ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಡೆಡ್‌ಲೈನ್ ಇಲ್ಲ – ಆದರೆ ಈ ದಿನಾಂಕದೊಳಗೆ ನೋಂದಣಿಯಾಗದಿದ್ದರೆ ಫ್ರೀ ಕರೆಂಟ್ ಸಿಗಲ್ಲ!
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಡೆಡ್‌ಲೈನ್ ಘೋಷಿಸಿಲ್ಲ. ಆದರೆ ಈ ಸೌಲಭ್ಯ ಪಡೆಯಲು ಜುಲೈ 25ರ ಒಳಗೆ ಅರ್ಜಿ ಹಾಕದವರಿಗೆ ವಿದ್ಯುತ್ ಉಚಿತ ಸಿಗುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದಾರೆ.
ಇದನ್ನೂ ಓದಿ:ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ! – ಜಾಹೀರಾತು ಮೂಲಕ ಬಿಜೆಪಿಯನ್ನು ಕಾಲೆಳೆದ ಕಾಂಗ್ರೆಸ್
ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಕೆ.ಜೆ ಜಾರ್ಜ್, 200 ಯೂನಿಟ್ ಒಳಗೆ ವಿದ್ಯುತ್ ಬಳಸುವ ರಾಜ್ಯದ ಎಲ್ಲಾ ನಾಗರಿಕರಿಗೂ ಈ ತಿಂಗಳಿನಿಂದ ಉಚಿತ ವಿದ್ಯುತ್ ದೊರಕಲಿದೆ. ಆದರೆ ಈ ತಿಂಗಳು ಉಚಿತ ವಿದ್ಯುತ್ ಸಿಗಬೇಕೆಂದರೆ ಜುಲೈ 25ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದರೆ ಆಗಸ್ಟ್ ತಿಂಗಳ ಬಿಲ್ ನಲ್ಲಿ ಶೂನ್ಯ ಬಿಲ್ ಎಂದು ಬರುತ್ತದೆ. ಇಲ್ಲದಿದ್ದರೆ ನಾಗರಿಕರು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಎಲ್ಲರಿಗೂ ಬಿಲ್ ಬರುತ್ತೆ. ಜೂನ್ ತಿಂಗಳಿನದ್ದು ಜುಲೈಗೆ ಬರಲಿದೆ. ಎಲಿಜಬಲ್ ಇರೋ ಎಲ್ಲರಿಗೂ ಆಗಸ್ಟ್ 1ಕ್ಕೆ ಬಿಲ್ ಬರಲಿದ್ದು, ಉಚಿತ ಕರೆಂಟ್ ಸಿಗಲಿದೆ. ಈವರೆಗೆ ಅರ್ಜಿ ಸಲ್ಲಿಕೆ ಮಾಡದವರು ಕೂಡಲೇ ಅರ್ಜಿ ಸಲ್ಲಿಸಬೇಕು. ಸರ್ವರ್ ಬ್ಯೂಸಿ ಇದ್ದರೆ, ಕೆಇಬಿ ಆಫೀಸಿಗೂ ಹೋಗಿ ಅರ್ಜಿ ಕೊಡಬಹುದು. ಮೊದಲಿನಂತೆ ಈಗ ಸರ್ವರ್ ಸಮಸ್ಯೆಯಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ಉಚಿತ ಕರೆಂಟ್ ಸೌಲಭ್ಯ ಸಿಗಲ್ಲ ಎಂದು ಎಚ್ಚರಿಸಿದ್ದಾರೆ.