ಅತ್ತೆ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಅಳಿಯನ ಗಲಾಟೆ! – ಕೊನೆಗೆ ಏನಾಯ್ತು ಗೊತ್ತಾ?
ಮೊದ್ಲೆಲ್ಲಾ ಗಂಡ ಹೆಂಡ್ತಿ ಜಗಳ ಅಂದ್ರೆ ಉಂಡು ಮಲಗೋ ತನಕ ಅಂತಿದ್ರು. ಆದ್ರೆ ಈಗ ಗಂಡ ಹೆಂಡ್ತಿ ಜಗಳ ಅಂದ್ರೆ ಡಿವೋರ್ಸ್ ಅಂತಾರೆ. ಸಣ್ಣ ಪುಟ್ಟ ಕಾರಣಗಳಿಗೂ ದಂಪತಿ ಬೇರೆಯಾಗಿ ಬಿಡ್ತಾರೆ. ಹೀಗೆಯೇ ಇಲ್ಲೊಬ್ಬ ತನ್ನ ಪತ್ನಿಗೆ ವಿಚ್ಚೇದನ ನೀಡಲು ಮುಂದಾಗಿದ್ದಾನೆ. ಆದ್ರೆ ಆತನ ಕಾರಣ ಕೇಳಿದ್ರೆ ನಿಮಗೂ ಅಚ್ಚರಿ ಅನ್ನಿಸಬಹುದು.
ಇದನ್ನೂ ಓದಿ: ಇನ್ನೇನು ಬಿಸಿಬಿಸಿ ಮೀನಿನ ಸಾರು ತಿನ್ನಬೇಕಿತ್ತು ಈ ಸಹೋದರರು! – ಕೆಲವೇ ಕ್ಷಣಗಳದಲ್ಲಿ ಹಾರಿಹೋಯ್ತು ಅಣ್ಣನ ಪ್ರಾಣ!
ಅತ್ತೆ ಮನೆಯಲ್ಲಿ ಶೌಚಾಲಯ ಇಲ್ಲ ಅನ್ನೋ ಕಾರಣಕ್ಕೆ ಸಿಟ್ಟಿಗೆದ್ದ ಅಳಿಯ ತನ್ನ ಪತ್ನಿಗೆ ವಿಚ್ಚೇದನ ನೀಡಲು ಮುಂದಾಗಿದ್ದಾನೆ. ಬಿಹಾರದ ನಳಂದ ಜಿಲ್ಲೆಯ ತೆಲ್ಮಾರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷಗಳ ಹಿಂದೆ ತೆಲ್ಮಾರ್ ಗ್ರಾಮದ ನಿವಾಸಿ ಸರ್ಗುಣ್ ದೇವಿ ಎಂಬುವವರ ಮಗಳನ್ನ ಪಾಟ್ನಾ ನಗರದ ನಿವಾಸಿ ವಿಕ್ಕಿ ಎಂಬಾತನ ಜೊತೆ ಮದುವೆ ಮಾಡಲಾಗಿತ್ತು. ಮದುವೆ ವೇಳೆ ಶೌಚಾಲಯ ನಿರ್ಮಿಸಬೇಕೆಂದು ಮದುಮಗ ಕೇಳಿದ್ದನಂತೆ. ಆಗ ವಧುವಿನ ತಂದೆ ತಾಯಿ ಕೂಡ ಒಪ್ಪಿಕೊಂಡಿದ್ದರು. ಆದ್ರೆ ವಿವಾಹ ನಡೆದು 2 ವರ್ಷಗಳಾದ್ರೂ ಪತ್ನಿಯ ಮನೆಯಲ್ಲಿ ಶೌಚಾಲಯ ನಿರ್ಮಿಸಿಲ್ಲ. ಶೌಚಾಲಯ ಇಲ್ಲ ಅನ್ನೋ ಕಾರಣಕ್ಕೆ ಅಳಿಯ ಮದುವೆಯಾದ ಮೇಲೆ ಒಮ್ಮೆಯೂ ಅತ್ತೆ ಮನೆಗೆ ಹೋಗಿಲ್ಲ. ಈ ವಿಚಾರದಲ್ಲಿ ಪತಿ-ಪತ್ನಿ ನಡುವೆ ಮನಸ್ತಾಪ ಉಂಟಾಗಿ ವಿಚ್ಚೇದನದವರೆಗೆ ಬಂದಿದೆ.
ತನಗೆ ಪತ್ನಿಯೇ ಬೇಡ ಎಂದು ವಿಚ್ಚೇದನಕ್ಕೆ ಮುಂದಾಗಿದ್ದಾನೆ. ಇದರಿಂದ ಕುಪಿತಗೊಂಡ ಹುಡುಗಿಯ ಮನೆಯವರು ಮದುವೆ ಆಯೋಜಿಸಿದ್ದ ಮುಖಂಡನಿಗೆ ದೂರು ನೀಡಿದ್ದಾರೆ. ಬಳಿಕ ವಾಗ್ವಾದ ನಡೆದು ಯುವತಿ ಮನೆಯವ್ರಿಗೆ ಥಳಿಸಲಾಗಿದೆ. ಒಂದು ಶೌಚಾಲಯದ ವಿಚಾರ ಗ್ರಾಮದಲ್ಲಿ ದೊಡ್ಡ ಗಲಾಟೆಗೂ ಕಾರಣವಾಗಿದೆ.