ಕಾವೇರಿ, ಕೃಷ್ಣಾನದಿ ಜೀವ ಜಲ ಆಗಿ ಉಳಿದಿಲ್ಲ – 12 ನದಿಗಳ ನೀರು ಕುಡಿಯಲು ಯೋಗ್ಯವಿಲ್ಲ..!

ಕಾವೇರಿ, ಕೃಷ್ಣಾನದಿ ಜೀವ ಜಲ ಆಗಿ ಉಳಿದಿಲ್ಲ – 12 ನದಿಗಳ ನೀರು ಕುಡಿಯಲು ಯೋಗ್ಯವಿಲ್ಲ..!

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ‌ಮಂಡಳಿ ನೀಡಿರುವ ವರದಿಯೊಂದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಜೀವನದಿ ಕಾವೇರಿ, ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ ನೀರು ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ:ಎಲ್ಲೆಲ್ಲೂ ರಸ್ತೆ ಗುಂಡಿಗಳದ್ದೇ ಕಾರುಬಾರು! – ಹೊಂಡಗಳಿಗೆ ಹೂವಿನ ಅಲಂಕಾರ ಮಾಡಿ ದೀಪ ಬೆಳಗಿದ ಜನ!   

ಕನ್ನಡನಾಡಿನ ಜೀವನದಿ ಕಾವೇರಿ. ಉತ್ತರಕರ್ನಾಟಕದ ಜೀವನಾಡಿ ಕೃಷ್ಣಾನದಿ. ಆದರೆ, ಈ ನದಿಗಳ ನೀರು ಕುಡಿದರೆ ಜೀವಕ್ಕಿಲ್ಲ ಗ್ಯಾರಂಟಿ. ಹೌದು. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ‌ಮಂಡಳಿ ನೀಡಿರುವ ವರದಿಯೊಂದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಜೀವನದಿ ಕಾವೇರಿ, ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ ನೀರು ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿಯಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ 12 ನದಿಗಳ ನೀರನ್ನು 32 ಕಡೆ ಪರೀಕ್ಷೆಗೊಳಪಡಿಸುತ್ತದೆ. ಪ್ರತಿ ತಿಂಗಳು ನದಿಗಳ ನೀರನ್ನು ಪರೀಕ್ಷೆ ನಡೆಸಿ ಅವುಗಳ ವರದಿ ಸಿದ್ಧಪಡಿಸಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ನಡೆಸಲಾದ ಪರೀಕ್ಷಾ ವರದಿಯಂತೆ 12 ನದಿಗಳ ಪೈಕಿ ಯಾವುದೇ ನದಿ ನೀರೂ ನೇರವಾಗಿ ಕುಡಿಯಲು ಬಳಕೆ ಮಾಡದ ಸ್ಥಿತಿ ಇದೆ. ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್‌ ಆಕ್ಸಿಜನ್‌, ಕೋಲಿಫಾರ್ಮ್‌ ಬ್ಯಾಕ್ಟೀರಿಯಾ, ಫೆಕಲ್‌ ಕೋಲಿಫಾರ್ಮ್‌ ಬ್ಯಾಕ್ಟೀರಿಯಾಗಳು ಹೆಚ್ಚಿವೆ. ಹೀಗಾಗಿ 12 ನದಿಗಳ ನೀರಿನಲ್ಲಿ ಯಾವುದೇ ನದಿ ನೀರು ಎ ದರ್ಜೆಗೆ ಸೇರಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 12 ನದಿಗಳ ಪೈಕಿ ನೇತ್ರಾವತಿ ನದಿ ನೀರು ಮಾತ್ರ ಬಿ ದರ್ಜೆಯ ಗುಣಮಟ್ಟ ಹೊಂದಿದೆ ಎಂದು ಹೇಳಲಾಗಿದೆ. ಈ ನೀರನ್ನು ಸ್ನಾನ ಅಥವಾ ಗೃಹ ಬಳಕೆಗೆ ಉಪಯೋಗಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅದನ್ನು ಹೊರತುಪಡಿಸಿ ನೇರವಾಗಿ ಕುಡಿಯಲು ಯೋಗ್ಯವಲ್ಲ. ಉಳಿದಂತೆ 8 ನದಿಗಳ ನೀರು ಸಿ ಮತ್ತು ಮೂರು ನದಿಗಳ ನೀರು ಡಿ ದರ್ಜೆಯ ಗುಣಮಟ್ಟ ಹೊಂದಿವೆ. ಅದರಲ್ಲಿ ಸಿ ದರ್ಜೆ ಹೊಂದಿರುವ ನದಿ ನೀರನ್ನು ಸಂಸ್ಕರಿಸಿ ಬಳಸಬಹುದಾಗಿದ್ದು, ಡಿ ದರ್ಜೆಯ ನೀರನ್ನು ಮೀನುಗಾರಿಕೆ ಸೇರಿ ಇನ್ನಿತರ ಚಟುವಟಿಕೆಗೆ ಬಳಸಬಹುದಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.

