ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಪ್ರೇಯಸಿ! – ಯುವತಿಗೆ ಸರ್ಕಾರದಿಂದ ಸಿಕ್ತು ₹83 ಲಕ್ಷ ಬಹುಮಾನ!

ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಪ್ರೇಯಸಿ! – ಯುವತಿಗೆ ಸರ್ಕಾರದಿಂದ ಸಿಕ್ತು ₹83 ಲಕ್ಷ ಬಹುಮಾನ!

ಮೋಸ ಮಾಡಿದ ಪ್ರಿಯಕರನ ವಿರುದ್ಧ ಯುವತಿಯೊಬ್ಬಳು ಸೇಡು ತೀರಿಸಿಕೊಂಡಿದ್ದಾಳೆ. ಅದಕ್ಕಾಗಿ ಸರ್ಕಾರ ಅವಳಿಗೆ ಭರ್ಜರಿ ಬಹುಮಾನವನ್ನೂ ಕೊಟ್ಟಿದೆ. ಅಷ್ಟಕ್ಕೂ ಆಕೆ ಮಾಡಿದ್ದೇನು? ಸರ್ಕಾರ ಯಾಕೆ ಬಹುಮಾನ ಕೊಡಬೇಕು ಅನ್ನೋದ್ರ ಮಾಹಿತಿ ಇಲ್ಲಿದೆ..

ಪ್ರೀತಿಗಾಗಿ ಪ್ರಾಣ ಕೊಡುವ ಪ್ರೇಮಿಗಳ ನಡುವೆ ಮೋಸ ಮಾಡುವವರೂ ಇದ್ದಾರೆ. ಇಂಥಾ ಟೈಮಲ್ಲಿ ಕೆಲವ್ರು ತಿಂಗಳುಗಟ್ಟಲೆ ಕೊರಗುತ್ತಾರೆ. ಇನ್ನೂ ಕೆಲವ್ರು ಹಳೆಯದನ್ನೆಲ್ಲಾ ಮರೆತು ಹೊಸ ಜೀವನ ಶುರು ಮಾಡ್ತಾರೆ. ಇನ್ನೊಂದೆಡೆ ಮೋಸ ಮಾಡಿದ ಪ್ರೇಮಿಯ ಮೇಲೆ ಸೇಡು ತೀರಿಸಿಕೊಳ್ಳುವವರೂ ಇದ್ದಾರೆ. ಇದೀಗ ಅಂತದ್ದೇ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.

ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ದಿನಕ್ಕೊಂದು ಕಂಟಕ! – ಪಶ್ಚಿಮ ಬಂಗಾಳದಲ್ಲಿ ರಾಹುಲ್‌ ಗಾಂಧಿ ಸಭೆಗೆ ಅನುಮತಿ ಇಲ್ಲ!

ಇವಾ ಲುಯಿ ಎಂಬ ಯುವತಿಯೊಬ್ಬಳು ತಾನು ಪ್ರೀತಿ ಮಾಡಿದ ಹುಡುಗನಿಂದ ಮೋಸ ಹೋಗಿದ್ದಾಳೆ. ಲುಯಿ ಜೊತೆ ಪ್ರೀತಿಯಲ್ಲಿ ಇರುವಾಗಲೇ ಆತ ಬೇರೆ ಹುಡುಗಿಯೊಂದಿಗೆ ಲವ್​ನಲ್ಲಿ ಇದ್ದ. ಹೀಗಾಗಿ ತನಗೆ ಮೋಸ ಮಾಡಿದ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಮಾಸ್ಟರ್​​​ ಪ್ಲಾನ್​​ ಮಾಡಿದ್ದಾಳೆ. ಸದಾ ಸೋಶಿಯಲ್​​ ಮೀಡಿಯಾಗಳಲ್ಲಿ ಆಕ್ಟೀವ್​ ಇರ್ತಿದ್ದ ಲುಯಿ ತನ್ನ ಪ್ರಿಯಕರನ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಿದ್ದಳು. ಇತ್ತೀಚೆಗಷ್ಟೇ ತನಗೆ ತನ್ನ ಹುಡುಗನಿಂದ ಮೋಸ ಆಗಿರುವ ವಿಷಯವನ್ನು ಹೇಳಿಕೊಂಡಿದ್ದಾಳೆ. ಅಲ್ಲದೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.

ತನ್ನ ಪ್ರೇಮಿ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಹೇಗೆ ತಪ್ಪಿಸಿಕೊಂಡಿದ್ದ ಎಂಬುದರ ಕುರಿತು ವಿಡಿಯೋ ಹಂಚಿಕೊಂಡಿದ್ದಾಳೆ. ಇದಲ್ಲದೇ ತೆರಿಗೆ ವಂಚನೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದಾಳೆ. ತನಿಖೆಯ ನಂತರ ಯುವತಿ ಹೇಳಿರುವುದು ನಿಜ ಎಂದು ತಿಳಿದಿದೆ. ಇಂತಹ ಸುಳಿವು ನೀಡಿದ್ದಕ್ಕೆ ಸರ್ಕಾರ ಆಕೆಗೆ 83 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡಿದ್ದಾರೆ. ಅಮೆರಿಕಾದ ಕಾನೂನಿನ ಅಡಿಯಲ್ಲಿ, ತೆರಿಗೆ ವಂಚಕರ ವಿವರಗಳನ್ನು ಬಹಿರಂಗಪಡಿಸುವವರಿಗೆ ಸರ್ಕಾರವು ಭಾರಿ ಬಹುಮಾನಗಳನ್ನು ನೀಡುತ್ತದೆ. ಆದಾಗ್ಯೂ, ತೆರಿಗೆ ವಂಚನೆ ಎರಡು ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿದ್ದರೆ ಮಾತ್ರ ವಿವರಗಳನ್ನು ನೀಡಿದವರಿಗೆ ಇಂತಹ ಬಂಪರ್ ಆಫರ್ ಗಳು ಸಿಗುತ್ತವೆ. ತೆರಿಗೆ ವಂಚಕರಿಂದ ವಸೂಲಿಯಾಗುವ ಮೊತ್ತದ ಶೇಕಡಾ 15ರಿಂದ 30ರಷ್ಟು ಹಣವನ್ನು ಮಾಹಿತಿದಾರರಿಗೆ ನೀಡಲಾಗುತ್ತದೆ. ಈ ಮೂಲಕ ಲುಯಿ ಸರ್ಕಾರಕ್ಕೆ ನೀಡಿ ತನ್ನ ಮಾಜಿ ಪ್ರಿಯಕರಿನಿಗೆ ಸಖತ್ತಾಗೇ ಪಾಠ ಕಲಿಸಿದ್ದಾಳೆ.

Shwetha M