ಮೊಹಮ್ಮದ್ ಶಮಿಯನ್ನ ಬಂಧಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪತ್ನಿ..!

ಟೀಮ್ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿಯನ್ನ ಬಂಧಿಸುವಂತೆ ಪತ್ನಿಯೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಖ್ಯಾತ ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿಗೆ ದೌರ್ಜನ್ಯವೆಸಗಿದ ಪ್ರಕರಣದಡಿ ಶಮಿ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್ ವಾರಂಟ್ ಹೊರಡಿಸಲಾಗಿತ್ತು. ಆದ್ರೆ ಅರೆಸ್ಟ್ ವಾರಂಟ್ ವಿರುದ್ಧ ಶಮಿ ಕೋರ್ಟ್ ಮೆಟ್ಟಿಲೇರಿದ್ದರು. ಕೊಲ್ಕತ್ತಾ ಹೈಕೋರ್ಟ್ ಶಮಿ ವಿರುದ್ಧ ಅರೆಸ್ಟ್ ವಾರಂಟ್ಗೆ ತಡೆ ಒಡ್ಡಿತ್ತು.
ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೆ ಮಳೆರಾಯನ ಅಡ್ಡಿ..!
ಶಮಿ ಪತ್ನಿ ಹಸೀನ್ ಜಹಾನ್, ಕೊಲ್ಕತ್ತಾ ಹೈಕೋರ್ಟ್ ತೀರ್ಪನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಶಮಿ ವಿರುದ್ಧದ ಅರೆಸ್ಟ್ ವಾರಂಟ್ಗೆ ನೀಡಿರುವ ತಡೆಯನ್ನ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ವರದಕ್ಷಿಣೆಗಾಗಿ ಶಮಿ ನಿರಂತರವಾಗಿ ಪೀಡಿಸ್ತಿದ್ರು. ಇತರೆ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ರು. ವೇಶ್ಯೆಗಳ ಬಳಿ ಹೋಗ್ತಿದ್ರು. ಟೀಂ ಇಂಡಿಯಾ ಜೊತೆ ಟೂರ್ ಹೋದ ಸಂದರ್ಭದಲ್ಲಿ ಬಿಸಿಸಿಐ ನಿಗದಿಪಡಿಸಿದ ಹೋಟೆಲ್ ರೂಮ್ಗೆ ಮಹಿಳೆಯರನ್ನ ಕರೆಸಿಕೊಳ್ತಿದ್ರು. ಈಗಲೂ ಅದನ್ನೇ ಮಾಡ್ತಿದ್ದಾರೆ ಅಂತಾ ಶಮಿ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.