ಗುಜರಾತ್ ನಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದು ಬಿಜೆಪಿ – ಅಮಿತ್ ಶಾ

ಅಹಮದಾಬಾದ್: ಕಾಂಗ್ರೆಸ್ ಬೆಂಬದಿಂದ ಸಮಾಜ ವಿರೋಧಿ ಶಕ್ತಿಗಳು ಗುಜರಾತ್‌ನಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದವು. ಆದರೆ 2002 ರಲ್ಲಿ ಸಮಾಜಘಾತುಕರಿಗೆ ಪಾಠ ಕಲಿಸಿದ ನಂತರ ಅವರು ಅಂತಹ ಚಟುವಟಿಕೆಗಳನ್ನು ನಿಲ್ಲಿಸಿದರು. ಬಳಿಕ ಬಿಜೆಪಿ ರಾಜ್ಯದಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
2002 ರಲ್ಲಿ ಆ ವರ್ಷದ ಫೆಬ್ರವರಿಯಲ್ಲಿ ಗೋಧ್ರಾ ರೈಲು ನಿಲ್ದಾಣದಲ್ಲಿ ರೈಲು ಸುಟ್ಟ ಘಟನೆಯ ನಂತರ ಗುಜರಾತ್‌ನ ಕೆಲವು ಭಾಗಗಳು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದವು. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಖೇಡಾ ಜಿಲ್ಲೆಯ ಮಹುಧಾ ಪಟ್ಟಣದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: ಗುಜರಾತ್ ಚುನಾವಣೆ – ಕ್ರಿಮಿನಲ್ ಕೇಸ್ ಎದುರಿಸುತ್ತಿರುವವರಿಂದಲೇ ಸ್ಪರ್ಧೆ!
ಗುಜರಾತ್‌ನಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ (1995 ಕ್ಕಿಂತ ಮೊದಲು) ಕೋಮುಗಲಭೆಗಳು ವ್ಯಾಪಕವಾಗಿದ್ದವು. ಕಾಂಗ್ರೆಸ್ ವಿವಿಧ ಸಮುದಾಯ ಮತ್ತು ಜಾತಿಗಳ ಜನರನ್ನು ಪರಸ್ಪರ ವಿರುದ್ಧ ಹೋರಾಡಲು ಪ್ರಚೋದಿಸುತ್ತದೆ. ಇಂತಹ ಗಲಭೆಗಳ ಮೂಲಕ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ಅನ್ನು ಬಲಪಡಿಸಿತು. ಸಮಾಜದ ದೊಡ್ಡ ವರ್ಗಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್ನಿಂದ ಪಡೆದ ದೀರ್ಘಕಾಲದ ಬೆಂಬಲದಿಂದಾಗಿ ದುಷ್ಕರ್ಮಿಗಳು ಹಿಂಸಾಚಾರ ಮಾಡುತ್ತಿದ್ದರು. ಹೀಗಾಗಿ 2002 ರಲ್ಲಿ ಗುಜರಾತ್ ಗಲಭೆಗಳಿಗೆ ಸಾಕ್ಷಿಯಾಯಿತು ಎಂದು ಹೇಳಿದ್ದಾರೆ.
मोदी जी व भाजपा के विकास, जनकल्याण व सुशासन के प्रति महुधा की जनता का ये विश्वास संकेत है कि गुजरात में फिर से प्रचंड बहुमत से भगवा लहराने जा रहा है।
મોદીજીના જનકલ્યાણ અને સુશાસન પ્રત્યેનો મહુધાની જનતાનુ સમર્થન એ વાતનો સંકેત છે કે ગુજરાતમાં ફરી જંગી બહુમતી સાથે ભગવો લહેરાશે. pic.twitter.com/aw7iZtWS4N
— Amit Shah (@AmitShah) November 25, 2022
ಹೀಗಾಗಿ 2002 ರಲ್ಲಿ ಜನರು ಕಾಂಗ್ರೆಸ್ ಗೆ ಪಾಠ ಕಲಿಸಿದ ನಂತರ, ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರದ ಹಾದಿ ತೊರೆದವು. ಬಿಜೆಪಿ ಸರ್ಕಾರ ಗುಜರಾತ್‌ನಲ್ಲಿ ಕೋಮುಗಲಭೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ಶಾಶ್ವತ ಶಾಂತಿ ಸ್ಥಾಪಿಸಿದೆ ಎಂದರು.