ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ – ದುಡ್ಡು ದೋಚಿದವರು ಮನೆ ಒಡತಿಗೆ ಗೊತ್ತಿದ್ದವರೇನಾ?

ನಟ ದರ್ಶನ್ ಜೈಲು ಸೇರಿದ್ದಾರೆ. ಡಿ ಬಾಸ್ ಪತ್ನಿ ವಿಜಯಲಕ್ಷ್ಮೀ ಗಂಡನ ಚಿಂತೆಯಲ್ಲಿದ್ದಾರೆ. ಜೈಲು, ಮನೆ, ಲಾಯರ್, ಮಗನ ಸ್ಕೂಲ್, ಬೇರೆ ಬೇರೆ ಕೆಲಸದ ಜವಾಬ್ದಾರಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿಭಾಯಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಟನ ಪತ್ನಿಗೆ ಸಹಾಯ ಮಾಡೋದು ಹೋಗಲಿ ಬಿಡಿ, ಅವರ ಮನೆಯನ್ನೇ ದೋಚಿದ್ದಾರೆ ಖದೀಮರು.
ಇದನ್ನೂ ಓದಿ: ಜೈಲಿನಲ್ಲಿ ವಾಕಿಂಗ್ ಶುರುಮಾಡಿದ ನಟ ದರ್ಶನ್! – ಕಂಡೀಷನ್ ಅಪ್ಲೈ.. ದಾಸನ ಮೇಲೆ ಪೊಲೀಸರ ನಿಗಾ!
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಈ ನಡುವೆ ಅವರ ಪತ್ನಿ ವಿಜಯಲಕ್ಷ್ಮೀ ಅವರ ಮನೆಯಲ್ಲಿ 3 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ ಖದೀಮ ಕಳ್ಳರು. ವಿಜಯಲಕ್ಷ್ಮೀ ಮ್ಯಾನೇಜರ್ ನಾಗರಾಜ್ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ದಾಖಲು ಮಾಡಿದ್ದಾರೆ. ವಿಜಯಲಕ್ಷ್ಮೀ ಮನೆಯಲ್ಲಿ 3 ಲಕ್ಷ ರೂಪಾಯಿ ಕಳ್ಳತನದ ಬಗ್ಗೆ ಕೆಲ ವಿಚಾರಗಳು ಬಹಿರಂಗವಾಗಿದೆ.
ವಿಜಯಲಕ್ಷ್ಮೀ ಅವರು ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಅವರ ಮನೆಯಿಂದ 3 ಲಕ್ಷ ರೂಪಾಯಿ ಕದ್ದುಕೊಂಡು ಹೋಗಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದ್ದು, ಖದೀಮರಿಗಾಗಿ ಹುಡುಕಾಟ ಮುಂದುವರೆದಿದೆ. ಇನ್ನೊಂದೆಡೆ ಮನೆ ಕೆಲಸದವರ ಮೇಲೆ ಅನುಮಾನ ಇದೆ ಎಂದು ಪೊಲೀಸರ ಬಳಿ ವಿಜಯಲಕ್ಷ್ಮೀ ಹೇಳಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೆಪ್ಟೆಂಬರ್ 4 ರಂದು ಮೈಸೂರಿಗೆ ತೆರಳಿದ್ದರು. ಮನೆಯ ವ್ಯಾಡ್ರೂಬ್ ಕಾಟನ್ ಬಾಕ್ಸ್ನಲ್ಲಿ ಹಣ ತೆಗೆದುಕೊಡಲು ಹೇಳಿದ್ದರು. ಮ್ಯಾನೇಜರ್ ಸ್ವಲ್ಪ ಹಣ ತೆಗೆದು ಕೊಟ್ಟು ಉಳಿದ ಹಣ ಅಲ್ಲೇ ಇಟ್ಟಿದ್ದರಂತೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅದೇ ದಿನ ಮೈಸೂರಿಗೆ ತೆರಳಿದ್ದರು. ಮನೆಯ ಬೀಗವನ್ನ ತಾಯಿಗೆ ಕೊಟ್ಟು ಮ್ಯಾನೇಜರ್ ಕೆಲಸದ ಮೇಲೆ ಹೊರಗೆ ಹೋಗಿದ್ರಂತೆ. ಸೆಪ್ಟೆಂಬರ್ 7ರಂದು ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಸೆಪ್ಟೆಂಬರ್ 8 ರಂದು ವ್ಯಾಡ್ರೂಬ್ ನಲ್ಲಿ ಹಣ ನೋಡಿದಾಗ ಹಣ ಕಾಣಿಸಿಲ್ಲ. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ಎಲ್ಲಾ ಕಡೆ ಹುಡುಕಾಡಿದ್ರು ಹಣ ಸಿಕ್ಕಿಲ್ಲ ಎನ್ನಲಾಗ್ತಿದೆ.

ನೋಡಿರಿ

