ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ! – ಬೇಸಿಗೆಗೂ ಮುನ್ನವೇ ಶುರುವಾಗಲಿದ್ಯಾ ಕುಡಿಯುವ ನೀರಿಗಾಗಿ ಹಾಹಾಕಾರ?

ರಾಜ್ಯದ ಡ್ಯಾಂಗಳಲ್ಲಿ ನೀರಿನ ಮಟ್ಟ ಭಾರಿ ಕುಸಿತ! – ಬೇಸಿಗೆಗೂ ಮುನ್ನವೇ ಶುರುವಾಗಲಿದ್ಯಾ ಕುಡಿಯುವ ನೀರಿಗಾಗಿ ಹಾಹಾಕಾರ?

ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಈ ವರ್ಷ ಅತೀ ಕಡಿಮೆ ಮಳೆಯಾಗಿದ್ದು, ನೀರಿನ ಅಭಾವ ಎದುರಾಗಿದೆ. ರಾಜ್ಯದಲ್ಲಿನ ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಾರಿ ಇಳಿಕೆಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾರತದ ವಿಮಾನ ಜಲಸಮಾಧಿ!.. 8 ವರ್ಷಗಳ ಮಿಸ್ಟ್ರಿ ರಿವೀಲ್! –  29 ಮಂದಿ ಏನಾದ್ರು?

ಹೌದು, ರಾಜ್ಯದಲ್ಲಿ ಈ ಬಾರಿ ಭಾರಿ ಮಳೆಯ ಕೊರತೆಯಾಗಿದೆ. ರಾಜ್ಯದಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಇಳಿಕೆಯಾಗುತ್ತಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಜಲಾಶಯಗಳ ನೀರಿನ ಮಟ್ಟ 42% ಕುಸಿತಗೊಂಡಿದೆ. ಕಳೆದ ವರ್ಷದ ಜ.11 ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹಾಗೂ ಈ ವರ್ಷದ ನೀರಿನ ಮಟ್ಟದ ಹೋಲಿಕೆ ಮಾಡಿ ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ದಾಖಲೆ ಬಿಡುಗಡೆ ಮಾಡಿದೆ.

ಒಟ್ಟು 895 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ರಾಜ್ಯದ ಜಲಾಶಯಗಳಿಗಿದೆ. ಸದ್ಯ ಈಗ 378 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ ಬರೋಬ್ಬರಿ 619 ಟಿಎಂಸಿ ನೀರಿನ ಸಂಗ್ರಹವಿತ್ತು. ಕೆಲವೊಂದು ಜಲಾಶಯಗಳು 69% ರಷ್ಟು ನೀರಿನ ಕೊರತೆಯನ್ನು ಎದುರಿಸುತ್ತಿದೆ ಎಂದು ಹೇಳಿದೆ.

ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ 95.19 ಟಿಎಂಸಿ ನೀರಿದ್ದರೆ ಈ ಬಾರಿ 52.98 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಎಆರ್‌ಎಸ್‌ನಲ್ಲಿ ಕಳೆದ ವರ್ಷ 41.13 ಟಿಎಂಸಿ ನೀರಿದ್ದರೆ ಈ ಬಾರಿ 19.81 ಟಿಂಎಂಸಿ ನೀರು ಸಂಗ್ರಹವಾಗಿದೆ.

ಆಲಮಟ್ಟಿಯಲ್ಲಿ 2023ರಲ್ಲಿ87.23 ಟಿಎಂಸಿ ಇದ್ದರೆ ಈ ಬಾರಿ 54.76 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಾಭದ್ರ ಜಲಾಶಯದಲ್ಲಿ ಕಳೆದ ವರ್ಷ 67.75 ಟಿಎಂಸಿ ನೀರಿದ್ದರೆ ಈ ಬಾರಿ 10.20 ಟಿಎಂಸಿ ನೀರು ಸಂಗ್ರಹವಾಗಿದೆ.

Shwetha M