ವರದಿಯಲ್ಲಿ ಕೃಷ್ಣಾ ನದಿ ಸಿ ದರ್ಜೆಯಲ್ಲಿ ಗುರುತಿಸಿಕೊಂಡಿರುವುದು ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕದ ಕೃಷ್ಣಾ ತೀರದ ಜನರಿಗೆ ಆತಂಕ ಮೂಡಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಕಲ್ಮಶ ನೀರು, ಜನರು ಬಳಸಿ ಬಿಡುವ ಮಲಿನ ನೀರು, ಚರಂಡಿ ನೀರು ಹಳ್ಳ ಕೊಳ್ಳಗಳ ಮೂಲಕ ಕೃಷ್ಣಾ ನದಿಗೆ ಸೇರ್ಪಡೆಯಾಗುತ್ತಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ, ರಾಯಚೂರು, ಯಾದಗಿರಿ ಜನರ ಜೀವನಾಡಿ ಕೃಷ್ಣಾ ನದಿಯೂ ಕಲುಷಿತವಾಗಿದೆ. ಸ್ವಚ್ಛತೆಯಲ್ಲಿ ಕೃಷ್ಣಾ ನದಿ ಸಿ ದರ್ಜೆಗೆ ಸೇರಿದ್ದು , ಶುದ್ದೀಕರಣ ಮಾಡಿಯೇ ನೀರು ಕುಡಿಯಬೇಕು. ಇಲ್ಲದಿದ್ದರೆ ಅಪಾಯ ಖಚಿತ ಎಂಬುದು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷಾ ವರದಿಯಿಂದ ಗೊತ್ತಾಗಿದೆ. ಬಾಗಲಕೋಟೆ ಜಿಲ್ಲೆಯ 205 ಹಳ್ಳಿಹಳಿಗೆ ಕೃಷ್ಣಾ ನದಿ‌ನೀರು ಜೀವಜಲವಾಗಿದೆ‌. ಈ ಹಳ್ಳಿಗಳ ಜನರ ದಾಹ ನೀಗಿಸುವ ಕೃಷ್ಣಾ ನದಿ ಕಲ್ಮಶವಾಗುತ್ತಿದೆ‌.

ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾಬಲೇಶ್ವರ ವ್ಯಾಪ್ತಿಯಲ್ಲಿ ಹುಟ್ಟುವ ಕೃಷ್ಣಾ ನದಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಮಾರ್ಗವಾಗಿ ಆಂಧ್ರ ಪ್ರದೇಶ ಸೇರುತ್ತದೆ. ಮಹಾರಾಷ್ಟ್ರದಿಂದ ಒಟ್ಟು 1400 ಕಿಮೀ ಹರಿಯುವ ನದಿ ಮಹಾರಾಷ್ಟ್ರದಲ್ಲಿ 272 ಕಿಮೀ, ಕರ್ನಾಟಕದಲ್ಲಿ 483 ಕಿಮೀ ಹರಿಯುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡನೇ ಹಂತದಲ್ಲಿ 6 ಲಕ್ಷ ಹೆಕ್ಟೇರ್ ನೀರಾವರಿ, ಮೂರನೇ ಹಂತದಲ್ಲಿ 15 ಲಕ್ಷ ಎಕರೆಗೆ ನೀರಾವರಿ ಒದಗಿಸುವ ನದಿ ಇದಾಗಿದೆ.

ಯಾವೆಲ್ಲ ನದಿಗಳ ಪರೀಕ್ಷೆ?

ಬಿ ದರ್ಜೆ: ನೇತ್ರಾವತಿಸಿ ದರ್ಜೆ: ಲಕ್ಷ್ಮಣ ತೀರ್ಥ, ತುಂಗ ಭದ್ರಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಕೃಷ್ಣಾ, ಶಿಂಷಾಡಿ ದರ್ಜೆ: ಭೀಮಾ, ಕಾಗಿಣಾ, ಅರ್ಕಾವತಿ

Sulekha