ಇಲ್ಲಿ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆಯೇ ಹೆಚ್ಚು! – ಮೂಷಿಕನ ಕಾಟಕ್ಕೆ ಕಂಗಾಲಾದ ಬ್ರಿಟಿಷರು!

ಇಲ್ಲಿ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆಯೇ ಹೆಚ್ಚು! – ಮೂಷಿಕನ ಕಾಟಕ್ಕೆ ಕಂಗಾಲಾದ ಬ್ರಿಟಿಷರು!

ಕಸದ ರಾಶಿ, ಸಂದಿಗಳಲ್ಲಿ ಇಲಿಗಳು ಇದ್ದೇ ಇರುತ್ತವೆ. ಎಲ್ಲಾದರೂ ಚೂರು ಜಾಗ ಸಿಕ್ಕಿದ್ರೆ ಸಾಕು ಅಲ್ಲಿ ಹೋಗಿ ಸೇರಿಕೊಂಡು ಜನರ ನಿದ್ದೆಗೆಡಿಸುತ್ತವೆ. ಎಲ್ಲಿ ಹೋದ್ರೂ ಇಲಿಗಳ ಕಾಟ ಇದ್ದೇ ಇರುತ್ತವೆ. ಭಾರತದ ಅನೇಕ ಮನೆಗಳಲ್ಲಿ ಇಲಿಗಳ ಕಾಟ ಸರ್ವೇ ಸಾಮಾನ್ಯ ಅಂತಾ ಹೇಳಬಹುದು. ಆದ್ರೆ ಯುರೋಪಿಯನ್ ದೇಶಗಳನ್ನು ಸ್ವಚ್ಛ ದೇಶಗಳೆಂದು ಪರಿಗಣಿಸಲಾಗಿದೆ. ಅದರಲ್ಲಿ ಬ್ರಿಟನ್ ಕೂಡ ಒಂದಾಗಿದೆ. ಆದರೆ ಈಗ ಬ್ರಿಟನ್‌ ಇಲಿಗಳ ಸಂಖ್ಯೆ ಹೆಚ್ಚಾಗಿದ್ದು, ಸದ್ಯ ಇಲ್ಲಿನ ಸ್ವಚ್ಛತೆಯನ್ನೇ ಪ್ರಶ್ನಿಸುವಂತಾಗಿದೆ.

ಇದನ್ನೂ ಓದಿ: ಬಲೂಚಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿದ ಇರಾನ್‌! – ದಾಳಿ ಬೆನ್ನಲ್ಲೇ ಬೆದರಿಕೆ ಹಾಕಿದ ಪಾಕ್!

ಹೌದು, ಬ್ರಿಟನ್‌ನಲ್ಲಿ ದಿನದಿಂದ ದಿನಕ್ಕೆ ಇಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳ ಕಾಟಕ್ಕೆ ಜನರು ರೋಸಿಹೋಗಿದ್ದಾರೆ. ಇಲ್ಲಿರುವ ಇಲಿಗಳು ಸಾಮಾನ್ಯ ಇಲಿಗಳಂತಿಲ್ಲ, ಬದಲಾಗಿ ಗಾತ್ರದಲ್ಲಿ ಅವುಗಳು ದೊಡ್ಡದಾಗಿವೆ. ಏಕಾಏಕಿ ಇಲಿಗಳ ಕಾಟ ಹೆಚ್ಚಾದ ಕಾರಣ ಬ್ರಿಟಿಷರು ಕಂಗಾಲಾಗಿದ್ದಾರೆ. ಇಲ್ಲಿನ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆಯೇ ಹೆಚ್ಚಾಗಿದೆ. ಬ್ರಿಟನ್‌ನಲ್ಲಿ ಬರೊಬ್ಬರಿ 25 ಕೋಟಿಗೆ ಇಲಿಗಳ ಸಂಖ್ಯೆ ತಲುಪಿದೆ. ಏಕಾಏಕಿ ಇಷ್ಟೊಂದು ಇಲಿಗಳು ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಇಲಿಗಳ ಹೆಚ್ಚಳಕ್ಕೆ ಕಾರಣವೇನು?

ಸಮಯಕ್ಕೆ ಸರಿಯಾಗಿ ಕಸದ ತೊಟ್ಟಿಗಳ ಸಂಗ್ರಹ ವಿಳಂಬವೇ ಇಲಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದ ಇಲಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಇಲಿಗಳು ಈಗ ಬ್ರಿಟನ್‌ನ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಬ್ರಿಟಿಷ್ ಪೆಸ್ಟ್ ಕಂಟ್ರೋಲ್ ಅಸೋಸಿಯೇಷನ್ ಪ್ರಕಾರ, ಕಳೆದ 90 ದಿನಗಳಲ್ಲಿ ಈ ಸಮಸ್ಯೆಗಳನ್ನು ಎದುರಿಸಲು ಸಹಾಯ ಪಡೆಯುವವರ ಸಂಖ್ಯೆಯು ಹೆಚ್ಚಾಗಿದೆ.

ಬ್ರಿಟನ್‌ನಲ್ಲಿ ಸುಮಾರು 25 ಕೋಟಿ ಇಲಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಇದೀಗ ಚಳಿಯಿಂದಾಗಿ ಇಲಿಗಳು ಮನೆಗಳ ಒಳಗೆ ನುಗ್ಗಲು ಆರಂಭಿಸಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.  ಈ ಸಂಬಂಧ BPCA ಯ ತಾಂತ್ರಿಕ ವ್ಯವಸ್ಥಾಪಕಿ ನಟಾಲಿ ಬಂಗಯ್ ಪ್ರತಿಕ್ರಿಯಿಸಿ,  ಚಳಿಗಾಲದಲ್ಲಿ ಇಲಿಗಳ ಹಾವಳಿ ಹೆಚ್ಚಾಗುವುದು ಸಾಮಾನ್ಯ, ಇಲಿಗಳು ಆಹಾರ ಪದಾರ್ಥಗಳನ್ನು ಹುಡುಕಿಕೊಂಡು ಬೆಚ್ಚಗಿನ ಮತ್ತು ಶುಷ್ಕ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತವೆ. ಹಬ್ಬ ಹರಿದಿನಗಳಲ್ಲಿ ಕಸದ ತೊಟ್ಟಿಗಳನ್ನು ಸಂಗ್ರಹಿಸದಿರುವುದು. ಹಾಗೂ ಕೆಲವೊಮ್ಮೆ ಡಸ್ಟ್‌ಬಿನ್‌ಗಳು ಸಂಪೂರ್ಣ ಭರ್ತಿಯಾದ ಬಳಿಕ ಜನರು ತಮ್ಮ ಕಸವನ್ನು ಅದರ ಬದಿಯಲ್ಲಿ ಇಡುತ್ತಾರೆ ಇದು ಕೂಡ ಕಾರಣವಾಗುತ್ತದೆ ಎಂದು ಹೇಳಿದರು.

Shwetha M