ಬಾವಿಯಲ್ಲಿದ್ದವು ಮೂರು ಹೆಬ್ಬಾವುಗಳು – ರಕ್ಷಣೆಗೆ ಹೋದ ಯುವಕನ ಪಾಡು ಏನಾಯ್ತು ನೋಡಿ!

ಬಾವಿಯಲ್ಲಿದ್ದವು ಮೂರು ಹೆಬ್ಬಾವುಗಳು – ರಕ್ಷಣೆಗೆ ಹೋದ ಯುವಕನ ಪಾಡು ಏನಾಯ್ತು ನೋಡಿ!

ಪ್ರಕೃತಿಯಲ್ಲಿ ಲಕ್ಷಾಂತರ ಬಗೆಯ ಜೀವಸಂಕುಲವಿದೆ. ಅದ್ರಲ್ಲೂ ಸಾವಿರಾರು ಬಗೆಯ ಹಾವುಗಳಿವೆ. ಕಾಡು, ನಾಡು ಎಲ್ಲಾ ಕಡೆಯೂ ಹಾವುಗಳು ವಾಸಿಸೋದು ಸಾಮಾನ್ಯವಾಗಿದೆ. ಅದ್ರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಹೆಬ್ಬಾವು ಕಾಣಿಸಿಕೊಳ್ಳೋದು ಕೂಡ ಸಾಮಾನ್ಯ ಆಗೋಗಿದೆ. ಕೆಲವೊಮ್ಮೆ ಮನೆಗಳಲ್ಲೂ ಹಾವುಗಳು ಪ್ರತ್ಯಕ್ಷವಾಗಿಬಿಡುತ್ತವೆ.

ಇದನ್ನೂ ಓದಿ : ಅಯ್ಯಯ್ಯೋ ಹೊರಗೆ ಬರೋಕೆ ಆಗ್ತಿಲ್ಲ – ಬಾಗಿಲಲ್ಲಿ ಸಿಲುಕಿ ಗಜರಾಜನ ಒದ್ದಾಟ

ದೊಡ್ಡ ದೊಡ್ಡ ಹೆಬ್ಬಾವುಗಳು ದೊಡ್ಡ ಪ್ರಾಣಿಗಳನ್ನು ತಿನ್ನಲು ಸಮರ್ಥವಾಗಿದ್ದು, ಮನುಷ್ಯರನ್ನೇ ಬಿಡುವುದಿಲ್ಲ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಾವಿಯಲ್ಲಿರುವ ಮೂರು ಹೆಬ್ಬಾವನ್ನು ಉರಗ ತಜ್ಞರು ರಕ್ಷಣೆ ಮಾಡಿದ್ದಾರೆ. ಸರ್ಪ ಮಿತ್ರ ಆಕಾಶ್ ಯಾಧವ್ ಅವರ ತಂಡವು ಬಾವಿಯಲ್ಲಿದ್ದ ಮೂರು ಹೆಬ್ಬಾವನ್ನು ರಕ್ಷಣೆ ಮಾಡಿದ್ದು, ಈ ವಿಡಿಯೋವನ್ನು ಸರ್ಪ ಮಿತ್ರ ಆಕಾಶ್ ಯಾಧವ್ ಯೂ ಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಲಾಗಿದ್ದು, ಏಳೂವರೆ ಕೋಟಿಗೂ ಅಧಿಕ ವ್ಯೂಸ್ ಕಂಡಿದೆ. ಈ ರಕ್ಷಣೆಯ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.

