ಮನುಷ್ಯತ್ವ ಮರೆತ ಮಹಿಳೆ – ನೆಲಕ್ಕೆ ಬಡಿದು ನಾಯಿ ಮರಿಯನ್ನ ಕೊಂದ ಸೇವಕಿ!

ಈಗೀಗ ಶ್ವಾನಗಳನ್ನ ತಮ್ಮ ಮಕ್ಕಳಂತೆ ಸಾಕುವವರು ಅನೇಕರಿದ್ದಾರೆ. ಅದನ್ನ ನೋಡಿಕೊಳ್ಳಲೆಂದೇ ಕೆಲಸದವರನ್ನ ನೇಮಿಸುವವರು ಇದ್ದಾರೆ. ರಾಜ್ಯ ರಾಜಧಾನಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮನೆ ಕೆಲಸದಾಕೆ ನಾಯಿ ಮರಿಯನ್ನ ನೆಲಕ್ಕೆ ಬಡಿದು ಭೀಕರವಾಗಿ ಹತ್ಯೆ ನಡೆಸಿದ್ದಾಳೆ.
ಇದನ್ನೂ ಓದಿ: ಸಂಪುಟ ಪುನಾರಚನೆಗಾಗಿ ನ.15ಕ್ಕೆ ಸಿಎಂ ದೆಹಲಿಗೆ! – ರಾಹುಲ್, ಖರ್ಗೆ ಜೊತೆ ಮಾತ್ನಾಡ್ತಿನಿ ಅಂದಿದ್ಯಾಕೆ ಸಿದ್ದರಾಮಯ್ಯ?
ಈ ಘಟನೆ ಬೆಂಗಳೂರಿನ ಬಾಗಲೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಕ್ಟೋಬರ್ 31ರಂದು ನಡೆದಿದೆ. ಮಹಿಳೆಯ ಅಮಾನವೀಯ ಕೃತ್ಯ ಲಿಫ್ಟ್‌ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪುಷ್ಪಲತಾ ಎಂಬ ಮಹಿಳೆ ಈ ಕೃತ್ಯವೆಸಗಿದ್ದಾಳೆ. ಘಟನೆ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಪುಷ್ಪಾಲತಾಳನ್ನು ನಾಯಿ ನೋಡಿಕೊಳ್ಳಲೆಂದೇ ನೇಮಿಸಲಾಗಿತ್ತು. ಆದ್ರೆ ಇತ್ತೀಚೆಗೆ ಆಕೆ ನಾಯಿಯನ್ನ ಲಿಫ್ಟ್‌ನಲ್ಲಿ ನೆಲಕ್ಕೆ ಬಡಿದು ಕೊಂಡಿದ್ದಾಳೆ. ನಾಯಿ ಸತ್ತ ಬಳಿಕ ಅದು ಲಿಫ್ಟ್‌ನಿಂದ ಹೊರಗೆ ಹೋಗಿ ಬಿದ್ದಿದೆ. ಇದ್ರಿಂದಾಗಿ ಸಾವನ್ನಪ್ಪಿದೆ ಎಂದು ಪುಷ್ಪಾಲತಾ ಕಥೆ ಕಟ್ಟಿದ್ದಳು. ಈ ಬಗ್ಗೆ ಶ್ವಾನದ ಮಾಲಕಿ ಸೆಕ್ಯೂರಿಟಿ ಬಳಿ ವಿಚಾರಿಸಿದಾಗ ಮಾಹಿತಿ ದೊರಕಿದೆ. ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೋಡಿರಿ

