ATMನಲ್ಲಿ ಹಣ ಡ್ರಾ ಮಾಡಲು ಹೋದ ಯುವತಿ ಫುಲ್ ಶಾಕ್! – ಡ್ರಾ ಮಾಡಿದ್ದು 5,000 .. ಬಂದಿದ್ದು 4040 ರೂಪಾಯಿ!
ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಯುವತಿಗೆ ಬಿಗ್ ಶಾಕ್ ಎದುರಾಗಿದೆ. 500 ರೂಪಾಯಿ ನೋಟಿನ ಬದಲು 20 ರೂಪಾಯಿಯ ನೋಟುಗಳು ಎಟಿಎಂನಲ್ಲಿ ಹಣ ಬಂದಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 20,000 ರೂಪಾಯಿ ಬೆಲೆಯ ಟಿಕೆಟ್ 8 ಲಕ್ಷಕ್ಕೆ ಸೇಲ್ – ಭಾರತ, ಪಾಕಿಸ್ತಾನ ನಡುವೆ ಪಂದ್ಯದ ಟಿಕೆಟ್ ಗಳು ಭರ್ಜರಿ ಡಿಮ್ಯಾಂಡ್
ಈ ಘಟನೆ ರಾಮನಗರದ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ. ಖಾಸಗಿ ಶಾಲಾ ಶಿಕ್ಷಕರೊಬ್ಬರು ಬಸ್ ನಿಲ್ದಾಣದ ಬಳಿ ಇಂಡಿಯಾ 1 ಎಟಿಎಂ ಇದೆ. ಈ ಎಟಿಎಂಗೆ ಹೋದ ಯುವತಿ 5 ಸಾವಿರ ರೂಪಾಯಿ ಹಣ ಬಿಡಿಸಿಕೊಳ್ಳಲು ಮುಂದಾಗಿದ್ದಾರೆ. ATMನಲ್ಲಿ 4 ಸಾವಿರ ರೂಪಾಯಿ 500 ನೋಟುಗಳ ಬಂದಿದೆ. ಉಳಿದ 1 ಸಾವಿರಕ್ಕೆ 500 ರೂ. ನೋಟಿನ ಬದಲಿಗೆ 20 ರೂ ನೋಟುಗಳು ಬಂದಿದೆ.
ನಾಲ್ಕು ಸಾವಿರ ಹಣದ ಜೊತೆಗೆ ಉಳಿದ 1 ಸಾವಿರ ರೂಪಾಯಿಗೆ ಕೇವಲ ಎರಡು 20 ರೂಪಾಯಿ ಮುಖಬೆಲೆಯ ನೋಟುಗಳು ಬಂದಿದೆ. ಅಂದ್ರೆ 5000 ರೂಪಾಯಿ ಬದಲಿಗೆ 4040 ರೂಪಾಯಿ ಡ್ರಾ ಆಗಿದೆ. 500ರ ಬದಲಿಗೆ 20 ರೂ. ನೋಟ್ ನೋಡಿ ಗ್ರಾಕರು ಶಾಕ್ ಆಗಿದ್ದಾರೆ.
ಎಟಿಎಂನಲ್ಲಿ ಈ ಯಡವಟ್ಟು ಆದ ಬಳಿಕ ಸಾರ್ವಜನಿಕರು ತಮ್ಮ ಎದುರಿಗೆ ATM ಬಾಕ್ಸ್ ಓಪನ್ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಹಣ ಸರಿಪಡಿಸುವಂತೆ ಎಟಿಎಂ ಸಿಬ್ಬಂದಿಗೆ ಪೊಲೀಸರು ಸೂಚನೆ ನೀಡಿದ್ದು, ATM ಸಿಬ್ಬಂದಿಗಳು ಹಣ ವಾಪಸ್ ಮಾಡುವುದಾಗಿ ಹೇಳಿದ್ದಾರೆ.