ಗಂಡನ ವಿರುದ್ಧವೇ ತಿರುಗಿಬಿದ್ದ ಭಾಗ್ಯ – ಹೆಂಡತಿಯ ಮಾತಿನೇಟಿಗೆ ತಾಂಡವ್ ಗಡಗಡ..!

ಗಂಡನ ವಿರುದ್ಧವೇ ತಿರುಗಿಬಿದ್ದ ಭಾಗ್ಯ – ಹೆಂಡತಿಯ ಮಾತಿನೇಟಿಗೆ ತಾಂಡವ್ ಗಡಗಡ..!

ಅತ್ತೆ ಸೊಸೆ ಹೇಗಿರಬೇಕು ಎಂದರೆ ಭಾಗ್ಯಲಕ್ಷ್ಮೀ ಸೀರಿಯಲ್ ಕುಸುಮಾ ಮತ್ತು ಭಾಗ್ಯಾ ತರ ಇರಬೇಕು ಎಂದು ಹೇಳುತ್ತಿದ್ದಾರೆ ಮಹಿಳಾ ವೀಕ್ಷಕರು. ಈ ಧಾರಾವಾಹಿಯ ಪ್ರತಿಯೊಂದು ಪಾತ್ರವನ್ನೂ ತಮ್ಮ ಜೀವನದ ಪಾತ್ರವೇ ಎಂದು ಅಂದುಕೊಂಡು, ನೋಡುವವರ ಅದರಲ್ಲಿಯೂ ಮಹಿಳಾ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಶ್ರೀಮಂತರ ಮನೆಗೆ ಸೊಸೆಯಾಗಿ ಬಂದಿರುವ ಭಾಗ್ಯ ಅತ್ತೆಗೆ ತಕ್ಕ ಸೊಸೆ ಎನಿಸಿಕೊಂಡಿದ್ದಾಳೆ. ಆದರೆ, ಎರಡು ಮಕ್ಕಳಾದರೂ ಗಂಡನಿಗೆ ಮುದ್ದಿನ ಮಡದಿಯಾಗಿಲ್ಲ. ಹೀಗಿರುವಾಗಲೇ ಈಗ ಭಾಗ್ಯಾಳ ಜೀವನದಲ್ಲಿ ಮತ್ತೊಂದು ಅಧ್ಯಾಯ ಶುರುವಾಗಿದೆ.

ಇದನ್ನೂ ಓದಿ:ಬಾಲಿವುಡ್ ನಟಿ ರೇಖಾ ಲೇಡಿ ಸೆಕ್ರಟರಿ ಜೊತೆ ಸಂಬಂಧ ಹೊಂದಿದ್ದರು! – ಬಯೋಗ್ರಫಿಯಲ್ಲಿದೆ ಇನ್ನೂ ಕೆಲ ರೋಚಕ ರಹಸ್ಯ..!

ಭಾಗ್ಯಾಳನ್ನು ಗಂಡ ತಾತ್ಸಾರ ಮಾಡುವುದು ಅತ್ತೆ ಮಾವನಿಗೆ ಯಾಕೋ ಬೇಜಾರು. ಯಾವಾಗಲೂ ದಡ್ಡಿ ಅಂತಾ ಮಗ ಸೊಸೆಯನ್ನು ಜರಿಯುವುದು ಕೂಡಾ ಅತ್ತೆ ಕುಸುಮಾಗೆ ಸಾಕಾಗಿ ಹೋಗಿತ್ತು. ಹೀಗಾಗಿ ಸೊಸೆ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು ಎಂದು ಅತ್ತೆ ಭಾಗ್ಯಾಳನ್ನು ಓದಿಸಬೇಕು ಅಂತ ಮುಂದಾಗಿದ್ದಾಳೆ. ಆದರೆ, ಭಾಗ್ಯಾ ಓದುವುದು ಗಂಡ ತಾಂಡವ್ ಗೆ ಇಷ್ಟವಿಲ್ಲ. ಹೀಗಾಗಿ ಅತ್ತೆ ಸೊಸೆ ಮಧ್ಯೆ ಜಗಳ ತಂದಿಡುವ ಕೆಲಸ ಮಾಡುತ್ತಲೇ ಇದ್ದಾನೆ. ಆದರೆ, ತಾಂಡವ್ ಪ್ಲಾನ್ ಎಲ್ಲಿಯೂ ವರ್ಕೌಟ್ ಆಗುತ್ತಿಲ್ಲ. ಇದೀಗ ಒಳ್ಳೆಯವನ ರೀತಿ ನಾಟಕವಾಡುತ್ತಿರುವ ತಾಂಡವ್  ಮುಖವಾಡ ಭಾಗ್ಯ ಮುಂದೆ ಬಯಲಾಗಿದೆ. ಗಂಡನ ವಿರುದ್ಧ ಭಾಗ್ಯ ತಿರುಗಿಬಿದ್ದಿದ್ದಾಳೆ. ಇದನ್ನೇ ಪ್ರೇಕ್ಷಕರು ಇಷ್ಟು ದಿನ ಕಾಯುತ್ತಿದ್ದರು. ಸೂಪರ್ ಅನ್ನುತ್ತಿದ್ದಾರೆ. ಈಗ ಮಗಳನ್ನು ಹಾಸ್ಟೆಸ್‌ಗೆ ಕಳಿಸುವ ಕುರಿತು ಭಾಗ್ಯಾ ಗಟ್ಟಿಯಾಗಿಯೇ ಗಂಡನ ಎದುರು ಮಾತನಾಡಿದ್ದಾಳೆ. ಭಾಗ್ಯಳ ಈ ಬದಲಾದ ಅವತಾರ ನೋಡಿ ಅತ್ತೆ- ಮಾವ ಕ್ಷಣಕಾಲ ದಂಗಾಗುತ್ತಾರೆ. ಅದೇನೇ ಇರಲಿ, ಭಾಗ್ಯಾಳಿಗೆ ಗಂಡನ ಬುದ್ದಿ ಗೊತ್ತಾಗಿದೆ. ಗಂಡನ ನಾಟಕವೂ ಬಯಲಾಗಿದೆ. ಭಾಗ್ಯ ಇನ್ನೂ ಗಟ್ಟಿಗಿತ್ತಿಯಾಬೇಕು ಎಂದು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.

suddiyaana