ಈ ಹಣ್ಣುಗಳನ್ನು ತಿಂದ್ರೆ ಮಳೆಗಾಲದಲ್ಲಿ ಯಾವ ರೋಗವೂ ಬರಲ್ಲ!

ಮಳೆಗಾಲ ಆರಂಭವಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತೆ. ಶೀತ, ಜ್ವರ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಆರೋಗ್ಯಕರ ಆಹಾರ ಸೇವನೆಯು ಮುಖ್ಯವಾಗಿರುತ್ತದೆ. ಇನ್ನು ಪ್ರತೀ ಸೀಸನ್ ಬದಲಾಗುತ್ತಿದ್ದಂತೆ ಪೃಕೃತಿಯು ಅದಕ್ಕೆ ಪೂರಕವಾದ ಹಣ್ಣು ಮತ್ತು ತರಕಾರಿಗಳನ್ನು ನೀಡುತ್ತದೆ. ಇದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.
ಇದನ್ನೂ ಓದಿ: ಶ್ರೇಯಸ್ ಗೆ ಮೊದಲ ಸರಣಿಯೇ ರದ್ದು? – ಐರ್ಲೆಂಡ್ ವಿರುದ್ಧ ಆಡಲ್ವಾ ಭಾರತ?
ಪ್ರಕೃತಿಯಲ್ಲಿ ಪ್ರತಿ ಸಮಸ್ಯೆಗೆ ಒಂದಲ್ಲ ಒಂದು ಪರಿಹಾರ ಇದ್ದೇ ಇರುತ್ತೆ. ಸೀಸನ್ಗೆ ತಕ್ಕಂತೆ ಹಣ್ಣು, ತರಕಾರಿಗಳು ಸಿಗುತ್ತವೆ. ಇವುಗಳನ್ನ ಸೇವಿಸಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಕೆಲವು ಹಣ್ಣುಗಳನ್ನು ಮಳೆಗಾಲದಲ್ಲಿ ಒಳ್ಳೆಯದು ಎಂದು ಹೇಳಲಾಗಿದೆ. ಆದ್ದರಿಂದ ಮಾನ್ಸೂನ್ನಲ್ಲಿ ತಿನ್ನಬಹುದಾದ ಹಣ್ಣುಗಳ ಮಾಹಿತಿ ಇಲ್ಲಿದೆ.
ಅಂಜೂರ ಹಣ್ಣು: ವರದಿ ಪ್ರಕಾರ, ಮಳೆಗಾಲದಲ್ಲಿ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ ಬಹಳಷ್ಟು ಅನುಕೂಲವಿದೆ. ಫೈಬರ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣುಗಳನ್ನು ಮಳೆಗಾಲದಲ್ಲಿ ತಿಂದರೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎನ್ನಲಾಗಿದೆ. ಇನ್ನು ಪೊಟ್ಯಾಸಿಯಂ, ಮೆಗ್ನೀಸಿಯಂ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಅಂಜೂರ ಹಣ್ಣು ಆರೋಗ್ಯಕ್ಕೂ ಒಳ್ಳೆಯದು, ದೇಹದಲ್ಲಿ ಹೆಚ್ಚಿನ ಶಕ್ತಿಯನ್ನೂ ಉತ್ಪಾದಿಸುತ್ತದೆ ಎನ್ನಲಾಗಿದೆ.
ಅಂಜೂರದಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವ ನಾರಿನಾಂಶವಿದೆ. ಆದ್ದರಿಂದ ಇದು ಮಲಬದ್ಧತೆಯನ್ನೂ ಸುಧಾರಿಸುತ್ತದೆ. ಕೊಲೆಸ್ಟ್ರಾಲ್, ಹೃದಯದ ಆರೋಗ್ಯಕ್ಕೂ ಅಂಜೂರ ಹಣ್ಣು ರಾಮಬಾಣ ಎನ್ನಲಾಗಿದೆ.
ಲಿಚಿ ಹಣ್ಣು: ಮಳೆಗಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು ಲಿಚಿ ಹಣ್ಣು ತಿನ್ನಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ವಿಟಮಿನ್ ಸಿ ಸಮೃದ್ಧವಾಗಿರುವ ಲಿಚಿ ಹಣ್ಣುಗಳು, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇನ್ನು ಪೊಟ್ಯಾಸಿಯಂ ಹೇರಳವಾಗಿದೆ. ಲಿಚಿ ಹಣ್ಣು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯುತ್ತದೆ ಎನ್ನಲಾಗಿದೆ.
ಜಾಮೂನ್ ಹಣ್ಣು: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ ಈ ಜಾಮೂನ್ ಹಣ್ಣುಗಳನ್ನು ಸೇವಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಮಳೆಗಾಲದಲ್ಲಿ ಜಾಮೂನ್ ಹಣ್ಣುಗಳನ್ನು ಸೇವಿಸುವುದರಿಂದ ದೇಹವು ಆರೋಗ್ಯವಾಗಿರುತ್ತದೆ.
ಜಾಮೂನ್ಗಳು ವಿಟಮಿನ್ ಸಿ ಪೋಷಕಾಂಶವನ್ನು ಹೊಂದಿರುವುದರಿಂದ, ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎನ್ನಲಾಗಿದೆ. ಆದ್ದರಿಂದ ಈ ಹಣ್ಣುಗಳನ್ನು ಮಳೆಗಾಲದಲ್ಲಿ ತಿನ್ನುವುದರಿಂದ ದಿನವಿಡೀ ಆರೋಗ್ಯವಾಗಿರಬಹುದು ಎನ್ನಲಾಗಿದೆ.

ನೋಡಿರಿ

