ಪ್ರಯಾಣಿಕನ ಬ್ಯಾಗ್‌ನಲ್ಲಿತ್ತು ಬರೋಬ್ಬರಿ 47 ಜೀವಂತ ಹಾವುಗಳು!
ತಿರುಚ್ಚಿ: ತಮಿಳುನಾಡಿನ ತಿರುಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರೊಬ್ಬರ ಬ್ಯಾಗ್ ತನಿಖೆ ಮಾಡುವಾಗ 47 ಜೀವಂತ ಹಾವುಗಳು ಮತ್ತು ಎರಡು ಹಲ್ಲಿಗಳು ಬ್ಯಾಗ್ ನಲ್ಲಿ ಪತ್ತೆಯಾಗಿದೆ. ಜೀವಂತ ಹಾವು ಹಾಗೂ ಹಲ್ಲಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಹಮ್ಮದ್ ಮೊಯ್ದೀನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಕೌಲಾಲಂಪುರದಿಂದ ಆಗಮಿಸಿದ ಪ್ರಯಾಣಿಕನಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ತಿರುಪತಿಗೂ KMFಗೂ ಇದ್ದ ಸಂಬಂಧ ಕಡಿತ – ಇನ್ಮುಂದೆ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ!
ಬಾಟಿಕ್ ಏರ್ ವಿಮಾನದ ಮೂಲಕ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಕಸ್ಟಮ್ಸ್ ಅಧಿಕಾರಿಗಳು ಮೊಯ್ದೀನ್ನನ್ನು ತಡೆದಿದ್ದಾರೆ. ಕೊನೆಗೆ ಆತನ ಬ್ಯಾಗ್ ವಿಚಿತ್ರವಾಗಿದ್ದನ್ನು ಗಮನಿಸಿದ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ, ಪೆಟ್ಟಿಗೆಗಳಲ್ಲಿ ಅಡಗಿಸಿಟ್ಟ ವಿವಿಧ ಪ್ರಭೇದಗಳ, ವಿವಿಧ ಗಾತ್ರಗಳ ಜೀವಂತ ಹಾವುಗಳು ಪತ್ತೆಯಾಗಿವೆ. ಬಳಿಕ ಅರಣ್ಯಾಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ 47 ಹೆಬ್ಬಾವು ಮತ್ತು ಎರಡು ಹಲ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸರೀಸೃಪಗಳ ಅಕ್ರಮ ಸಾಗಣೆ, ಕೃತ್ಯದಲ್ಲಿ ಭಾಗಿಯಾಗಿರುವ ಉದ್ದೇಶ ಮತ್ತು ಇತರ ಸಂಭಾವ್ಯ ಸಹಚರರನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.