ಹಸಿವಾದ್ರೆ ಮನೆಯ ಗೋಡೆಯೇ ಇವಳಿಗೆ ಆಹಾರ -ಮನೆಯ ಅರ್ಧ ಗೋಡೆಯನ್ನೇ ತಿಂದ ಮಹಿಳೆ!
ಒಬ್ಬೊಬ್ಬರ ಊಟದ ಸ್ಟೈಲ್ ಒಂದೊಂದು ಥರ ಇರುತ್ತೆ. ಆದ್ರೆ ಈ ಮಹಿಳೆ ತಿನ್ನೋದನ್ನ ನೋಡಿದ್ರೆ ನಿಮಗೇ ಶಾಕ್ ಆಗುತ್ತೆ. ತರಕಾರಿ, ಹಣ್ಣು, ಸೊಪ್ಪ, ಬೇಳೆ ಸೇರಿದಂತೆ ಆಹಾರ ಧಾನ್ಯ ತಿನ್ನೋದನ್ನು ಬಿಟ್ಟು ಮನೆಯ ಗೋಡೆಯನ್ನೇ ತಿನ್ನುತ್ತಾಳೆ.
ಇದನ್ನೂ ಓದಿ : ಕಲ್ಪವೃಕ್ಷ ತೆಂಗು ಬೆಳೆಗಾರರಿಗೆ ಸಾಲು ಸಾಲು ಸಂಕಷ್ಟ – ಕೊಬ್ಬರಿಯಿಂದ ಇಷ್ಟೆಲ್ಲಾ ಉಪಯೋಗ ಇದ್ರೂ ಸಿಗ್ತಿಲ್ಲ ಲಾಭ
ವೆಜ್, ನಾನ್ವೆಜ್ ಅಂತಾ ಜನ ಇಷ್ಟ ಪಟ್ಟು ತಿಂತಾರೆ. ಆದ್ರೆ ಈಕೆ ಮಾತ್ರ ಹಸಿವಾಯ್ತು ಅಂದ್ರೆ ತನ್ನ ಮನೆಯ ಗೋಡೆ ಕಡೆ ಓಡ್ತಾಳೆ. ಯಾಕಂದ್ರೆ ಇವಳ ಆಹಾರವೇ ಮನೆಯ ಗೋಡೆ. ಹಲವು ವರ್ಷಗಳಿಂದಲೂ ಗೋಡೆಯನ್ನೇ ತಿಂದು ಬದುಕುತ್ತಿದ್ದು, ಈಗಾಗಲೇ ಮನೆಯ ಅರ್ಧದಷ್ಟು ಗೋಡೆಯನ್ನು ತಿಂದಿದ್ದಾಳೆ. ಅಮೆರಿಕದ ಮಿಚಿಗನ್ ನಿವಾಸಿಯಾಗಿರುವ ನಿಕೋಲ್ ಎಂಬಾಕೆಯೇ ಇಂಥಾದ್ದೊಂದು ವಿಚಿತ್ರ ಅಭ್ಯಾಸ ಮಾಡಿಕೊಂಡಿದ್ದಾಳೆ. ಈಕೆಗೆ ಯಾವುದೇ ಚೈನೀಸ್ ಅಥವಾ ಇಟಾಲಿಯನ್ ಆಹಾರ ಇಷ್ಟವಿಲ್ಲವಂತೆ. ತಾನು ಹಸಿವಾದಾಗಲೆಲ್ಲ ಮನೆಯ ಗೋಡೆಯನ್ನೇ ತಿನ್ನುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಳ್ತಾಳೆ. ತನ್ನ ಮನೆ ಸಾಲ್ದು ಅಂತಾ ಅವರಿವರ ಮನೆಗಳ ಗೋಡೆಗಳನ್ನೂ ತಿನ್ನುತ್ತಾಳೆ. ಇದ್ರಿಂದಾಗಿ ನಿಕೋಲ್ಳ ಸಂಬಂಧಿಕರು ದಯವಿಟ್ಟು ನಮ್ಮ ಮನೆಗೆ ಮಾತ್ರ ಬರ್ಬೇಡ ಅಂತಾ ಹೇಳಿದ್ದಾರೆ. ನಿಕೋಲ್ ಈ ಅಭ್ಯಾಸ ಬಿಡದಿದ್ದರೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಬಳಿಕ ಗೋಡೆ ತಿನ್ನೋದನ್ನ ಕಡಿಮೆ ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.