‘ಮದ್ಯಪಾನ ಮಾಡಿ ಸತ್ತವರಿಗೆ ಯಾವುದೇ ಪರಿಹಾರ ಕೊಡುವುದಿಲ್ಲ’ – ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

‘ಮದ್ಯಪಾನ ಮಾಡಿ ಸತ್ತವರಿಗೆ ಯಾವುದೇ ಪರಿಹಾರ ಕೊಡುವುದಿಲ್ಲ’ – ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಹಾರ : ಮದ್ಯಪಾನ ಮಾಡಿ ಸತ್ತವರಿಗೆ ಯಾವುದೇ ಪರಿಹಾರ ಕೊಡುವುದಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ನಿತೀಶ್ ಕುಮಾರ್, ‘ನಾವು ಮನವಿ ಮಾಡುತ್ತಲೇ ಇರುತ್ತೇವೆ. ಇನ್ನಾದರೂ ಜನರು ಮದ್ಯಪಾನ ಮಾಡಬಾರದು ಅಂತಾ ಅಲರ್ಟ್ ಆಗಬೇಕು. ಕುಡಿತವು ನಿಮಗೆ ಒಳ್ಳೆಯದಲ್ಲ. ಮದ್ಯಪಾನ ಮಾಡಿದರೆ ಸಾಯುತ್ತೀರಾ’ ಎಂದಿದ್ದಾರೆ.

ಇದನ್ನೂ ಓದಿ:  ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ವಿವಾದಾತ್ಮಕ ಹೇಳಿಕೆ- ನನ್ನ ಮಾತಲ್ಲಿ ಸತ್ಯಾಂಶವಿದೆ ಎಂದ ಡಿಕೆಶಿ

ಬಿಹಾರವನ್ನ ಮದ್ಯ ಮುಕ್ತ ರಾಜ್ಯ ಅಂತಾನೆ ಕರೀತಾರೆ. ಆದ್ರೀಗ, ಅದೇ ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 40 ಮಂದಿ ಸಾವನ್ನಪ್ಪಿದ್ದಾರೆ. ಬಿಹಾರದ ಸರಾನ್​​ ಜಿಲ್ಲೆಯಲ್ಲಿ ದುರಂತ ಸಂಭವಿಸಿದ್ದು, ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಸಂದರ್ಭದಲ್ಲಿ ನೀಡಿದ ಹೇಳಿಕೆಯನ್ನು ಕೂಡಾ ಬಿಜೆಪಿ ವಿರೋಧಿಸಿದೆ. ‘ಜೋ ಪೀಯೋಗಾ, ವೋ ಮರೇಗಾ’ ಅಂದರೆ ಯಾರು ಕುಡಿಯುತ್ತಾರೋ ಅವರು ಸಾಯುತ್ತಾರೆ. ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ನಕಲಿ ಮದ್ಯದಿಂದಾಗಿ ಆಗುತ್ತಿರುವ ಪ್ರಾಣಹಾನಿಗೆ ಸಂಬಂಧಿಸಿ ರಾಜ್ಯಸಭೆ ಮತ್ತು ಬಿಹಾರ ವಿಧಾನಸಭೆಯಲ್ಲೂ ದೊಡ್ಡ ಕೋಲಾಹಲವೇ ನಡೆದಿದೆ. ಮದ್ಯ ಮಾರಾಟ ನಿಷೇಧವನ್ನ ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ ಎಂದು ಬಿಜೆಪಿ ನಾಯಕರು ನಿತೀಶ್ ಕುಮಾರ್​ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಬಿಹಾರ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ನಿತೀಶ್, ‘ಮದ್ಯ ನಿಷೇಧ ಕಾನೂನು ಜಾರಿಯಾಗೋದಕ್ಕಿಂತ ಮೊದಲೂ ಕೂಡ ಜನರು ಸಾಯುತ್ತಿದ್ರು. ದೇಶದಲ್ಲಿ ಕ್ರೈಂ ತಡೆಗಟ್ಟೋ ನಿಟ್ಟಿನಲ್ಲಿ ಕೂಡ ಕಾನೂನು ಜಾರಿಯಾಗಿದೆ. ಅದರೂ ಕೂಡ ಹತ್ಯೆಗಳಾಗ್ತಿವೆ’ ಅಂತಾ ಹೇಳಿಕೆ ಕೊಟ್ರು. ಮದ್ಯಮಾರಾಟ ನಿಷೇಧದ ಬಳಿಕ ಬಿಹಾರದಲ್ಲಿ ಕಳ್ಳಭಟ್ಟಿ, ನಕಲಿ ಮದ್ಯ ಮಾರಾಟ ಹೆಚ್ಚಾಗಿದೆ.

suddiyaana