‘ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡದೆ ರಾಜ್ಯದ ಜನತೆಗೆ ಕೊಟ್ಟ ಶಾಪಗಳು ಇವುಗಳೇ..!ʼ – ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಭರವಸೆಯನ್ನು ರಾಜ್ಯದ ಜನರಿಗೆ ನೀಡಿ ಅಧಿಕಾರಕ್ಕೆ ಬಂದಿದೆ. 100 ದಿನಗಳಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಮಾತ್ರ ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡದೆ ಜನರಿಗೆ ಕೊಟ್ಟಿರುವ ಶಾಪಗಳು..!ʼ ಎಂದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡದೆ ಜನರಿಗೆ ಕೊಟ್ಟಿರುವ ಶಾಪಗಳು..!’ ಎಂದು ಹಲವಾರು ಅಂಶಗಳನ್ನು ಪಟ್ಟಿ ಮಾಡಿದೆ. ಬಜೆಪಿ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ರಾಜ್ಯ ಸರ್ಕಾರ ವೈಫಲ್ಯಗಳ ಪಟ್ಟಿ ಹೀಗಿವೆ..
ಇದನ್ನೂ ಓದಿ: ಇನ್ನುಮುಂದೆ ಬಸ್‌ನಲ್ಲಿ ಪ್ರಯಾಣಿಸಲು ಕೈಯಲ್ಲಿ ಕಾಸು ಇರಬೇಕಾಗಿಲ್ಲ! – ಕೆಎಸ್‌ಆರ್‌ಟಿಸಿಗೂ ಬಂತು ಡಿಜಿಟಲ್ ಪೇಮೆಂಟ್!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡದೆ ಜನರಿಗೆ ಕೊಟ್ಟಿರುವ ಶಾಪಗಳು..!
- ವಿದ್ಯುತ್ ಬೆಲೆ ದುಪ್ಪಟ್ಟು ಏರಿಕೆ, ಲೋಡ್ ಶೆಡ್ಡಿಂಗ್ ಮೂಲಕ ಕತ್ತಲು ಭಾಗ್ಯ..!
- ಬೆಳೆ ಬೆಳೆಯದಂತೆ ರೈತರಿಗೆ ಕೃಷಿ ಮಂತ್ರಿಯೇ ತಾಕೀತು, ಅಕ್ಕಿ ಬೆಲೆಯಲ್ಲೂ ಭಾರೀ ಏರಿಕೆ, ಮೋದಿ ಸರ್ಕಾರದ 5 ಕೆಜಿ ಅಕ್ಕಿಗೂ ಕನ್ನ, ಸಿದ್ದರಾಮಯ್ಯ ಸರ್ಕಾರ ಅಕ್ಕಿಯೂ ಕೊಡುತ್ತಿಲ್ಲ, ದುಡ್ಡೂ ಕೊಡುತ್ತಿಲ್ಲ..!
- ಅಸಮರ್ಪಕ ‘ಶಕ್ತಿ’ ಮೂಲಕ ಸಾರಿಗೆ ನಿಗಮಗಳು ನಿಶ್ಯಕ್ತಿ, ಟಿಕೆಟ್ ದರ ಏರಿಕೆ, ಬೀದಿಗೆ ಬಂದ ಖಾಸಗಿ ಬಸ್ ಮತ್ತು ಟ್ಯಾಕ್ಸಿ ಹಾಗೂ ಆಟೋ ಚಾಲಕರ ಕುಟುಂಬಗಳು..!
- ರಾಜ್ಯದಲ್ಲಿ ಬರ ಮತ್ತು ನೆರೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತ, ಪರಿಹಾರ ಮಾತ್ರ ಶೂನ್ಯ..!
- ರಾಜ್ಯದ ಜನರಿಗೆ ಕಲುಷಿತ ಕುಡಿಯುವ ನೀರು ಮಾತ್ರ ಪೂರೈಕೆ, ತಮಿಳುನಾಡಿಗೆ ಮಾತ್ರ ಪರಿಶುದ್ಧ ಕಾವೇರಿ ನೀರು ಬಿಡುಗಡೆ..!
- ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸಚಿವ ಶಿವಾನಂದ ಪಾಟೀಲ್, ಕೃಷಿ ಇಲಾಖೆಯನ್ನು ವಸೂಲಿ ಕೇಂದ್ರವನ್ನಾಗಿಸಿದ ಸಚಿವ ಚೆಲುವರಾಯಸ್ವಾಮಿ..!
- ಸಿಎಂ ಸಿದ್ದರಾಮಯ್ಯ ಅವರ ದುರಾಡಳಿತ ಕರ್ನಾಟಕಕ್ಕೆ ಅಪಾಯಕಾರಿಯಾಗಿದೆ. ಜನ ವಿರೋಧಿ ಹಾಗೂ ನಾಡ ವಿರೋಧಿತನವೇ ಕಾಂಗ್ರೆಸ್ಸಿನ ಡಿಎನ್ಎನಲ್ಲಿ ಸೇರಿಕೊಂಡಿದೆ..! ಎಂದು ಟ್ವೀಟ್ ನಲ್ಲಿ ಬಿಜೆಪಿ ಆರೋಪಿಸಿದೆ.