ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗಲು ಪ್ಲ್ಯಾನ್ ಮಾಡಿದ್ದೀರಾ? – ಟ್ರಿಪ್ ಮಾಡಲು ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ಸ್ಥಳಗಳು ಬೆಸ್ಟ್!
ಕೆಲವು ದಿನಗಳು ರಜೆ ಸಿಕ್ಕಾಗ ಕುಟುಂಬದ ಜೊತೆ ಅಥವಾ ಸ್ನೇಹಿತರ ಜೊತೆ ಪ್ರವಾಸ ಹೋಗಲು ಪ್ಲ್ಯಾನ್ ಮಾಡಿದ್ರಾ? ಹಾಗಾದ್ರೆ ನೀವು ದಕ್ಷಿಣ ಭಾರತ ಪ್ರವಾಸಕ್ಕೆ ಪ್ಲಾನ್ ಮಾಡಬಹುದು. ದಕ್ಷಿಣ ಭಾರತದಲ್ಲಿ ಸಾಕಷ್ಟು ರಮಣೀಯ ಪ್ರದೇಶಗಳಿಗೆ ಭೇಟಿ ನೀಡಬಹದು.
ಇದನ್ನೂ ಓದಿ: ಈ ಸೈಡ್ ತಿರುಗಿ ಮಲಗಿದ್ರೆ ಆರೋಗ್ಯಕ್ಕೆ ಉತ್ತಮ? – ಮಲಗೋ ಮುನ್ನ ಈ ವಿಚಾರ ತಿಳ್ಕೊಳ್ಳಿ!
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ತಳಗಳಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ದೇಶ, ವಿದೇಶಗಳಿಂದಲೂ ಆಗಮಿಸುವ ಪ್ರವಾಸಿಗರಿಗೆ ಕಣ್ಣು ಸೆಳೆಯುವುದು ಪ್ರಸಿದ್ಧ ಮೈಸೂರು ಅರಮನೆ. ಇನ್ನೊಂದು ಕಾರಣವೆಂದರೆ ಮೈಸೂರಿನಲ್ಲಿ ಅಷ್ಟಾಂಗ ಯೋಗದ ಕಲಿಕೆ ಮತ್ತು ವಿಶ್ವದೆಲ್ಲೆಡೆ ಖ್ಯಾತಿಗಳಿಸಿದ ದಸರಾ ಸಂಭ್ರಮ ವೀಕ್ಷಿಸಲು ಬರುತ್ತಾರೆ. ನೀವೂ ಇಲ್ಲಿಗೆ ಭೇಟಿ ನೀಡಿ ಸ್ಚಚ್ಛನಗರಿಯ ವೈಭವವನ್ನು ನೋಡಬಹುದು. ಜುಲೈನಿಂದ ಫೆಬ್ರವರಿ ತಿಂಗಳು ಇಲ್ಲಿಯ ಭೇಟಿಗೆ ಉತ್ತಮ ಸಮಯವಾಗಿದೆ.
ಸೋಲೋ ಟ್ರಾವೆಲರ್ಗಳ ಮೊದಲ ಆಯ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರು. ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಜನ ಕಾಣಸಿಗುವ ಪ್ರದೇಶ. ಇಲ್ಲಿಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಅರಮನೆ, ವಿಧಾನಸೌದ ಮನರಂಜನೆಗೆ ಪಬ್, ಬಾರ್ಗಳು ಎಲ್ಲವನ್ನೂ ಎಂಜಾಯ್ ಮಾಡಬಹುದು. ಸಿಲಿಕಾನ್ ಸಿಟಿಗೆ ನೀವು ಅಕ್ಟೋಬರ್ನಿಂದ ಫೆಬ್ರವರಿ ತಿಂಗಳು ಭೇಟಿ ನೀಡಲು ಸೂಕ್ತ ಸಮಯವಾಗಿದೆ.
ಪಾಂಡಿಚೇರಿ ಫ್ರೆಂಚರ ಇತಿಹಾಸ ಹೊಂದಿರುವ ಸ್ಥಳ, ಹಲವು ಬೀಚ್ಗಳನ್ನು ಹೊಂದಿರುವ ಈ ಸ್ಥಳ ಸೋಲೋ ಟ್ರಾವೆಲರ್ಸ್ಗಳಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಅಕ್ಟೋಬರ್ನಿಂದ ಮಾರ್ಚ್ವರೆಗೂ ನೀವು ಪಾಂಡಿಚೇರಿಗೆ ಭೇಟಿ ನೀಡಬಹದು.
ಕಂಚೀಪುರಂ ಸೀರೆಗೇ ಹೆಚ್ಚು ಹೆಸರುವಾಸಿಯಾಗಿರುವ ತಮಿಳುನಾಡಿನ ಕಾಂಚೀಪುರ ಪುರಾತನ ದೇವಾಲಯಗಳಿಗೂ ಹೆಚ್ಚು ಜನಪ್ರಿಯವಾಗಿದೆ. ಹೀಗಾಗಿ ನೀವು ಮಾರ್ಚ್ನಿಂದ ಅಕ್ಟೋಬರ್ವರೆಗೆ ಭೇಟಿ ನೀಡಬಹುದು.
ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದೇ ಹೆಸರುವಾಸಿಯಾಗುರವ ತಮಿಳುನಾಡಿನ ಕೊಯಂಬತ್ತೂರ್ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ. ಜುಲೈನಿಂದ ಮಾರ್ಚ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇಲ್ಲಿಗೆ ಭೇಟಿ ನೀಡಿದ ವೇಳೆ ಧ್ಯಾನ, ಯೋಗದಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನಸ್ಸನ್ನು ಶಾಂತ ಗೊಳಿಸಿಕೊಳ್ಳಬಹುದು.
ಮಧುರೈ ಮೀನಾಕ್ಷಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದೇವಿ. ತಮಿಳುನಾಡಿನ ಆತ್ಮ ಎಂದೇ ಕರೆಸಿಕೊಳ್ಳುವ ಮಧುರೈ ಡಾಬಾ, ಹೊಟೇಲ್ಗಳ ಮೂಲಕ ಫುಡ್ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತದೆ.
ನಿಜಾಮರ ಕಾಲದ ಶ್ರೀಮಂತ ಇತಿಹಾಸವನ್ನು ಹೊಂದಿರುವ ತೆಲಂಗಾಣದ ರಾಜಧಾನಿ ಹೈದ್ರಾಬಾದ್ ನಿಮ್ಮ ದಕ್ಷಿಣ ಭಾರತ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ. ತೆಲಂಗಾಣದ ವರಾಂಗಲ್ ದೇವಸ್ಥಾನವನ್ನೂ ಕೂಡ ನೀವು ಇಲ್ಲಿ ನೋಡಬಹುದು. ಇಲ್ಲಿಗೆ ನೀವು ಅಕ್ಟೋಬರ್ನಿಂದ ಫೆಬ್ರವರಿ, ಮಾರ್ಚ್ವರೆಗೂ ಭೇಟಿ ನೀಡಬಹುದು.
ಕಣ್ಣುಹಾಯಿಸಿದಷ್ಟೂ ದೂರ ಕಾಣುವ ಸಮುದ್ರದ ಮಧ್ಯದಲ್ಲಿ ಕಾಣುವ ಸ್ವಾಮಿ ವಿವೇಕಾನಂದರ ಸ್ಮಾರಕ ನಿಮ್ಮ ಕನ್ಯಾಕುಮಾರಿ ಪ್ರವಾಸವನ್ನು ಇನ್ನಷ್ಟು ಚೆಂದಗೊಳಿಸುತ್ತದೆ. ದಕ್ಷಿಣ ಭಾರತದ ತುದಿಯಲ್ಲಿರುವ ಈ ಸ್ಥಳದಲ್ಲಿ ನೀವು ಪುರಾತನ ಕೋಟೆಗಳು, ಚರ್ಚ್ಗಳಿಗೂ ಕೂಡ ಭೇಟಿ ನೀಡಬಹುದು. ಅಕ್ಟೋಬರ್ನಿಂದ ಫೆಬ್ರವರಿವರೆಗೆ ಕನ್ಯಾಕುಮಾರಿ ಭೇಟಿಗೆ ಉತ್ತಮ ಸಮಯವಾಗಿದೆ. ಸೂರ್ಯಾಸ್ತ, ಸೂರ್ಯೋದಯಕ್ಕೆ ಕನ್ಯಕುಮಾರಿ ಹೆಚ್ಚು ಪ್ರಸಿದ್ಧಿ.
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ತಿರುಪತಿ ಕೂಡ ಒಂದು. ಸಪ್ಟೆಂಬರ್ನಿಂದ ಫೆಬ್ರವರಿವರೆಗೆ ನೀವು ತಿರುಪತಿಗೆ ಭೇಟಿ ನೀಡಿ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಬಹುದು. ಜತೆಗೆ ಸುಂದರ ಗುಡ್ಡ ಬೆಟ್ಟಗಳನ್ನೂ ಕಾಣಬಹುದು.
ದಕ್ಷಿಣ ಭಾರತದಲ್ಲಿ ವೀಕೆಂಡ್ ಟ್ರಿಪ್ಗೆ ಸೂಕ್ತ ಜಾಗ ಮುನ್ನಾರ್. ಕೇರಳಕ್ಕೆ ಭೇಟಿ ನೀಡಿದ ವೇಳೆ ನೀವು ಕೊಚ್ಚಿ ಕಡಲತೀರ, ಹನಿಮೂನ್ ಸ್ಥಳವಾಗಿರುವ ಅಲ್ಲಾಪೆಗಳಿಗೂ ನೀವು ಭೇಟಿ ನೀಡಬಹುದು. ಅಕ್ಟೋಬರ್ನಿಂದ ಮೇ ತಿಂಗಳಿನವರೆಗೂ ನೀವು ಕೇರಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸದ ದಿನಗಳನ್ನು ಮೆಲೆಕು ಹಾಕುವಂತೆ ಮಾಡಿಕೊಳ್ಳಬಹುದು.

ನೋಡಿರಿ

