ಕಳ್ಳತನಕ್ಕೆ ಬಂದು ಅಡುಗೆ ಕೋಣೆಯೊಳಗೆ ನಿದ್ರೆಗೆ ಜಾರಿದ ಭೂಪ!  

ಕಳ್ಳತನಕ್ಕೆ ಬಂದು ಅಡುಗೆ ಕೋಣೆಯೊಳಗೆ ನಿದ್ರೆಗೆ ಜಾರಿದ ಭೂಪ!  

ಇಲ್ಲೊಬ್ಬ ಭೂಪ ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ್ದಾನೆ. ಕದಿಯಲು ಏನಾದರೂ ಸಿಗುತ್ತಾ ಅಂತಾ ಹುಡುಕಿಕೊಂಡು ಅಡುಗೆ ಮನೆಗೆ ಹೋಗಿ, ಅಲ್ಲಿಯೇ ನಿದ್ದೆಗೆ ಜಾರಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಳ್ಳರು ಮನೆ ನುಗ್ಗಿದರೆ ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿಕೊಂಡು ಹೋಗುತ್ತಾರೆ. ಕದಿಯುವ ವೇಳೆ ಏನು ಸಿಕ್ಕಿಲ್ಲ ಅಂತಾ ಕಣ್ಣ ಮುಂದೆ ಏನು ಇರುತ್ತೋ ಅದನ್ನೆಲ್ಲಾ ಹೊತ್ತುಕೊಂಡು ಹೋಗುತ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ ಕದಿಯಲು ಹೋಗಿ ಅಲ್ಲೇ ಮಲಗಿದ್ದಾನೆ. ಮನೆಯ ಕುಟುಂಬ ಸದಸ್ಯರು ಆರೋಪಿ ಅಡುಗೆಮನೆಯಲ್ಲಿ ಮಲಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದರು. ಕಡೆಗೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಜೊತೆ ಸುತ್ತಾಡಲು ಸಂಬಂಧಿಕರ ಮನೆಯಲ್ಲೇ ಕಳ್ಳತನ – ಶೋಕಿಲಾಲ ಸಿಕ್ಕಿಬಿದ್ದಿದ್ದು ಹೇಗೆ?

ದಯಾಳಪುರಂ ನಿವಾಸಿ ದೀಪಕ್ ಶುಕ್ಲಾ ತನ್ನ ಇಬ್ಬರು ಸಹಚರರೊಂದಿಗೆ ಕಳ್ಳತನಕ್ಕಾಗಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಕದಿಯಲು ಬಂದ ವೇಳೆ ಕುಡಿದಿದ್ದ ಶುಕ್ಲಾ, ನಶೆಯ ಭರದಲ್ಲಿ ಅಡುಗೆಮನೆಯಲ್ಲಿ ನಿದ್ರೆಗೆ ಜಾರಿದ್ದಾನೆ. ಆದರೆ ಇತರ ಇಬ್ಬರು ಸಹಚರರು ಮಾತ್ರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.

ವರದಿಗಳ ಪ್ರಕಾರ, ಮನೆಯ ಮಾಲೀಕರು, ಇತರ ಕುಟುಂಬ ಸದಸ್ಯರೊಂದಿಗೆ, ಇತ್ತೀಚೆಗೆ ನಿಧನರಾದ ತಮ್ಮ ಹೆಂಡತಿಯ ಅಂತಿಮ ವಿಧಿಗಳಿಗಾಗಿ ತಮ್ಮ ಊರಿಗೆ ಹೋಗಿದ್ದರು. ತನ್ನ ಅನುಪಸ್ಥಿತಿಯಲ್ಲಿ ಮನೆಯನ್ನು ಪರಿಶೀಲಿಸುವಂತೆ ಅವರು ತನ್ನ ಸೋದರಳಿಯನನ್ನು ಕೇಳಿದ್ದಾರೆ. ಸೋದರಳಿಯ ಮನೆಯನ್ನು ಪರಿಶೀಲಿಸಲು ಹೋದ ವೇಳೆ ಅಡುಗೆಮನೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಲಗಿರುವುದು ಕಂಡುಬಂದಿದೆ. ತಕ್ಷಣ  ಅವರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.  ಅವರು ಮನೆಗೆ ಬಂದಾಗ 1.5 ಲಕ್ಷ ರೂ.ಗಿಂತ ಹೆಚ್ಚು ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಸದ್ಯ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

suddiyaana