ಇಲ್ಲಿ‌ ಕುರಿ‌ ಬೆಳೆ ತಿಂದರೆ ಅದೃಷ್ಟ ಒಲಿಯುತ್ತಂತೆ! – ಯಾವ ರಾಜಕಾರಣಿ ಇಲ್ಲಿ‌ ಕುರಿ‌ ಮೇಯಿಸಿದ್ರು ಗೊತ್ತಾ?

ಇಲ್ಲಿ‌ ಕುರಿ‌ ಬೆಳೆ ತಿಂದರೆ ಅದೃಷ್ಟ ಒಲಿಯುತ್ತಂತೆ! – ಯಾವ ರಾಜಕಾರಣಿ ಇಲ್ಲಿ‌ ಕುರಿ‌ ಮೇಯಿಸಿದ್ರು ಗೊತ್ತಾ?

ಯಾವುದಾದ್ರೂ ಪ್ರಾಣಿಗಳು ಬೆಳೆ ತಿಂದ್ರೆ, ಬೆಳೆ ನಾಶವಾಗುತ್ತೆ ಎಂದು ನಾವು ಬೇಸರ ಮಾಡಿಕೊಳ್ಳುತ್ತೇವೆ. ಆದ್ರೆ ನಾನು ಹೇಳೋದಿಕ್ಕೆ ಹೊರಟಿರೋ ಸ್ಟೋರಿ ಕಂಪ್ಲೀಟ್  ಉಲ್ಟಾ. ಇಲ್ಲಿ ಕುರಿಗಳು ಬೆಳೆ ತಿಂದ್ರೆ, ಬೆಳೆ ಸಮೃದ್ಧಿಯಾಗಿ ಬೆಳೆಯುತ್ತಂತೆ.

ಇದನ್ನೂ ಓದಿ: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಕೆ.ಎಲ್ ರಾಹುಲ್ – ಕುಟುಂಬ ಸಮೇತ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ಕ್ರಿಕೆಟಿಗ

ಸಾಮಾನ್ಯವಾಗಿ ಹೊಲ ಗದ್ದೆಗಳಿಗೆ ಕುರಿಗಳು ನುಗ್ಗಿದ್ರೆ ಓಡ್ಸೋದು, ಹೊಡೆಯೋದು ಮಾಡ್ತಾರೆ. ಅಯ್ಯೋ ಕುರಿ ಬೆಳೆ ತಿಂದು ನಾಶ ಮಾಡ್ತಲ್ಲ ಅಂತ ಗೋಳಾಡ್ತಾರೆ. ಆದ್ರೆ ಈ ಊರಲ್ಲಿ ಹೊಲಗಳಿಗೆ ಕುರಿ ನುಗ್ಗಿದ್ರೆ ಕೈ ಮುಗಿಯುತ್ತಾರೆ. ಹೊಲದಲ್ಲಿ ಬೆಳೆ ಸಮೃದ್ಧವಾಗಿ ಬೆಳೆಯುತ್ತೆ ಅಂತಾ ಸಂತಸ ಪಡ್ತಾರೆ. ಗದ್ದೆಗಳಲ್ಲಿ ಬೆಳೆ ಮೇಯ್ತಿರುವ ಕುರಿಗಳನ್ನು ಮಾಲೀಕರು ಓಡಿಸೋದಿಲ್ಲ.. ಅದಕ್ಕೆ ಕಾರಣ ಇವು ಪವಾಡ ಪುರುಷ ಬಾಳು ಅಜ್ಜನ ಕುರಿಗಳು ಅನ್ನೋ ನಂಬಿಕೆ. ಕರ್ನಾಟಕದ ಗಡಿಯಂಚಿನಲ್ಲಿರುವ ಮಹಾರಾಷ್ಟ್ರದ ಸುಕ್ಷೇತ್ರ ಅದಮಾಪುರ ಗ್ರಾಮದ ಶ್ರೀ ಸಂತ ಬಾಳು ಅಜ್ಜನ ಕುರಿಗಳಿಗೆ ನಿಜವಾದ ದೇವರು ಅಂತಾ ಪೂಜೆ ಮಾಡಲಾಗುತ್ತೆ.

ಹೀಗಾಗಿ ಬಾಳು ಅಜ್ಜನ ಕುರಿಗಳನ್ನ ದೇವರಂತೆ ಕಾಣುವ ಜನರು, ಅವುಗಳ ಆರೈಕೆ ಮಾಡಿ ತಮ್ಮ ಭಕ್ತಿ ಪರಾಕಾಷ್ಠೆ ತೋರುತ್ತಾರೆ. ಇನ್ನು ದೈವಿ ಪುರುಷ ಬಾಳು ಅಜ್ಜನಿಗೆ ಐತಿಹಾಸಿಕ ಹಿನ್ನೆಲೆ ಇದೆ. ಬಾಳು ಅಜ್ಜನವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಕ್ಕೋಲ್ ಗ್ರಾಮದಲ್ಲಿ 1892ರಲ್ಲಿ ಜನಿಸಿದರು. ಬಾಳುಮಾಮ ಹುಟ್ಟಿದ ಮೂರೇ ತಾಸಿನಲ್ಲಿ ನಗು ಬೀರಿ ಆಶ್ಚರ್ಯಗೊಳಿಸಿದ್ದ ದೈವಿ ಪುರುಷರು ಎಂಬ ನಂಬಿಕೆಯಿದೆ. ಅವರು ಬಡವರ ಸೇವೆಗಾಗಿ ತಮ್ಮ ಜೀವನ ಮುಡಿಪಿಟ್ಟ ಮಹಾನ್ ಸಂತರು. ಅಲ್ಲದೆ ಬಾಳು ಅಜ್ಜನ ಕುರಿಗಳನ್ನು ಮೇಯಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಇದೇ‌ ಕಾರಣಕ್ಕಾಗಿ ಮಹಾರಾಷ್ಟ್ರದ ಕೆಲ ಹಿರಿಯ ರಾಜಕಾರಣಿಗಳು ಕರ್ನಾಟಕದ ಗಡಿ ಭಾಗದಲ್ಲಿರುವ ಈ ಹಳ್ಳಿಗೆ ಬಂದು ಕುರಿ‌ ಮೇಯಿಸಿ ಹರಕೆ ತೀರಿಸಿದ್ದೂ ಇದೆ.

Shwetha M