ಸೃಷ್ಟಿಯ ಸಮತೋಲನದಲ್ಲಿ ಈ ಹಾವುಗಳ ಪಾತ್ರ ಅಗಾಧವಾದದ್ದು. ಜಗತ್ತಿನಲ್ಲಿ ಸರಿಸುಮಾರು 2,900ಕ್ಕೂ ಹೆಚ್ಚು ಜಾತಿಯ ಹಾವುಗಳು ವಾಸಿಸುತ್ತಿವೆ. ಈ ಹಾವುಗಳಲ್ಲಿ ಎರಡು ಬಗೆಯ ಹಾವುಗಳನ್ನು ಕಾಣಬಹುದು. ಒಂದು ವಿಷಕಾರಿ ಹಾವುಗಳು, ಎರಡನೇಯದಾಗಿ ಅಲ್ಪ ವಿಷಕಾರಿ ಹಾವುಗಳು. ವಿಷಕಾರಿ ಹಾವುಗಳು ಮನುಷ್ಯರಿಗೆ ಕಚ್ಚಿದ್ದಲ್ಲಿ ಸಾವು ಸಂಭವಿಸಬಹುದು. ಆದರೆ ಅಲ್ಪ ವಿಷಕಾರಿ ಹಾವುಗಳ ವಿಷ ಮನುಷ್ಯರಿಗೆ ಕಚ್ಚಿದರೆ ಯಾವುದೇ ತೊಂದರೆಯಾಗುವುದಿಲ್ಲ.

ಹಾವುಗಳು ಮನುಷ್ಯರಿಗೆ ಕಚ್ಚುವುದು ಅವುಗಳಿಗೆ ಭಯವಾದಾಗ ಮತ್ತು ಅವುಗಳಿಗೆ ನಮ್ಮಿಂದ ಅಪಾಯವಿದೆ ಎಂದಾಗ ಮಾತ್ರ. ಆದರೆ ಕೆಲವೊಮ್ಮೆ ಕಂಡೊಡನೆ ಹೊಡೆದು ಸಾಯಿಸಿ ಬಿಡುತ್ತೇವೆ. ಅದರಲ್ಲಿಯೂ ಈ ಹೆಬ್ಬಾವನ್ನು ಕಂಡರೆ ಕೇಳುವುದೇ ಬೇಡ. ದಪ್ಪನೆಯ ಹಾಗೂ ಅತಿ ಉದ್ದನೆಯ ಹಾವು ನೋಡಲು ಭಯ ಹುಟ್ಟಿಸುವಂತೆ ಇದ್ದರೂ ತೊಂದರೆ ಮಾಡುವುದಿಲ್ಲ. ಈ ಹೆಬ್ಬಾವುಗಳು ಪಾಪದ ಜೀವಿಗಳು.

ಹೆಬ್ಬಾವುಗಳು ಹಸಿವು ಆದಾಗ ಮಾತ್ರ ಸಣ್ಣ ಪ್ರಾಣಿಗಳಿಂದ ಹಿಡಿದು ದೊಡ್ಡ ಜೀವಿಗಳವರೆಗೂ ಬೇಟೆಯಾಡುತ್ತವೆ. ಅದಲ್ಲದೇ ಸೈಲೆಂಟಾಗಿ ಇದ್ದು ಬೇಟೆಯ ಸಮಯದಲ್ಲಿ ಅಲ್ಲೇ ಇರುವ ಜೀವಿಯನ್ನು ಗಬಕ್ಕನೇ ನುಂಗಿ ಮುಗಿಸುತ್ತದೆ. ಅದಲ್ಲದೇ ಹೆಚ್ಚಿನ ಹೆಬ್ಬಾವುಗಳು ಮರಗಳ ಮೇಲೆ ವಾಸಿಸುತ್ತವೆ. ಹೀಗಾಗಿ ಮರಗಳ ಮೇಲೆ ವಾಸಿಸುವ ಪ್ರಾಣಿಗಳನ್ನು ಸಹ ಅಲ್ಲಿಯೇ ಬೇಟೆಯಾಡುತ್ತವೆ. ಸಣ್ಣ ಹೆಬ್ಬಾವುಗಳು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು, ಪಕ್ಷಿಗಳು, ಮೀನುಗಳು ತಿಂದು ಬದುಕುತ್ತವೆ.

suddiyaana