಸ್ಥಿತಿ ಹೆಂಗಾಗಿದೆ ಅಂದ್ರೆ ಐಸಿಸಿ ವಿಶ್ವಕಪ್​ಗಳನ್ನ ಗೆಲ್ಲೋದಿರ್ಲಿ ಭಾರತದ ವಿರುದ್ಧ ಗೆದ್ರೆ ಸಾಕು ಅನ್ನೋ ಥರ ಆಗೋಗಿದ್ದಾರೆ. ಇದೇ ಕಾರಣಕ್ಕೆ ಪಾಕಿಸ್ತಾನದ ಕೋಚ್ ಕೂಡ ಭಾರತವನ್ನ ಸೂಪರ್ ಸ್ಟ್ರಾಂಗ್ ಅಂತಾ ಒಪ್ಪಿಕೊಂಡಿದ್ದಾರೆ. ಹಾಗೇ ಬೇರೆ ತಂಡಗಳಿಗೂ ಭಾರತವನ್ನ ಸೋಲಿಸೋದು ಕಷ್ಟ ಎಂದಿದ್ದಾರೆ.

Shantha Kumari

Leave a Reply

Your email address will not be published. Required fields are marked *