ಈ ತಪ್ಪುಗಳಿಂದಲೇ ನಿಮ್ಮ ಸ್ಮಾರ್ಟ್ ಫೋನ್ ಗೆ ವೈರಸ್ ಅಟ್ಯಾಕ್ ಆಗ್ಬೋದು!

ಈ ತಪ್ಪುಗಳಿಂದಲೇ ನಿಮ್ಮ ಸ್ಮಾರ್ಟ್ ಫೋನ್ ಗೆ ವೈರಸ್ ಅಟ್ಯಾಕ್ ಆಗ್ಬೋದು!

ಇದು ಡಿಜಿಟಲ್ ಯುಗ.. ಒಂದು ಲಿಂಕ್ ಕ್ಲಿಕ್ ಮಾಡಿದ್ರೂ ಏನೇನೋ ಆಗುತ್ತೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದು ಬಿಟ್ಟಿದೆ.. ಫೊನ್ ಹ್ಯಾಕ್ ಆಗೋದು.. ಫೋನ್ ಗೆ ವೈರಸ್ ಆಗೋದು ಕಾಮನ್ ಆಗಿಬಿಟ್ಟಿದೆ.  ನಾವು ಮಾಡೋ ಸಣ್ಣ ತಪ್ಪಿನಿಂದಲೇ ಕೆಲವು ದೊಡ್ದ ತೊಂದರೆ ಉಂಟಾಗುತ್ತದೆ. ಇದರಲ್ಲಿ ವೈರಸ್‌ ಅಟ್ಯಾಕ್ ಕೂಡ ಒಂದು. ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನಮ್ಮ ಸ್ಮಾರ್ಟ್​ಫೋನ್​ಗಳಿಗೆ ವೈರಸ್ ಪ್ರವೇಶಿಸುತ್ತವೆ. ಇದು ಯಾವಯಾವ ರೀತಿಯಲ್ಲಿ ಮೊಬೈಲ್ ಅನ್ನು ಪ್ರವೇಶಿಸಬಹುದು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಬೆಳಗ್ಗೆ ರೈಸ್ ಬಾತ್ ತಿನ್ನೋದು ತಪ್ಪಾ? – ಬ್ರೇಕ್ ಫಾಸ್ಟ್ ನಲ್ಲಿ ಅನ್ನದ ಐಟಂ ಎಷ್ಟು ತಿನ್ನಬಹುದು?

ಹೆಚ್ಚಿನವರು ಕೆಲವೊಮ್ಮೆ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಈ ತಪ್ಪು ದೊಡ್ಡ ತೊಂದರೆಗೆ ಕಾರಣವಾಗಬಹುದು. ಇಂತಹ ಕೆಲವು ಲಿಂಕ್ ಅಪಾಯಕಾರಿಯಾಗಿರುತ್ತದೆ. ಈ ಲಿಂಕ್‌ಗಳು ನಿಮ್ಮ ಸ್ಮಾರ್ಟ್​ಫೋನ್​ಗಳ ಒಳಗೆ ವೈರಸ್‌ಗಳನ್ನು ಸ್ಥಾಪಿಸಬಹುದು. ಆದ್ದರಿಂದ ಮುಂದಿನ ಬಾರಿ ತಪ್ಪಿಯೂ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಹಾಗೇ ನೀವು ಯಾವುದೇ ಅಪರಿಚಿತ ಇಮೇಲ್, ಮೆಸೇಜ್ ಸ್ವೀಕರಿಸಿದರೆ ಅಥವಾ ಯಾವುದೇ ವ್ಯಕ್ತಿಯು ವಾಟ್ಸ್​ಆ್ಯಪ್​ನಲ್ಲಿ ಲಿಂಕ್ ಅನ್ನು ಹಂಚಿಕೊಂಡರೆ, ಇದೇನು ಎಂದು ನೋಡುವ ಕುತೂಹಲದಲ್ಲಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ತೆರೆಯದಿರಿ. ಈಗೀಗ ಈರೀತಿಯ ಫೇಕ್ ಲಿಂಕ್​ಗಳ ಹಾವಳಿ ಹೆಚ್ಚಾಗಿದೆ.

ಯಾವುದೇ ಅನುಮಾನಾಸ್ಪದ ವೆಬ್​ಸೈಟ್‌ಗೆ ಭೇಟಿ ನೀಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಫೋನಿಗೆ ವೈರಸ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸೈಟ್‌ಗೆ ಭೇಟಿ ನೀಡಿದ ನಂತರ, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಮೊಬೈಲ್​ಗೆ ವೈರಸ್ ಬರಬಹುದು.

ಆಂಡ್ರಾಯ್ಡ್ ಸ್ಮಾರ್ಟ್​ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಐಫೋನ್​ನಲ್ಲಿ ಆ್ಯಪ್ ಸ್ಟೋರ್ ಇದೆ. ಇವುಗಳಲ್ಲಿ ಕೆಲವು ಫೇಕ್ ಆ್ಯಪ್​ಗಳು ಇರುತ್ತವೆ. ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಅನ್ನು ಇನ್​ಸ್ಟಾಲ್ ಮಾಡುವ ಮೊದಲು ಎರಡು ಬಾರಿ ಪರಿಶೀಲಿಸಿ. ಆ ಆ್ಯಪ್​ನ ಹಿನ್ನಲೆ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ. ಇನ್ನು ಹೋಟೆಲ್ ಅಥವಾ ರೆಸ್ಟೋರೆಂಟ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಉಚಿತ ವೈ-ಫೈ ಲಭ್ಯವಿರುತ್ತದೆ. ಹಾಗಂತ ಇದನ್ನು ಬಳಸಿದರೆ ನಿಮಗೆ ದುಬಾರಿಯಾಗಬಹುದು. ನಿಮ್ಮ ಸ್ಮಾರ್ಟ್​ಫೋನ್ ಉಚಿತ ವೈ-ಫೈಗೆ ಸಂಪರ್ಕಿಸಿದ ತಕ್ಷಣ, ವೈರಸ್‌ಗಳು ಪ್ರವೇಶಿಸುವ ಅಪಾಯವು ಹೆಚ್ಚಿರುತ್ತದೆ. ಇವುಗಳ ಬಗ್ಗೆ ಎಚ್ಚರ ವಹಿಸಿ.

Shwetha M