ತಲೆಯೊಳಗೆ ಸಿಲುಕಿದ ಮಚ್ಚು – ರಕ್ತಸ್ರಾವವಾಗಿದ್ದರೂ ಮೊಬೈಲ್ನಲ್ಲಿ ಬ್ಯುಸಿಯಾದ ಯುವಕ..!

ಮುಂಬೈನಲ್ಲಿ ನಡೆದ ಘಟನೆಯೊಂದು ಬೆಚ್ಚಿಬೀಳಿಸಿದೆ. ಯುವಕನೊಬ್ಬ ಆಸ್ಪತ್ರೆಗೆ ಬರುತ್ತಾನೆ. ತಲೆಯಲ್ಲಿ ಮಚ್ಚು ಸೇರಿಕೊಂಡಿದೆ. ಮಚ್ಚು ನೇತಾಡುತ್ತಿದ್ದರೂ ಯುವಕ ಓಡಾಡುತ್ತಿದ್ದಾನೆ. ರಕ್ತ ಸುರಿಯುತ್ತಿದ್ದರೂ ಕೂಡಾ ಮೊಬೈಲ್ನಲ್ಲಿ ಬ್ಯುಸಿಯಿದ್ದಾನೆ.
ಇದನ್ನೂ ಓದಿ:ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಎಫೆಕ್ಟ್! – ಸಿಲಿಕಾನ್ ಸಿಟಿ ಹೋಟೆಲ್ಗಳಲ್ಲಿ ಊಟ, ತಿಂಡಿ ದರ ಹೆಚ್ಚಳ!
ಮುಂಬೈನ ವಿಕ್ರೋಲಿ ಪ್ರದೇಶದಲ್ಲಿ ಯುವಕನೊಬ್ಬನ ವಿಲ್ ಪವರ್ ಅಚ್ಚರಿಮೂಡಿಸಿದೆ. ಇಸ್ಮಾ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ (ಸಿಯಾನ್ ಆಸ್ಪತ್ರೆ) ಯುವಕನೊಬ್ಬ ಬರುತ್ತಾನೆ. ತಾನಾಗಿಯೇ ನಡೆದುಕೊಂಡು ಆಸ್ಪತ್ರೆಗೆ ಬರುತ್ತಾನೆ. ಆಸ್ಪತ್ರೆಯ ಟ್ರಾಮಾ ಐಸಿಯು ಹೊರಗೆ ಕಾಯುತ್ತಿದ್ದಾನೆ. ಆತನನ್ನು ನೋಡಿ ಆಸ್ಪತ್ರೆಯಲ್ಲಿದ್ದವರು ಶಾಕ್ ಆಗುತ್ತಾರೆ. ಯಾಕೆಂದರೆ, ಆತನ ತಲೆಯಲ್ಲಿ ಕುಡುಗೋಲು ಸಿಲುಕಿದೆ. ರಕ್ತ ನೀರಿನಂತೆ ಹರಿಯುತ್ತಿದೆ. ಆದರೂ ಕೂಡಾ ಆತ ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ.
ಮೇ 4, 2026 ರಂದು ಮುಂಜಾನೆ ವಿಕ್ರೋಲಿಯ ಕಣ್ಣಂವರ್ ನಗರದಲ್ಲಿ ಇಸ್ಮಾ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಮಚ್ಚು ಆತನ ತಲೆಯೊಳಗೆ ಆಳವಾಗಿ ಇಳಿದಿತ್ತು. ತಲೆಗೆ ತೀವ್ರ ಗಾಯವಾಗಿದ್ದರೂ ಧೃತಿಗೆಡದ ಇಸ್ಮಾ, ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಗೆ (ಸಿಯಾನ್ ಆಸ್ಪತ್ರೆ) ತಾನಾಗಿಯೇ ನಡೆದುಕೊಂಡು ಬಂದಿದ್ದಾರೆ. ಅತೀವ ರಕ್ತಸ್ರಾವವಾಗುತ್ತಿದ್ದರೂ ಆತ ಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದುದು ವೈದ್ಯಕೀಯ ಸಿಬ್ಬಂದಿಗೂ ಅಚ್ಚರಿ ಮೂಡಿಸಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂಬೈನಲ್ಲಿ ಹೆಚ್ಚುತ್ತಿರುವ ಬೀದಿ ಹಿಂಸಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.ವಿಕ್ರೋಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ನೋಡಿರಿ

